alex Certify ಗರ್ಭಿಣಿಯರು ಸೇವಿಸಬೇಕು ಪೌಷ್ಟಿಂಕಾಂಶಯುಕ್ತ ಆಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಿಣಿಯರು ಸೇವಿಸಬೇಕು ಪೌಷ್ಟಿಂಕಾಂಶಯುಕ್ತ ಆಹಾರ

ಗರ್ಭಿಣಿಯರು ತಮ್ಮ ಆಹಾರದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಇಲ್ಲವಾದರೆ ಅದರ ಪರಿಣಾಮ ಮಗುವಿನ ಮೇಲಾಗುತ್ತದೆ. ಹಾಗಾಗಿ ಗರ್ಭಿಣಿಯರು ಪೌಷ್ಟಿಂಕಾಂಶಯುಕ್ತ ಆಹಾರಗಳನ್ನು ಸೇವಿಸಬೇಕು. ಆದರೆ ಇಂತಹ ಆಹಾರ ಪದಾರ್ಥಗಳಿಂದ ದೂರವಿರಬೇಕು.

*ಹಾಲು ಮತ್ತು ಚೀಸ್ : ಹಸಿ ಹಾಲು ಮತ್ತು ಚೀಸ್ ಗಳಲ್ಲಿ ಬ್ಯಾಕ್ಟೀರಿಯಾಗಳು ಇರುತ್ತದೆ. ಈ ಬ್ಯಾಕ್ಟೀರಿಯಾಗಳು ಮಗುವಿನ ಬೆಳವಣೆಗೆಯ ಮೇಲೆ ಪರಿಣಾಮ ಬೀರುತ್ತದೆ.

*ಕಚ್ಚಾ ಮೊಳಕೆ ಕಾಳುಗಳು: ಮೊಳಕೆ ಕಾಳುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಗರ್ಭಿಣಿಯರು ಮಾತ್ರ ಮೊಳಕೆಕಾಳುಗಳನ್ನು ಹಸಿಯಾಗಿ ಸೇವಿಸಬಾರದು. ಇದರಲ್ಲಿರುವ ಬ್ಯಾಕ್ಟೀರಿಯಾಗಳು ಆರೋಗ್ಯವನ್ನು ಹಾಳು ಮಾಡಬಹುದು.

*ಹಸಿ ಮೊಟ್ಟೆಗಳು : ಮೊಟ್ಟೆಗಳನ್ನು ಸರಿಯಾಗಿ ಬೇಯಿಸಿ ತಿನ್ನಬೇಕು. ಇಲ್ಲವಾದರೆ ಹಸಿ ಮೊಟ್ಟೆ ಮತ್ತು ಅರ್ಧ ಬೆಂದ ಮೊಟ್ಟೆಯಲ್ಲಿ ಬ್ಯಾಕ್ಟೀರಿಯಾಗಳಿರುವುದರಿಂದ ಇದನ್ನು ಸೇವಿಸಿದರೆ ಜ್ವರ, ವಾಂತಿ, ಅತಿಸಾರ, ಹೊಟ್ಟೆ ಸೆಳೆತ, ವಾಕರಿಕೆ ಉಂಟಾಗಬಹುದು.

*ಹಸಿ ಮೀನು : ಹಸಿ ಮೀನುಗಳು ಸೋಂಕಿಗೆ ಕಾರಣವಾಗಬಹುದು. ಹಾಗಾಗಿ ಗರ್ಭಿಣಿಯರು ಮೀನುಗಳನ್ನು ಸರಿಯಾಗಿ ಬೇಯಿಸಿ ತಿನ್ನಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...