alex Certify ತೂಕ ಇಳಿಸಿಕೊಳ್ಳಲು ಇಲ್ಲಿದೆ ಸುಲಭ ‘ಉಪಾಯ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೂಕ ಇಳಿಸಿಕೊಳ್ಳಲು ಇಲ್ಲಿದೆ ಸುಲಭ ‘ಉಪಾಯ’

ತೂಕ ಹೆಚ್ಚಾಗುತ್ತದೆ ಎಂಬ ಭಯದಿಂದ ಈಗ ಹೆಚ್ಚಿನವರು ಸಲಾಡ್ ಮೊರೆ ಹೋಗುತ್ತಾರೆ. ಸಂಜೆ ಸಮಯದಲ್ಲಿ ಸಲಾಡ್ ಮಾಡಿಕೊಂಡು ತಿನ್ನುವುದರಿಂದ ಜಂಕ್ ಫುಡ್ ತಿನ್ನಬೇಕು ಅನಿಸುವುದಿಲ್ಲ. ಸುಲಭವಾಗಿ ಮಾಡುವ ಸೌತೆಕಾಯಿ ಸಲಾಡ್ ಇಲ್ಲಿದೆ ನೋಡಿ.

ಬೇಕಾಗುವ ಸಾಮಗ್ರಿಗಳು:

¾ ಕಪ್- ಮಯೋನಿಸ್, ¼ ಕಪ್-ಕ್ರೀಂ, 1 ಟೇಬಲ್ ಸ್ಪೂನ್-ಕೆಂಪು ವಿನೇಗರ್, 1 ಟೀ ಸ್ಪೂನ್-ಆಲಿವ್ ಎಣ್ಣೆ, 2-ಎಸಳು ಬೆಳ್ಳುಳ್ಳಿ, ½ ಟೀ ಸ್ಪೂನ್-ಉಪ್ಪು, ¼ ಟೀ ಸ್ಪೂನ್-ಕಾಳುಮೆಣಸಿನ ಪುಡಿ, 1 ಚಿಟಿಕೆ-ಸಕ್ಕರೆ, 3-ಸೌತೆಕಾಯಿ, 1-ಈರುಳ್ಳಿ.

ಮಾಡುವ ವಿಧಾನ:

ಮೊದಲಿಗೆ ಒಂದು ದೊಡ್ಡ ಬೌಲ್ ಗೆ ಮಯೋನಿಸ್, ಕ್ರೀಂ, ವಿನೇಗರ್, ಆಲಿವ್ ಎಣ್ಣೆ, ಜಜ್ಜಿದ ಬೆಳ್ಳುಳ್ಳಿ, ಉಪ್ಪು, ಕಾಳುಮೆಣಸು, ಸಕ್ಕರೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

ಇದನ್ನು ಒಂದು ಗಂಟೆ ಹೊತ್ತು ಫ್ರಿಡ್ಜ್ ನಲ್ಲಿಡಿ. ನಂತರ ಈರುಳ್ಳಿ ಹಾಗೂ ಸೌತೆಕಾಯಿಯನ್ನು ತೆಳುವಾಗಿ ಕತ್ತರಿಸಿಕೊಳ್ಳಿ. ಇದನ್ನು ಈಗಾಗಲೇ ಸಿದ್ಧ ಮಾಡಿಟ್ಟುಕೊಂಡ ಮಯೋನಿಸ್ ಮಿಶ್ರಣಕ್ಕೆ ಹಾಕಿ ಒಮ್ಮೆ ಚೆನ್ನಾಗಿ ಮಿಶ್ರಣ ಮಾಡಿ ಸರ್ವ್ ಮಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...