ಕೆಲವು ಮಹಿಳೆಯರು ಚರ್ಮದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅವರಿಗೆ ಮುಖದ ಚರ್ಮದ ಬಗ್ಗೆ ಕಾಳಜಿ ವಹಿಸಲು ಸಮಯವಿರುವುದಿಲ್ಲ. ಹಾಗಾಗಿ ಅಂತಹ ಮಹಿಳೆಯರಿಗೆ ತಮ್ಮ ಮುಖದ ಚರ್ಮಕ್ಕೆ ಆರೈಕೆಗಳನ್ನು ಮಾಡಲು ರಾತ್ರಿಯ ವೇಳೆ ಈ ಫೇಸ್ ಪ್ಯಾಕ್ ಗಳನ್ನು ಬಳಸಿ ನಿಮ್ಮ ಚರ್ಮದ ಮತ್ತು ಮುಖದ ಅಂದವನ್ನು ಹೆಚ್ಚಿಸಿ.
*1 ಟೊಮೆಟೊ ಪೇಸ್ಟ್ ಗೆ 1 ಚಮಚ ಜೇನುತುಪ್ಪ ಮತ್ತು 2 ಚಮಚ ಮೊಸರನ್ನು ಮಿಕ್ಸ್ ಮಾಡಿ ಈ ಫೇಸ್ ಪ್ಯಾಕ್ ಅನ್ನು ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚಿ. ಮರುದಿನ ಬೆಳಿಗ್ಗೆ ಇದನ್ನು ತಣ್ಣೀರಿನಲ್ಲಿ ವಾಶ್ ಮಾಡಿ. ಇದು ಮುಖದ ಟ್ಯಾನ್ ಗಳನ್ನು ನಿವಾರಣೆ ಮಾಡಿ ಮುಖ ಹೊಳೆಯುವಂತೆ ಮಾಡುತ್ತದೆ.
*4-5 ಬಾದಾಮಿಯನ್ನು ಹಾಲಿನಲ್ಲಿ ನೆನೆಸಿ ಬಳಿಕ ಅದರಿಂದ ಪೇಸ್ಟ್ ತಯಾರಿಸಿ ಅದನ್ನು ರಾತ್ರಿ ಮುಖಕ್ಕೆ ಹಚ್ಚಿ ಬೆಳಿಗ್ಗೆ ವಾಶ್ ಮಾಡಿ. ಬಾದಾಮಿಯಲ್ಲಿ ವಿಟಮಿನ್ ಇ ಅಧಿಕವಾಗಿರುವುದರಿಂದ ಇದರಿಂದ ನಯವಾದ, ಮೃದುವಾದ ತ್ವಚೆ ನಿಮ್ಮದಾಗುತ್ತದೆ.