ಆರೋಗ್ಯದ ಜೊತೆ ಸೌಂದರ್ಯಕ್ಕೂ ಉಪಯುಕ್ತ ಈ ಎಲೆ

ಸಾಮಾನ್ಯವಾಗಿ ಆರೋಗ್ಯ ಮತ್ತು ಸೌಂದರ್ಯವನ್ನು ರಕ್ಷಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಯುಕ್ತವಾದ ಕ್ರೀಮ್ ಗಳ ಮೊರೆ ಹೋಗುತ್ತೇವೆ. ಆದರೆ ಮನೆಯಲ್ಲಿಯೇ ದೊರೆಯುವ ನಿಸರ್ಗದತ್ತವಾದ ಎಲೆಗಳನ್ನು ಬಳಸಿ ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು.

ತುಳಸಿ ಎಲೆ

ಮುಖದ ಮೇಲೆ ಮೊಡವೆಗಳ ಕಾಟದಿಂದ ಒದ್ದಾಡುವವರು ತುಳಸಿ ಎಲೆಗಳನ್ನು ಜಜ್ಜಿ ರಸ ಹಿಂಡಿ ಪ್ರತಿದಿನ ಮುಖಕ್ಕೆ ಸವರಿಕೊಳ್ಳುತ್ತಿದ್ದರೆ ಎರಡು ತಿಂಗಳಲ್ಲಿ ಮೊಡವೆಗಳ ಕಾಟ ನಿವಾರಣೆಯಾಗುತ್ತದೆ.

ಬೇವು-ತುಳಸಿ-ಪುದೀನ ಎಲೆಗಳು

ಈ ಎಲೆಗಳನ್ನು ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಬೇಕು. ಈ ಪುಡಿಗಳ ಮಿಶ್ರಣಕ್ಕೆ ಜೇನು, ನಿಂಬೆರಸ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುತ್ತಿದ್ದರೆ, ಜಿಡ್ಡು ನಿವಾರಣೆಯಾಗಿ ಮುಖ ಕಾಂತಿಯುತವಾಗುತ್ತದೆ.

ವೀಳ್ಯದೆಲೆ

ತುಟಿಗಳು ಸದಾ ಕೆಂಪಗೆ ಹೊಳೆಯಬೇಕೆಂದರೆ ವೀಳ್ಯದೆಲೆ ಬಳಸಿ. ಇದು ತುಟಿಗಳನ್ನು ಒಡೆಯಲು ಬಿಡುವುದಿಲ್ಲ. ಜೊತೆಗೆ ತುಟಿಗಳ ಕಪ್ಪನ್ನು ನಿವಾರಿಸುತ್ತದೆ.

ಬೇವಿನೆಲೆ

ಪ್ರತಿದಿನ ಎಳೆ ಬೇವಿನೆಲೆಗಳನ್ನು ಜಗಿಯುತ್ತಿದ್ದರೆ, ದಂತಗಳು ಆರೋಗ್ಯವಾಗಿ ಧೃಢವಾಗುವುದರೊಂದಿಗೆ ಬೆಳ್ಳಗೆ ಹೊಳೆಯುತ್ತವೆ. ಹುಳುಕು ಹಲ್ಲುಗಳು ನಿವಾರಣೆಯಾಗುತ್ತವೆ. ಬೇವಿನೆಲೆಗಳ ಕಷಾಯ ಮುಖದ ಮೇಲಿನ ಮೊಡವೆಗಳನ್ನು ತಡೆಗಟ್ಟುತ್ತದೆ.

ಮುಖದ ಮೇಲಿನ ಕಪ್ಪು ಮಚ್ಚೆಗಳು, ಗುಳ್ಳೆಗಳು ನಿವಾರಣೆಯಾಗಬೇಕು ಎಂದರೆ ಬೇವಿನ ಎಲೆಗಳನ್ನು ಒಣಗಿಸಿ ಪುಡಿ ಮಾಡಿ ರೋಸ್ ವಾಟರ್, ನಿಂಬೆರಸ ಬೆರೆಸಿ ಬಳಸಬಹುದು.

ಬಿಲ್ಪತ್ರೆ

ಈ ಎಲೆಗಳನ್ನು ಮೆತ್ತಗೆ ರುಬ್ಬಿ ರಸ ಹಿಂಡಬೇಕು. ಸ್ನಾನ ಮಾಡುವ ಮುನ್ನ ಈ ರಸವನ್ನು ಮೈಗೆ ಹಚ್ಚಿಕೊಳ್ಳುವುದರಿಂದ ಚರ್ಮದ ದುರ್ಗಂಧ ನಿವಾರಣೆಯಾಗುವುದಲ್ಲದೆ ಕಾಂತಿ ಹೆಚ್ಚುತ್ತದೆ.

ಗೋರಂಟಿ ಎಲೆಗಳು

ಕೈಗಳಿಗೆ ಗೋರಂಟಿ ಎಲೆಗಳನ್ನು ಹಚ್ಚಿಕೊಳ್ಳುವುದರಿಂದ ಅಂಗೈಗಳು ಅಂದವಾಗಿ ಮೃದುವಾಗುತ್ತವೆ. ಕೈ ಉಗುರುಗಳು ಬಿರುಕು ಬಿಡುವುದಿಲ್ಲ. ಅವುಗಳ ಬಿರುಸು ಕಡಿಮೆಯಾಗುತ್ತದೆ.

ಮೆಂತ್ಯದ ಎಲೆಗಳು

ಇವುಗಳನ್ನು ಚೆನ್ನಾಗಿ ರುಬ್ಬಿ, ಸ್ವಲ್ಪ ನೀರಿನೊಂದಿಗೆ ಬೆರೆಸಿ ಆ ಮಿಶ್ರಣದಿಂದ ಕೂದಲುಗಳಿಗೆ ಚೆನ್ನಾಗಿ ಮಸಾಜ್ ಮಾಡುವುದರಿಂದ ಕೂದಲುಗಳ ಬಿರುಸುತನ ಕಡಿಮೆಯಾಗುವುದರೊಂದಿಗೆ, ಮೃದುವಾಗಿ ಆಕರ್ಷಣೀಯವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read