ಉದ್ದವಾದ ಕಣ್ರೆಪ್ಪೆ ಮುಖದ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಕಣ್ರೆಪ್ಪೆ ಹೆಚ್ಚಿಸಲು ಹಾಗೂ ಇರುವ ಕೂದಲು ಉದುರದಂತೆ ನೋಡಿಕೊಳ್ಳಲು ಒಂದಷ್ಟು ಸಲಹೆಗಳು ಇಲ್ಲಿವೆ.
ಮೊದಲಿಗೆ ಸುಮ್ಮನೆ ಕಣ್ಣು ಉಜ್ಜುವ ಅಭ್ಯಾಸವಿದ್ದರೆ ಬಿಟ್ಟುಬಿಡಿ. ನಿದ್ದೆ ಬರುವಾಗ, ಕಣ್ಣು ತುರಿಸಿದ ಅನುಭವವಾದಾಗ ಕಣ್ಣು ತಿಕ್ಕಿಕೊಂಡರೆ ಕೂದಲುಗಳು ಉದುರುತ್ತವೆ. ರಾತ್ರಿ ಮಲಗುವ ಮುನ್ನ ಹರಳೆಣ್ಣೆಯಿಂದ ರೆಪ್ಪೆಗೆ ಮಸಾಜ್ ಮಾಡಿದರೆ ಕಣ್ರೆಪ್ಪೆ ಅಂದವಾಗಿ ಆಕರ್ಷಕವಾಗಿ ಕಾಣುತ್ತದೆ.
ವಾಟರ್ ಪ್ರೂಫ್ ಮೇಕಪ್ ಬಳಸದಿರಿ. ಮಸ್ಕರಾ ಅಂಟಿ ಹಿಡಿಯುವುದು ಮಾತ್ರವಲ್ಲದೇ, ತೆಗೆಯುವಾಗ ಕಣ್ರೆಪ್ಪೆಯೂ ಜೊತೆಗೆ ಬರುತ್ತದೆ. ಇದರಿಂದ ಕಣ್ರೆಪ್ಪೆಗಳ ಸಂಖ್ಯೆ ಕಡಿಮೆಯಾಗುತ್ತದೆ.
ಮೇಕಪ್ ತೆಗೆಯುವಾಗ ತೆಂಗಿನೆಣ್ಣೆ ಅಥವಾ ಅಲೀವ್ ಎಣ್ಣೆ ಉಪಯೋಗಿಸಿ. ಇದನ್ನು ಕಣ್ಣಿಗೆ ಸಂಪೂರ್ಣವಾಗಿ ಮೆಲ್ಲನೆ ಹಚ್ಚಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಇದರಿಂದ ಮೇಕಪ್ ಸುಲಭವಾಗಿ ತೆಗೆಯಬಹುದು. ಕಣ್ರೆಪ್ಪೆಗೂ ಮಸಾಜ್ ಸಿಗುತ್ತದೆ.
ರಾತ್ರಿ ಮಲಗುವ ಮುನ್ನ ಕಣ್ರೆಪ್ಪೆಗಳಿಗೆ ತೆಂಗಿನಣ್ಣೆ ಹಚ್ಚಿ, ಇಲ್ಲವಾದರೆ ಸ್ನಾನಕ್ಕೆ ಮೊದಲು ಅರ್ಧ ಗಂಟೆ ಹಚ್ಚಿ. ಇದರಿಂದ ಕಣ್ರೆಪ್ಪೆ ಬೆಳೆಯುತ್ತದೆ.