alex Certify ಸುಲಭವಾಗಿ ಮಾಡಿ ರುಚಿಯಾದ ರಾಜಸ್ತಾನಿ ಕಢಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಲಭವಾಗಿ ಮಾಡಿ ರುಚಿಯಾದ ರಾಜಸ್ತಾನಿ ಕಢಿ

ಮೊಸರು, ಕಡಲೇ ಹಿಟ್ಟು ಇದ್ದರೆ ರುಚಿಕರವಾದ ರಾಜಸ್ತಾನಿ ಕಢಿ ಮಾಡಿಕೊಂಡು ಮನೆಮಂದಿಯೆಲ್ಲಾ ಸವಿಯಬಹುದು. ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ಹುಳಿ ಮೊಸರು. ಇದು ಅನ್ನ, ಚಪಾತಿ, ಜೀರಾ ರೈಸ್ ಜತೆ ತಿನ್ನುವುದಕ್ಕೆ ಸಕತ್ ಆಗಿರುತ್ತದೆ.

ಬೇಕಾಗುವ ಸಾಮಗ್ರಿಗಳು:

1 ಕಪ್- ಹುಳಿ ಮೊಸರು, 2 ಕಪ್-ನೀರು, 4 ಟೇಬಲ್ ಸ್ಪೂನ್-ಕಡಲೆಹಿಟ್ಟು, ½ ಟೀ ಸ್ಪೂನ್-ಅರಿಶಿನ, ಉಪ್ಪು-ರುಚಿಗೆ ತಕ್ಕಷ್ಟು, 2 ಟೇಬಲ್ ಸ್ಪೂನ್-ತುಪ್ಪ, ½ ಟೀ ಸ್ಪೂನ್-ಸಾಸಿವೆ, ¼ ಟೀ ಸ್ಪೂನ್-ಮೆಂತೆಕಾಳು, ½ ಟೀ ಸ್ಪೂನ್-ಜೀರಿಗೆ, 1-ಪಲಾವ್ ಎಲೆ, ಚಿಟಿಕೆ-ಇಂಗು, ½ ಟೀ ಸ್ಪೂನ್- ಖಾರದಪುಡಿ, 2 ಒಣಮೆಣಸು.

ಮಾಡುವ ವಿಧಾನ:

ಒಂದು ಬೌಲ್ ಗೆ ಮೊಸರು, ನೀರು, ಕಡಲೆಹಿಟ್ಟು, ಅರಿಶಿನ, ಉಪ್ಪು ಹಾಕಿ ಗಂಟಿಲ್ಲದಂತೆ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಗ್ಯಾಸ್ ನಲ್ಲಿ 15 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಿ. ತಳ ಹತ್ತದಂತೆ ಆಗಾಗ ಕೈಯಾಡಿಸುತ್ತಾ ಇರಿ. ಇದು ತುಂಬಾ ದಪ್ಪಗಾಗದಂತೆ ನೋಡಿಕೊಳ್ಳಿ.

ನಂತರ ಒಂದು ಒಗ್ಗರಣೆ ಪಾತ್ರೆಯಲ್ಲಿ ತುಪ್ಪ ಹಾಕಿ ಅದು ಬಿಸಿಯಾಗುತ್ತಲೆ ಸಾಸಿವೆ, ಪಲಾವ್ ಎಲೆ, ಮೆಂತೆಕಾಳು, ಜೀರಿಗೆ, ಇಂಗು, ಖಾರದಪುಡಿ, ಒಣಮೆಣಸು ಹಾಕಿ. ಅದು ಬಿಸಿಯಾಗುತ್ತಲೆ ಈ ಒಗ್ಗರಣೆಯನ್ನು ಕಡಲೆಹಿಟ್ಟಿನ ಮಿಶ್ರಣಕ್ಕೆ ಹಾಕಿ. ಚೆನ್ನಾಗಿ ತಿರುವಿ. ಇದು ಬಿಸಿ ಅನ್ನಕ್ಕೆ, ಚಪಾತಿ ಜತೆ ತುಂಬಾ ಚೆನ್ನಾಗಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...