
ಮಾಡುವ ವಿಧಾನ: ಮಿಕ್ಸಿ ಜಾರಿನಲ್ಲಿ ಗೋಡಂಬಿ, ಟೊಮೆಟೋ, ಗಸ ಗಸೆ ಸ್ವಲ್ಪ ನೀರನ್ನ ಹಾಕಿ ಗ್ರೈಂಡ್ ಮಾಡಿಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ಎಣ್ಣೆಯನ್ನ ಹಾಕಿ ಅದಕ್ಕೆ ಚಕ್ಕೆ, ದಾಲ್ಚಿನ್ನಿ ಎಲೆ, ಏಲಕ್ಕಿ, ಜೀರಿಗೆ, ಕಸೂರಿ ಮೇತಿ ಹಾಕಿ ಹುರಿದುಕೊಳ್ಳಿ. ಇದಕ್ಕೆ ಕತ್ತರಿಸಿದ ಈರುಳ್ಳಿ, ಸ್ವಲ್ಪ ಅರಿಶಿಣ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹೊಂಬಣ್ಣ ಬರುವವರೆಗೂ ಹುರಿದುಕೊಳ್ಳಿ. ಇದಕ್ಕೆ ಗರಂ ಮಸಾಲಾ, ಕಾರದ ಪುಡಿ, ದನಿಯಾ ಪುಡಿಯನ್ನ ಹಾಕಿ. ಇದಕ್ಕೆ ರುಬ್ಬಿಕೊಂಡ ಮಿಶ್ರಣವನ್ನ ಸೇರಿಸಿ ಹಸಿ ವಾಸನೆ ಹೋಗುವವರೆಗೂ ಹುರಿಯಿರಿ. ಇದಕ್ಕೆ ಬೆಚ್ಚನೆಯ ನೀರಿನಲ್ಲಿ ಕೆಲವೇ ನಿಮಿಷಗಳ ಕಾಲ ಬೇಯಿಸಿಟ್ಟ ಸೋಯಾ ಚಂಕ್ಸ್ಗಳನ್ನ ಹಾಕಿ ರುಚಿಗೆ ತಕ್ಕಷ್ಟು ಉಪ್ಪನ್ನ ಹಾಕಿ ಐದರಿಂದ ಹತ್ತು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ.

