ಖರ್ಜೂರದ ಸೇವನೆ ಹೆಚ್ಚಿಸುತ್ತೆ ‘ಲೈಂಗಿಕ’ ಸಾಮರ್ಥ್ಯ

ಬಿಸಿಲ ಬೇಗೆಗೆ ಬೆಂದವರಿಗೆ ಆರೋಗ್ಯಕರ ಅಂಶವನ್ನು ನೀಡುವ ಖರ್ಜೂರ ಹಲವು ರೋಗಗಳಿಗೆ ರಾಮಬಾಣ. ಆರೋಗ್ಯಕರ ಖರ್ಜೂರದ ಬಗ್ಗೆ ಮಾಹಿತಿ ಇಲ್ಲಿದೆ.

1. ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಖರ್ಜೂರದ ಮಹತ್ವ ಹಿರಿದು. ಒಂದು ಮುಷ್ಟಿಯಷ್ಟು ಖರ್ಜೂರವನ್ನು ಆಡಿನ ಹಾಲಿನೊಂದಿಗೆ ರಾತ್ರಿ ಪೂರ್ತಿ ನೆನೆಸಿಡಿ. ಮರುದಿನ ಬೆಳಗ್ಗೆ ಖರ್ಜೂರವನ್ನು ಹಾಲಿನೊಂದಿಗೆ ಕಡೆಯಿರಿ ಇದಕ್ಕೆ ಜೇನು ಮತ್ತು ಏಲಕ್ಕಿ ಹುಡಿ ಸೇರಿಸಿ ಸೇವಿಸಿ.

2. ಪ್ರೋಟೀನ್ ಮತ್ತು ಜೀರ್ಣಕ್ರಿಯೆಗೆ ಸಹಾಯಕವಾಗುವ ಫೈಬರ್ ಮತ್ತು ವಿಟಮಿನ್ ಬಿ1, ಬಿ2, ಬಿ3 ಮತ್ತು ಬಿ5 ಅಲ್ಲದೆ ವಿಟಮಿನ್ ಎ1 ಮತ್ತು ಸಿ ಯಿಂದ ಸಮೃದ್ಧಗೊಂಡಿದೆ.

3. ನೈಸರ್ಗಿಕ ಸಕ್ಕರೆಯಾದ ಗ್ಲುಕೋಸ್, ಸುಕ್ರೋಸ್ ಮತ್ತು ಫ್ರುಕ್ಟೋಸ್ ಅನ್ನು ಒಳಗೊಂಡಿರುವುದರಿಂದ ಶಕ್ತಿವರ್ಧಕ ಡ್ರೈ ಫ್ರುಟ್ ಇದಾಗಿದೆ.

4. ಖರ್ಜೂರದಿಂದ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಲು ಹಾಲಿನೊಂದಿಗೆ ಮಿಶ್ರ ಮಾಡಿಕೊಂಡು ಸೇವಿಸಬೇಕು.

5. ಖರ್ಜೂರದಲ್ಲಿ ಕ್ಯಾಲೋರಿ ಅಂಶ ಕಡಿಮೆ ಇದೆ. ಹೀಗಾಗಿ ಇದೊಂದು ಉತ್ತಮ ನ್ಯೂಟ್ರಿಶಿಯಸ್ ಪೇಯವಾಗಿದೆ.

6. ಪೊಟ್ಯಾಶಿಯಂ ಅಧಿಕವಾಗಿ ಮತ್ತು ಸೋಡಿಯಂ ಇಳಿಕೆಯಾಗಿರುವ ಖರ್ಜೂರ ಆರೋಗ್ಯಕರ ನರಮಂಡಲ ವ್ಯವಸ್ಥೆಗೆ ಕಾರಣವಾಗಿದೆ.

7. ಇದರಲ್ಲಿರುವ ಅತ್ಯಧಿಕ ಐರನ್ ಅಂಶ ಅನಿಮಿಯಾಕ್ಕೆ ಉತ್ತಮ ಔಷಧಿಯಾಗಿದೆ.

8. ದಂತಕ್ಷಯದ ಪ್ರಕ್ರಿಯೆಯನ್ನು ನಿಧಾನಿಸುವ ಫ್ಲೋರಿನ್ ಅನ್ನು ಖರ್ಜೂರ ಒಳಗೊಂಡಿದೆ.

9. ಖರ್ಜೂರವನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಮರುದಿನ ಬೆಳಗ್ಗೆ ನೀರಿನೊಂದಿಗೆ ಸೇವಿಸಿದರೆ ಮಲಬದ್ಧತೆಗೆ ಪರಿಹಾರ ದೊರಕುತ್ತದೆ.

10. ಖರ್ಜೂರ ಕೊಲೆಸ್ಟ್ರಾಲ್ ಮುಕ್ತವಾಗಿದ್ದು, ಕಡಿಮೆ ಕೊಬ್ಬಿನಂಶವನ್ನು ಹೊಂದಿದೆ. ಇವುಗಳಲ್ಲಿ ವಿಟಮಿನ್, ಮಿನರಲ್ ಅಧಿಕವಾಗಿದೆ.

11. ತೂಕ ಹೆಚ್ಚಿಸುವಲ್ಲಿ ಖರ್ಜೂರ ಸಹಕಾರಿಯಾಗಿದೆ. ಮಾದಕ ದ್ರವ್ಯದ ನಶೆಗೂ ಇದು ರಾಮಬಾಣ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read