ʼಮೆಹಂದಿʼಗೆ ಇದನ್ನು ಸೇರಿಸಿ ಕೂದಲಿಗೆ ಹಚ್ಚಿದರೆ ಸಿಗುತ್ತೆ ದುಪ್ಪಟ್ಟು ಪರಿಣಾಮ

ಕೂದಲು ಬಿಳಿಯಾಗುವುದು ಅಥವಾ ತೆಳ್ಳಗಾಗಲು ಪ್ರಾರಂಭವಾದ ತಕ್ಷಣ ಎಲ್ಲರೂ ನೈಸರ್ಗಿಕವಾದ ಮೆಹಂದಿಯ ಮೊರೆ ಹೋಗುತ್ತಾರೆ. ಮೆಹಂದಿ ಕೇವಲ ಕೂದಲಿನ ಬಣ್ಣಕ್ಕಷ್ಟೇ ಅಲ್ಲದೆ ತಲೆ ಹೊಟ್ಟು ಮತ್ತು ಕೂದಲು ಉದುರುವುದನ್ನು ಸಹ ಕಡಿಮೆ ಮಾಡುತ್ತದೆ.

ಕೂದಲಿಗೆ ಮೆಹಂದಿ ಪೇಸ್ಟ್ ಮಾಡುವಾಗ ಈ 5 ವಸ್ತುಗಳನ್ನು ಸೇರಿಸಿ ಹಚ್ಚಿದರೆ ಕೂದಲು ಹೆಚ್ಚು ಕಾಂತಿಯುತ ಮತ್ತು ಬಲಿಷ್ಠವಾಗಿರುತ್ತದೆ.

ಚಹಾದ ಎಲೆಗಳು ಸಹ  ಕೂದಲಿಗೆ ಬಣ್ಣವನ್ನು ನೀಡುತ್ತವೆ. ಇದಕ್ಕಾಗಿ ಚಹಾದ ಎಲೆಗಳನ್ನು ನೀರಿನಲ್ಲಿ ಕುದಿಸಿ ಗೋರಂಟಿ ಪುಡಿಯೊಂದಿಗೆ ಚೆನ್ನಾಗಿ ಮಿಕ್ಸ್ ಮಾಡಿ ರಾತ್ರಿಯಿಡೀ  ಹಾಗೆಯೇ ಇಡಿ. ಇದರ ಬಳಕೆಯು ಕೂದಲನ್ನು ಒಣಗಿಸುವುದಿಲ್ಲ. ಕೂದಲು ಮೃದುವಾಗಲು ಕಾರಣವಾಗುತ್ತದೆ. ಚಹಾದಲ್ಲಿ ಟ್ಯಾನಿನ್ ಅಂಶವಿದ್ದು ಅದು ಕೂದಲಿನ ಹೊಳಪು ಹೆಚ್ಚುವಂತೆ ಮಾಡುತ್ತದೆ.

ಕಾಫಿ ಪುಡಿಯನ್ನು ಅಥವ ಕಾಫಿ ದ್ರಾವಣವನ್ನು ಮೆಹಂದಿ ಪುಡಿಯೊಂದಿಗೆ ಸೇರಿಸಿ. ಇದು ಕೂದಲಿಗೆ ಗಾಢ ಬಣ್ಣವನ್ನು ನೀಡುತ್ತದೆ.  ಸ್ವಲ್ಪ ನೀರಿಗೆ ಕಾಫಿ ಪುಡಿ ಸೇರಿಸಿ ಚೆನ್ನಾಗಿ ಕುದಿಸಿ. ತಣ್ಣಗಾದ ನಂತರ ಬಳಸಿ.

ನಿಂಬೆ ರಸವು ಕೂದಲಿನ ತಲೆಹೊಟ್ಟಿನಿಂದ ಪರಿಹಾರ ಪಡೆಯಲು ಮತ್ತು  ಶಿಲೀಂಧ್ರಗಳ ಸೋಂಕನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮೆಹಂದಿಯೊಂದಿಗೆ ಒಂದು ಚಮಚ ನಿಂಬೆ ರಸ ಬೆರೆಸಿ ಕೂದಲಿಗೆ ಹಚ್ಚಿ.

ಮೊಟ್ಟೆ ಸ್ವಲ್ಪ ವಾಸನೆ ಇದ್ದರೂ ಸಹ ಕೂದಲಿನ ಆರೋಗ್ಯಕ್ಕೆ  ಅತ್ಯುತ್ತಮ. ಮೊಟ್ಟೆಯಲ್ಲಿ ಪ್ರೋಟೀನ್, ಸಿಲಿಕಾನ್, ಸಲ್ಫರ್, ವಿಟಮಿನ್ ಡಿ ಮತ್ತು ಇ ಇದ್ದು ಕೂದಲನ್ನು ಪೋಷಿಸುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read