ಪ್ರತಿ ಕ್ಷಣವನ್ನೂ ಅತ್ಯಂತ ಸ್ಪಷ್ಟವಾಗಿ ಸೆರೆಹಿಡಿಯುವ ಕ್ಯಾಮೆರಾ, ಗಂಟೆಗಟ್ಟಲೆ ಬಳಕೆಗೂ ಸಾಥ್ ನೀಡುವ ಬ್ಯಾಟರಿ, ಕೈಯಲ್ಲಿ ಹಿಡಿದಾಗಲೇ ಪ್ರೀಮಿಯಂ ಅನುಭವ ನೀಡುವ ವಿನ್ಯಾಸ… ಇಂತಹ ಫೀಚರ್ಸ್ಗಳಿರುವ ಸ್ಮಾರ್ಟ್ಫೋನ್ಗಾಗಿ ಕಾಯುತ್ತಿರುವವರಿಗೆ ಸ್ಯಾಮ್ಸಂಗ್ ಹೊಸ ಸರ್ಪ್ರೈಸ್ ನೀಡಲು ಸಜ್ಜಾಗಿದೆ ಎನ್ನಲಾಗಿದೆ.
ಹೌದು. ಟೆಕ್ ಲೋಕದಲ್ಲಿ ಈಗಾಗಲೇ ಭಾರಿ ಕುತೂಹಲ ಮೂಡಿಸಿರುವ Samsung Galaxy S27 Ultra 2027ರ ಆರಂಭದಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡುವ ಸಾಧ್ಯತೆಯಿದೆ. 200MP ಕ್ಯಾಮೆರಾ ಸೇರಿದಂತೆ ಹಲವು ಅತ್ಯಾಧುನಿಕ ಫೀಚರ್ಸ್ಗಳ ನಿರೀಕ್ಷೆ ಈ ಫೋನ್ ಮೇಲಿನ ಗ್ರಾಹಕರ ಆಸಕ್ತಿಯನ್ನು ಹೆಚ್ಚಿಸಿದೆ.
6.9 ಇಂಚಿನ ಬೃಹತ್ ಡಿಸ್ಪ್ಲೇ
Samsung Galaxy S27 Ultra ಸ್ಮಾರ್ಟ್ಫೋನ್ನಲ್ಲಿ 6.9 ಇಂಚಿನ Dynamic AMOLED 2X QHD+ ಡಿಸ್ಪ್ಲೇ ಇರಬಹುದು ಎಂದು ನಿರೀಕ್ಷಿಸಲಾಗಿದೆ. 120Hz ರಿಫ್ರೆಶ್ ರೇಟ್ ಹೊಂದಿರುವ ಈ ಸ್ಕ್ರೀನ್ ಉತ್ತಮ ವೀಕ್ಷಣೆಯ ಅನುಭವ ನೀಡುವ ಸಾಧ್ಯತೆಯಿದೆ.
200MP ಕ್ಯಾಮೆರಾ ವಿಶೇಷತೆ
ಫೋಟೋಗ್ರಫಿ ಪ್ರಿಯರಿಗೆ ಈ ಫೋನ್ ವಿಶೇಷವಾಗಬಹುದು. ಸೋರಿಕೆಯ ಮಾಹಿತಿ ಪ್ರಕಾರ, ಹಿಂಬದಿಯಲ್ಲಿ 200MP ಮುಖ್ಯ ಕ್ಯಾಮೆರಾ ಇರಲಿದೆ. ಇದರೊಂದಿಗೆ 50MP ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು 5x ಆಪ್ಟಿಕಲ್ ಜೂಮ್ ಬೆಂಬಲಿಸುವ 50MP ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ನೀಡುವ ಸಾಧ್ಯತೆಯಿದೆ.ಸೆಲ್ಫಿಗಾಗಿ 12MP ಅಥವಾ 16MP ಮುಂಭಾಗದ ಕ್ಯಾಮೆರಾ ಅಳವಡಿಸುವ ನಿರೀಕ್ಷೆಯಿದೆ.
ಶಕ್ತಿಶಾಲಿ ಪ್ರೊಸೆಸರ್, 16GB RAM ಆಯ್ಕೆ!
