ಕ್ಯಾಲಿಫೋರ್ನಿಯಾ: ಜಗತ್ತಿನ ಮುಂಚೂಣಿ ಕೃತಕ ಬುದ್ಧಿಮತ್ತೆ (AI) ಮತ್ತು ಗ್ರಾಫಿಕ್ಸ್ ಚಿಪ್ ಉತ್ಪಾದನಾ ಕಂಪನಿಯಾಗಿರುವ ಅಮೆರಿಕದ ಎನ್‌ವಿಡಿಯಾ ಕಂಪನಿಯ ಸಿಇಒ ಮತ್ತು ಸಹ-ಸ್ಥಾಪಕರಾದ ಜೇನ್ಸನ್ ಹುವಾಂಗ್ ಅವರು ಚೀನಾದ ಗೂಢಚಾರಿಣಿ ಎಂದು ಶಂಕಿಸಲಾದ ಮಹಿಳೆಯೊಂದಿಗೆ ತಾವು ಹೊಂದಿದ್ದ ವಿವಾಹೇತರ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ.
ಚೀನಾ ಸ್ಪೈ ಜೊತೆ ತಮ್ಮ ಪ್ರೇಮ ಪ್ರಕರಣವನ್ನು ಒಪ್ಪಿಕೊಂಡಿರುವ ಜೇನ್ಸನ್ ಹುವಾಂಗ್ ತಮ್ಮ ಕುಟುಂಬ ಹಾಗೂ ಉದ್ಯೋಗಿಗಳಲ್ಲಿ ಅಧಿಕೃತವಾಗಿ ಕ್ಷಮೆಯಾಚಿಸಿದ್ದಾರೆ. ಈ ಘಟನೆ ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಕಂಪನಿಯ ಉದ್ಯೋಗಿಗಳಿಗೆ ಕಳುಹಿಸಿದ ಇ-ಮೇಲ್ ನಲ್ಲಿ ಏನಿದೆ?
ನವೆಂಬರ್ 8, 2026 ರಂದು ತಮ್ಮ ಕಂಪನಿಯ ಉದ್ಯೋಗಿಗಳಿಗೆ ಕಳುಹಿಸಿದ ಇ-ಮೇಲ್‌ನಲ್ಲಿ ಹುವಾಂಗ್, “ನಾನು ನನ್ನ ಪತ್ನಿಗೆ ದ್ರೋಹ ಮಾಡಿದ್ದೇನೆ. ನನ್ನ ಈ ಕೃತ್ಯವು ಅವಳಿಗೆ ಮತ್ತು ನಮ್ಮ ಮಕ್ಕಳಿಗೆ ತೀವ್ರ ನೋವುಂಟುಮಾಡಿದೆ. ನಾನು ಮಾಡಿದ ತಪ್ಪಿಗೆ ಯಾವುದೇ ಸಮರ್ಥನೆಯಿಲ್ಲ ಮತ್ತು ನನಗೆ ತುಂಬಾ ಪಶ್ಚಾತ್ತಾಪವಾಗುತ್ತಿದೆ. ಹೂಡಿಕೆದಾರರು, ಬೋರ್ಡ್ ಸದಸ್ಯರು ಹಾಗೂ ಉದ್ಯೋಗಿಗಳು ನನ್ನಿಂದ ಉತ್ತಮ ನಡವಳಿಕೆಯನ್ನು ನಿರೀಕ್ಷಿಸಿದ್ದರು, ಆದರೆ ನಾನು ಅದರಲ್ಲಿ ವಿಫಲನಾಗಿದ್ದೇನೆ” ಎಂದು ಬರೆದು ಎಲ್ಲರ ಕ್ಷಮೆ ಕೋರಿದ್ದಾರೆ.
ಅಮೆರಿಕದ ಇಂಟೆಲಿಜೆನ್ಸ್ ಸಂಸ್ಥೆಗಳ ತನಿಖೆಯ ಪ್ರಕಾರ, ಹುವಾಂಗ್ ಅವರೊಂದಿಗೆ ಸಂಬಂಧ ಹೊಂದಿದ್ದ ಮಹಿಳೆಯ ಹೆಸರು ಆಲಿಸ್ ಹುವಾಂಗ್. ಈಕೆ ಸಿಂಗಾಪುರ ಮೂಲದ ದತ್ತಾಂಶ ಕೇಂದ್ರ ಕಂಪನಿಯಾದ ಮೆಗಾಸ್ಪೀಡ್‌ನ ಉನ್ನತ ಅಧಿಕಾರಿಯಾಗಿದ್ದಾಳೆ. ಅಮೆರಿಕದ ರಫ್ತು ನಿಯಂತ್ರಣಗಳನ್ನು ಮೀರಿ ಎನ್‌ವಿಡಿಯಾದ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ಚಿಪ್‌ಗಳ ರಹಸ್ಯ ಮಾಹಿತಿಗಳನ್ನು ಚೀನಾ ಸರ್ಕಾರಕ್ಕೆ ತಲುಪಿಸಲು ಚೀನಾದ ಸ್ಟೇಟ್ ಸೆಕ್ಯುರಿಟಿ ಸಚಿವಾಲಯವು ಈಕೆಯನ್ನು ಬಳಸಿಕೊಂಡಿರಬಹುದು ಎಂದು ಅಮೆರಿಕದ ಗುಪ್ತಚರ ಇಲಾಖೆ ಶಂಕಿಸಿದೆ.
ಎನ್‌ವಿಡಿಯಾ ಪ್ರಸ್ತುತ ವಿಶ್ವದ ಅತ್ಯಂತ ಪ್ರಭಾವಶಾಲಿ ಮತ್ತು ಅತ್ಯಧಿಕ ಮೌಲ್ಯದ ಎಐ ಚಿಪ್ ತಯಾರಿಕಾ ಕಂಪನಿಯಾಗಿದೆ. ಹುವಾಂಗ್ ಅವರು ಈ ಹಿಂದೆ ಚೀನಾಕ್ಕೆ ಚಿಪ್ ಮಾರಾಟ ಮಾಡುವ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸುವಂತೆ ಅಮೆರಿಕ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಹೀಗಾಗಿ, ಈ ಗೂಢಚರ್ಯೆಯ ಬಲೆಯು ಎನ್‌ವಿಡಿಯಾ ಕಂಪನಿಯ ವ್ಯವಹಾರ, ಷೇರು ಮಾರುಕಟ್ಟೆಯ ಮೌಲ್ಯ ಹಾಗೂ ಹೂಡಿಕೆದಾರರ ನಂಬಿಕೆಗೆ ದೊಡ್ಡ ಹೊಡೆತ ನೀಡಬಹುದು ಎಂದು ಮಾರುಕಟ್ಟೆ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ವರದಿಗಳು ಹೊರಬರುತ್ತಿದ್ದಂತೆ, ಎನ್‌ವಿಡಿಯಾ ಕಂಪನಿಯ ಆಡಳಿತ ಮಂಡಳಿ ತಕ್ಷಣವೇ ಕಾರ್ಯಪ್ರವೃತ್ತವಾಗಿದ್ದು, ಹುವಾಂಗ್ ವಿದೇಶಿ ಗುಪ್ತಚರ ಇಲಾಖೆಯ ಸಂಚಿಗೆ ಬಲಿಯಾಗಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಸ್ವತಂತ್ರ ತನಿಖಾ ಸಮಿತಿಯನ್ನು ರಚಿಸಿದೆ.
ಸದ್ಯದ ಮಾಹಿತಿಯ ಪ್ರಕಾರ ಕಂಪನಿಯ ಯಾವುದೇ ರಹಸ್ಯಗಳು ಅಥವಾ ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗಿರುವ ಪುರಾವೆಗಳಿಲ್ಲ ಎಂದು ಬೋರ್ಡ್ ತಿಳಿಸಿದ್ದರೂ, ಎಲ್ಲ ಲಭ್ಯವಿರುವ ಮಾಹಿತಿಗಳ ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದೆ.

