ಭಾರತ ದೇಗುಲಗಳ ನಗರಿ ಎಂಬುದೇನೋ ನಿಜ. ಅದರೆ ವಿಶ್ವದ ಅತಿ ದೊಡ್ಡ ದೇವಾಲಯ ಇರುವುದು ಭಾರತದಲ್ಲಿ ಅಲ್ಲ ಎಂಬುದು ನಿಮಗೆ ತಿಳಿದಿದೆಯೇ…?
ವಿಶ್ವದ ಅತಿ ದೊಡ್ಡ ದೇವಾಲಯ ಇರುವುದು ಕಾಂಬೋಡಿಯಾದಲ್ಲಿ. ಅದುವೇ ಅಂಕೋರ್ ವಾಟ್ ಮಂದಿರ. ಈ ದೇಗುಲ ಹಿಂದೂ ಹಾಗೂ ಬೌದ್ಧ ಧರ್ಮೀಯರ ನೆಚ್ಚಿನ ಧಾರ್ಮಿಕ ಸ್ಥಳ ಎಂದೇ ಪರಿಗಣಿತವಾಗಿದೆ.
ಇದು ಕಾಂಬೋಡಿಯಾದ ರಾಜಧಾನಿ ನೋಮ್ ಪೆನ್ಹ್ನಿಂದ 206 ಕಿ.ಮೀ. ದೂರದಲ್ಲಿದೆ. ವರ್ಷಕ್ಕೆ ಇಲ್ಲಿಗೆ ಕನಿಷ್ಠ ಎಂದರೂ 20 ಲಕ್ಷ ಮಂದಿ ಭೇಟಿ ನೀಡುತ್ತಾರೆ. ವಿಶ್ವದ ಅತಿ ದೊಡ್ಡ ಈ ಭವ್ಯ ಮಂದಿರ ಮಿಕಾಂಗ್ ನದಿ ದಂಡೆಯಲ್ಲಿ ನಿರ್ಮಾಣವಾಗಿದೆ.
12ನೆಯ ಶತಮಾನದಲ್ಲಿ ರಾಜಾ ಸೂರ್ಯವರ್ಮನ್ ಇದನ್ನು ನಿರ್ಮಿಸಿದ ಎನ್ನಲಾಗಿದೆ. ಇದು 500 ಎಕರೆ ವಿಸ್ತೀರ್ಣದಲ್ಲಿದೆ. ಇದು ಖಮೇರ್ ವಂಶದ ವಾಸ್ತುಶಿಲ್ಪವನ್ನು ಬಿಂಬಿಸುತ್ತದೆ. 1992ರಲ್ಲಿ ಯುನೆಸ್ಕೋ ಈ ಮಂದಿರವನ್ನು ವಿಶ್ವ ಪಾರಂಪರಿಕ ಸ್ಥಳಗಳ ಪಟ್ಟಿಗೆ ಸೇರಿಸಿದೆ.