ಈ ಸ್ಮಾರ್ಟ್ಫೋನ್ನಲ್ಲಿ Qualcomm Snapdragon 8 Elite Gen 6 ಅಥವಾ Extreme ವೇರಿಯಂಟ್ ಪ್ರೊಸೆಸರ್ ಇರಬಹುದು ಎನ್ನಲಾಗಿದೆ. 12GB RAM ಜೊತೆಗೆ 16GB RAM ಆಯ್ಕೆಯೂ ಲಭ್ಯವಾಗುವ ಸಾಧ್ಯತೆಯಿದೆ. ಇನ್ನು 256GB, 512GB ಮತ್ತು 1TB ಸ್ಟೋರೇಜ್ ಆಯ್ಕೆಗಳನ್ನು ನಿರೀಕ್ಷಿಸಲಾಗಿದೆ.
5,700mAh ಬ್ಯಾಟರಿ, ವೇಗದ ಚಾರ್ಜಿಂಗ್
ಬ್ಯಾಟರಿ ವಿಚಾರದಲ್ಲೂ ಸ್ಯಾಮ್ಸಂಗ್ ಹೊಸ ಪ್ರಯತ್ನ ಮಾಡಬಹುದು. Galaxy S27 Ultra ಫೋನ್ನಲ್ಲಿ 5,500mAhನಿಂದ 5,700mAh ಸಾಮರ್ಥ್ಯದ ಬ್ಯಾಟರಿ ನೀಡುವ ಸಾಧ್ಯತೆಯಿದೆ. ಇದರೊಂದಿಗೆ 60W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 25W ವೈರ್ಲೆಸ್ ಚಾರ್ಜಿಂಗ್ ಸೌಲಭ್ಯ ಇರಬಹುದು ಎಂದು ವರದಿಗಳು ಹೇಳುತ್ತಿವೆ.
ಭಾರತದಲ್ಲಿ ಬೆಲೆ ಎಷ್ಟಿರಬಹುದು?
ಭಾರತದಲ್ಲಿ Samsung Galaxy S27 Ultra ಸ್ಮಾರ್ಟ್ಫೋನ್ನ ಆರಂಭಿಕ ಬೆಲೆ ₹1,31,999ರಿಂದ ₹1,49,990 ಇರಬಹುದು ಎಂದು ಅಂದಾಜಿಸಲಾಗಿದೆ. 12GB RAM ಮತ್ತು 256GB ಸ್ಟೋರೇಜ್ ಹೊಂದಿರುವ ಮೂಲ ಮಾದರಿಗೆ ಈ ಬೆಲೆ ನಿರೀಕ್ಷಿಸಲಾಗಿದೆ.
ಯಾವಾಗ ಬಿಡುಗಡೆಯಾಗಲಿದೆ?
ಸದ್ಯದ ನಿರೀಕ್ಷೆಯಂತೆ 2027ರ ಜನವರಿ ಅಥವಾ ಫೆಬ್ರವರಿಯಲ್ಲಿ ಈ ಸ್ಮಾರ್ಟ್ಫೋನ್ ಬಿಡುಗಡೆಯಾಗಬಹುದು. ಆದರೆ ಸ್ಯಾಮ್ಸಂಗ್ ಕಂಪನಿ ಬಿಡುಗಡೆ ದಿನಾಂಕ, ಬೆಲೆ ಮತ್ತು ಫೀಚರ್ಸ್ಗಳ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.
ಗಮನಿಸಿ: ಈ ವರದಿಯಲ್ಲಿನ ಫೀಚರ್ಸ್ ಮತ್ತು ಬೆಲೆ ವಿವರಗಳು ಸೋರಿಕೆಯ ಮಾಹಿತಿ ಹಾಗೂ ಆರಂಭಿಕ ಅಂದಾಜುಗಳನ್ನು ಆಧರಿಸಿವೆ. ಅಧಿಕೃತ ಘೋಷಣೆಯ ಬಳಿಕ ನೈಜ ವಿವರಗಳು ಬದಲಾಗಬಹುದು.

