ಹೀರೇಕಾಯಿ – 1/2
ಕಡಲೇ ಹಿಟ್ಟು – 1/2 ಬೌಲ್
ಅರಿಶಿಣ – 1/2 ಟೀ ಚಮಚ
ಇಂಗು – 1/4 ಟೀ ಚಮಚ
ಖಾರದ ಪುಡಿ – 1 ಟೇಬಲ್ ಚಮಚ
ಜೀರಿಗೆ – 1/2 ಟೀ ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ – ಕರಿಯಲು
ನೀರು – 1 ಕಪ್
ಮಾಡುವ ವಿಧಾನ
ಒಂದು ಹೀರೇಕಾಯಿಯ ಅರ್ಧ ಭಾಗವನ್ನು ಕತ್ತರಿಸಿ ಸ್ಲೈಸ್ ನಂತೆ ಕತ್ತರಿಸಿಕೊಳ್ಳಬೇಕು. ಒಂದು ಪಾತ್ರೆಯಲ್ಲಿ ಕಡಲೇ ಹಿಟ್ಟನ್ನು ಹಾಕಿ. ಅದಕ್ಕೆ ಅರಿಶಿಣ ಪುಡಿ, ಇಂಗು, ಕೆಂಪು ಮೆಣಸಿನ ಪುಡಿ ಅಥವಾ ಖಾರದ ಪುಡಿ ಮತ್ತು ಜೀರಿಗೆಯನ್ನು ಬೆರೆಸಿ. ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.
ನಂತರ ಒಂದು ಚಿಕ್ಕ ಪಾತ್ರೆಯಲ್ಲಿ 2 ಟೇಬಲ್ ಚಮಚ ಎಣ್ಣೆಯನ್ನು ಹಾಕಿ. ಎಣ್ಣೆಯು ಚೆನ್ನಾಗಿ ಬಿಸಿಯಾಗುವಂತೆ 1 ರಿಂದ 2 ನಿಮಿಷ ಕಾಯಲು ಬಿಡಿ. ನಂತರ ಮಿಶ್ರಣಕ್ಕೆ ಸುರಿಯಿರಿ. ಸ್ವಲ್ಪ ಸ್ವಲ್ಪ ನೀರನ್ನು ಸೇರಿಸುತ್ತಾ, ಮೃದುವಾದ ಮಿಶ್ರಣವನ್ನಾಗಿ ಮಾಡಿ.
ಬೇಯಿಸಲು ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಲು ಇಡಿ. ಕತ್ತರಿಸಿಕೊಂಡ ಹೀರೇಕಾಯಿಯನ್ನು ಕಡಲೇ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಎಣ್ಣೆಯಲ್ಲಿ ಬಿಡಿ. ಎರಡೂ ಬದಿ ಕಾದ ನಂತರ ಬೇರೆ ಪಾತ್ರೆಗೆ ವರ್ಗಾಯಿಸಿ ಬಿಸಿ ಬಿಸಿ ಇರುವಾಗಲೇ ಹೀರೇಕಾಯಿ ಬಜ್ಜಿ ಸವಿಯಲು ನೀಡಿ.