HomeRecipiesಮನೆಯಲ್ಲಿಯೇ ಸುಲಭವಾಗಿ ಮಾಡಿ ಸವಿಯಿರಿ ಗ್ರೀನ್ ಚಟ್ನಿ

ಮನೆಯಲ್ಲಿಯೇ ಸುಲಭವಾಗಿ ಮಾಡಿ ಸವಿಯಿರಿ ಗ್ರೀನ್ ಚಟ್ನಿ

ಸ್ಯಾಂಡ್ ವಿಚ್ ಗೆ ಗ್ರೀನ್ ಚಟ್ನಿ ಸಖತ್ ಆಗಿರುತ್ತದೆ. ಇದನ್ನು ಸುಲಭವಾಗಿ ಮನೆಯಲ್ಲಿಯೇ ಮಾಡಬಹುದು. ಮಾಡುವ ವಿಧಾನ ಕೂಡ ಸುಲಭವಿದೆ.

ಬೇಕಾಗುವ ಸಾಮಗ್ರಿಗಳು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೊತ್ತಂಬರಿ ಸೊಪ್ಪು – 1 ಕಪ್, ಪುದೀನಾ – 1/2 ಕಪ್, ಪಾಲಕ್ – 1/2 ಕಪ್, ಹಸಿಮೆಣಸು – 6, ಬ್ರೆಡ್ – 2, ಲಿಂಬೆಹಣ್ಣಿನ ರಸ – 2 ಟೇಬಲ್ ಸ್ಪೂನ್, ಉಪ್ಪು – ರುಚಿಗೆ ತಕ್ಕಷ್ಟು, ನೀರು – ಸ್ವಲ್ಪ.

ಮಾಡುವ ವಿಧಾನ:

ಒಂದು ಮಿಕ್ಸಿ ಜಾರಿಗೆ ಕೊತ್ತಂಬರಿಸೊಪ್ಪು, ಪುದೀನಾ, ಪಾಲಕ್, ಹಸಿಮೆಣಸು, ಬ್ರೆಡ್, ಲಿಂಬೆಹಣ್ಣಿನ ರಸ, ಉಪ್ಪು, ಸ್ವಲ್ಪ ನೀರು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ. ಇದನ್ನು ಒಂದು ಗಾಳಿಯಾಡದ ಡಬ್ಬಕ್ಕೆ ಹಾಕಿ ಫ್ರಿಡ್ಜ್ ನಲ್ಲಿಟ್ಟು ಬೇಕಾದಾಗ ಉಪಯೋಗಿಸಬಹುದು. ಇದು ಸ್ಯಾಂಡ್ ವಿಚ್, ಪಕೋಡಾ ಜತೆ ನೆಂಚಿಕೊಳ್ಳಲು ಚೆನ್ನಾಗಿರುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular