HomeBeautyಇಲ್ಲಿದೆ ನೀಳ ಕೂದಲಿಗಾಗಿ ಬೆಸ್ಟ್ ‌ಹೇರ್ ಪ್ಯಾಕ್

ಇಲ್ಲಿದೆ ನೀಳ ಕೂದಲಿಗಾಗಿ ಬೆಸ್ಟ್ ‌ಹೇರ್ ಪ್ಯಾಕ್

ಕೂದಲುಗಳ ಮಧ್ಯೆ ಬಿರುಕು ಉಂಟಾದಾಗ ಕೂದಲು ಬೆಳೆಯುವುದಿಲ್ಲ. ಮನೆಯಲ್ಲಿ ಸಿಗುವ ನೈಸರ್ಗಿಕ ವಸ್ತುಗಳನ್ನು ಬಳಸಿ ಕೂದಲ ಬೆಳವಣಿಗೆ ಮಾಡಿಕೊಳ್ಳುವುದು ಹೇಗೆಂದು ನೋಡೋಣ…..

ಅಲೋವೆರಾವನ್ನು ಚೆನ್ನಾಗಿ ತೊಳೆದು ಮುಳ್ಳನ್ನು ಕತ್ತರಿಸಿ ತೆಗೆದು ಚಿಕ್ಕ ತುಂಡುಗಳಾಗಿ ಮಾಡಿ. ಅಲೋವೆರಾದಲ್ಲಿ ವಿಟಮಿನ್ ಇ ಇದ್ದು, ಉದ್ದ ಮತ್ತು ದಟ್ಟವಾಗಿ ಕೂದಲು ಬೆಳೆಯುವುದಕ್ಕೆ ಸಹಾಯ ಮಾಡುತ್ತದೆ ಮತ್ತು ಹಾನಿಯಾದ ಕೂದಲನ್ನು ಪೋಷಿಸುತ್ತದೆ. ಈರುಳ್ಳಿಯಲ್ಲಿ ಸಲ್ಫರ್ ಅಂಶ ಹೇರಳವಾಗಿದೆ. ಕೂದಲು ಬೆಳೆಯಲು ಇದು ಸಹಾಯ ಮಾಡುತ್ತದೆ.

ಈರುಳ್ಳಿ ಜೊತೆಗೆ ಆಲೂಗಡ್ಡೆ ಸೇರಿಸಿ ಚೆನ್ನಾಗಿ ರುಬ್ಬಿ. ಸ್ನಾನ ಮಾಡುವ ಮುಂಚೆ ಈ ಮಿಶ್ರಣವನ್ನು ಚೆನ್ನಾಗಿ ತಲೆಯ ಬುಡದ ಕೆಳಗೆ ಹಚ್ಚಬೇಕು. ಸ್ವಲ್ಪ ಹೊತ್ತು ಹಾಗೇ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಈ ಮಿಶ್ರಣವನ್ನು ವಾರದಲ್ಲಿ ಮೂರು ಬಾರಿ ಮಾಡಿ. ಇದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular