ಪ್ರತಿದಿನ ಬೆಳಗ್ಗೆ ಏನು ತಿಂಡಿ ಮಾಡುವುದು, ಮಾಡಿದ್ದನ್ನೇ ಮತ್ತೆ ಮಾಡಿ ತಿನ್ನಲು ಬೇಜಾರು, ಹೊಸ ತಿನಿಸು ಏನಿದೆ ಎಂದೆಲ್ಲಾ ಯೋಚಿಸುವವವರಿಗೆ ಇಲ್ಲಿದೆ ಹೊಸ ರೀತಿಯ ಉಪಾಹಾರ. ತುಂಬಾ ಸುಲಭವಾಗಿ ರುಚಿ ಕಟ್ಟಾದ ವೆಜಿಟೆಬಲ್ ಉಪ್ಪಿಟ್ಟು ಮಾಡಿ ಸವಿಯಬಹುದು. ಇಲ್ಲಿದೆ ಅದನ್ನು ತಯಾರಿಸುವ ವಿಧಾನ.
ಬೇಕಾಗುವ ಸಾಮಾಗ್ರಿಗಳು
ಬನ್ಸಿ ರವೆ-1 ಕಪ್
ಈರುಳ್ಳಿ-1
ಹಸಿ ಮೆಣಸಿನಕಾಯಿ-2
ಟೊಮೇಟೊ-1
ಬೀನ್ಸ್-4
ಕ್ಯಾರೆಟ್-1
ಹಸಿ ಬಟಾಣಿ-ಸ್ವಲ್ಪ
ಕರಿಬೇವು-ಸ್ವಲ್ಪ
ಇಂಗು-1 ಚಿಟಿಕೆ
ಕೊತ್ತಂಬರಿ ಸೊಪ್ಪು-ಸ್ವಲ್ಪ
ಎಣ್ಣೆ-4 ಚಮಚ
ಉಪ್ಪು-ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ರವೆಯನ್ನು ಚೆನ್ನಾಗಿ ಹುರಿದಿಡಿ. ಈರುಳ್ಳಿ, ಮೆಣಸಿನಕಾಯಿ, ಕ್ಯಾರೆಟ್, ಬೀನ್ಸ್, ಟೊಮೇಟೊಗಳನ್ನು ಸಣ್ಣಗೆ ಕತ್ತರಿಸಿಡಿ. ಎಣ್ಣೆ ಬಿಸಿ ಮಾಡಿ ಜೀರಿಗೆ, ಸಾಸಿವೆ, ಕರಿಬೇವು, ಇಂಗಿನ ಒಗ್ಗರಣೆ ಹಾಕಿ. ನಂತರ ಕತ್ತರಿಸಿದ ಎಲ್ಲಾ ತರಕಾರಿಗಳನ್ನು ಹಾಕಿ ಬೆರೆಸಿ ಚೆನ್ನಾಗಿ ತಿರುವಿ ಹತ್ತು ನಿಮಿಷ ಬೇಯಿಸಿ. ನಂತರ ಮೂರು ಕಪ್ ನೀರು ಸೇರಿಸಿ. ನೀರು ಕುದಿಯುತ್ತಿರುವಾಗ ರವೆ ಹಾಕಿ ಕಲಸಿ ಎರಡು ನಿಮಿಷ ಬೇಯಿಸಿ. ಬಳಿಕ ನಿಂಬೆ ರಸ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿದರೆ ವೆಜಿಟೆಬಲ್ ಉಪ್ಪಿಟ್ಟು ಸವಿಯಲು ಸಿದ್ಧ.