HomeRecipiesಇಲ್ಲಿದೆ ಆರೋಗ್ಯಕರ 'ಸೋರೆಕಾಯಿ' ಪಾಯಸ ಮಾಡುವ ವಿಧಾನ

ಇಲ್ಲಿದೆ ಆರೋಗ್ಯಕರ ‘ಸೋರೆಕಾಯಿ’ ಪಾಯಸ ಮಾಡುವ ವಿಧಾನ

ಸೋರೆಕಾಯಿ ಇತ್ತೀಚೆಗೆ ಎಲ್ಲಾ ಸೀಸನ್ ಗಳಲ್ಲೂ ಸಿಗುವ ತರಕಾರಿಯಾಗಿದೆ. ಸೋರೆಕಾಯಿ ಸೇವನೆ ಆರೋಗ್ಯಕ್ಕೂ ಒಳ್ಳೆಯದು. ಈ ಸೋರೆಕಾಯಿಂದ ನೀವು, ಸಾರು, ಪಲ್ಯ ಮಾಡಿರಬಹದು. ಆದ್ರೆ ನಿಮಗೆ ಗೊತ್ತಾ? ಸೋರೆಕಾಯಿಯಿಂದ ಪಾಯಸ ಕೂಡಾ ಮಾಡಬಹುದು.

ಪಾಯಸಕ್ಕೆ ಬೇಕಾಗುವ ಸಾಮಗ್ರಿಗಳು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಂದು ಚಿಕ್ಕ ಸೋರೆಕಾಯಿ.

ಸಕ್ಕರೆ ಅಥವಾ ಬೆಲ್ಲ ಸಿಹಿಗೆ ತಕ್ಕಷ್ಟು.

ತೆಂಗಿನಕಾಯಿ ತುರಿ.

ಏಲಕ್ಕಿ-2 ರಿಂದ 3.

ಹಾಲು -1 ಕಪ್.

ಮಾಡುವ ವಿಧಾನ :

ಸೋರೆಕಾಯಿಯನ್ನು ಸಿಪ್ಪೆ ತೆಗೆದು ಅದನ್ನ ಹೆಚ್ಚಿ ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ. ನಂತರ, ಬೆಂದ ಮೇಲೆ ಅದನ್ನ ತಣ್ಣಗಾಗುವವರೆಗೂ ಬಿಡಿ. ಬಳಿಕ ಮಿಕ್ಸಿಗೆ ಹಾಕಿ ರುಬ್ಬಿಟ್ಟುಕೊಳ್ಳಿ. ಇನ್ನೊಂದು ಕಡೆ ತೆಂಗಿನಕಾಯಿ ತುರಿಯನ್ನೂ ನುಣ್ಣಗೆ ರುಬ್ಬಿ.

ಪಾತ್ರೆಯಲ್ಲಿ ರುಬ್ಬಿದ ಸೋರೆಕಾಯಿ, ತೆಂಗಿನ ತುರಿ, ಹಾಲು ಹಾಕಿ ಕುದಿಸಿ. ಒಂದು ಕುದಿಯ ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಸಕ್ಕರೆ ಅಥವಾ ಬೆಲ್ಲ ಹಾಕಿ ಮತ್ತೊಮ್ಮೆ ಕುದಿಸಿ, ಏಲಕ್ಕಿ ಪುಡಿ ಸೇರಿಸಿ. ಬಿಸಿ ಬಿಸಿಯಾದ ಸೋರೆಕಾಯಿ ಪಾಯಸ ಸವಿದು ನೋಡಿ.

For Latest News Updates, Join Our Whatsapp Community🚩
RELATED ARTICLES

Most Popular