HomeKarnatakaಕಂದಾಯ ಇಲಾಖೆಯಲ್ಲಿ ಮೇಜರ್ ಸರ್ಜರಿ: 10 ತಹಶೀಲ್ದಾರ್‌ಗಳ ವರ್ಗಾವಣೆ, 3 ಅಧಿಕಾರಿಗಳಿಗೆ ಸ್ಥಳ ನಿಯುಕ್ತಿ ಬಾಕಿ

ಕಂದಾಯ ಇಲಾಖೆಯಲ್ಲಿ ಮೇಜರ್ ಸರ್ಜರಿ: 10 ತಹಶೀಲ್ದಾರ್‌ಗಳ ವರ್ಗಾವಣೆ, 3 ಅಧಿಕಾರಿಗಳಿಗೆ ಸ್ಥಳ ನಿಯುಕ್ತಿ ಬಾಕಿ

ಬೆಂಗಳೂರು: ರಾಜ್ಯ ಕಂದಾಯ ಇಲಾಖೆಯಲ್ಲಿ ಆಡಳಿತಾತ್ಮಕ ಹಿತದೃಷ್ಟಿಯಿಂದ ಮಹತ್ವದ ಬದಲಾವಣೆ ಮಾಡಲಾಗಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ತಹಶೀಲ್ದಾರ್ ಗ್ರೇಡ್-1 ಅಧಿಕಾರಿಗಳನ್ನು ವಿವಿಧ ಸ್ಥಳಗಳಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಜಿ.ಕೆ. ನರಸಿಂಹಮೂರ್ತಿ ಅವರು ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಿದ್ದಾರೆ. ಒಟ್ಟು 10 ಅಧಿಕಾರಿಗಳ ವರ್ಗಾವಣೆ ಮತ್ತು ಸ್ಥಳ ನಿಯುಕ್ತಿಗೆ ಆದೇಶ ನೀಡಲಾಗಿದ್ದರೂ, ಲಭ್ಯವಿರುವ ವಿವರಗಳಲ್ಲಿ ಏಳು ಅಧಿಕಾರಿಗಳ ಹೊಸ ಸ್ಥಳಗಳ ಮಾಹಿತಿ ನೀಡಲಾಗಿದೆ.

ವರ್ಗಾವಣೆಗೊಂಡ ತಹಶೀಲ್ದಾರ್‌ಗಳ ವಿವರ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1. ಶಿವಾನಂದ ಮೇತ್ರೆ – ಹುಲಸೂರಿನಿಂದ ಚಿಂಚೋಳಿಗೆ (ಕಲಬುರಗಿ).

2. ಎ.ಡಿ. ಅಮರಾವಡಗಿ – ನಿಡಗುಂದಿಯಿಂದ ಗುಳೇದಗುಡ್ಡಕ್ಕೆ (ಬಾಗಲಕೋಟೆ).

3. ಡಿ.ಎನ್. ವರದರಾಜು – ತುಮಕೂರಿನಿಂದ ಪಾವಗಡಕ್ಕೆ (ತುಮಕೂರು).

4. ರಘು ಟಿ.ಎನ್. – ಬೆಂಗಳೂರಿನಿಂದ ಬ್ಯಾಡಗಿಗೆ (ಹಾವೇರಿ).

5. ಡಾ. ಸುಮಂತ್ ಬಿ.ಇ. – ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ಮಂಗಳೂರಿಗೆ (ದಕ್ಷಿಣ ಕನ್ನಡ).

6. ಮಂಜುಳಾ ಕೆ. ನಾಯ್ಕು – ಸಿದ್ದಾಪುರದಿಂದ ಕಾರ್ಕಳಕ್ಕೆ (ಉಡುಪಿ).

7. ರಾಜಕುಮಾರ ಮರತೂರಕರ್ – ಚಿತ್ತಾಪುರದಿಂದ ಹುಣಸಗಿಗೆ (ಯಾದಗಿರಿ).

ಮೂರು ಅಧಿಕಾರಿಗಳಿಗೆ ಸ್ಥಳ ನಿಯುಕ್ತಿ ಬಾಕಿ

ಇನ್ನು ಚಂದ್ರಶೇಖರ ನಾಯ್ಡು (ತಹಶೀಲ್ದಾರ್ ಗ್ರೇಡ್-1), ಎಂ. ಬಸವರಾಜ ಮತ್ತು ಸುಬ್ಬಣ್ಣ ಜಮಖಂಡಿ (ತಹಶೀಲ್ದಾರ್ ಗ್ರೇಡ್-2) ಅವರನ್ನು ಪ್ರಸ್ತುತ ಹುದ್ದೆಗಳಿಂದ ಬಿಡುಗಡೆಗೊಳಿಸಲಾಗಿದೆ. ಈ ಮೂವರು ಅಧಿಕಾರಿಗಳಿಗೆ ಪ್ರತ್ಯೇಕವಾಗಿ ಸ್ಥಳ ನಿಯುಕ್ತಿ ಆದೇಶ ಹೊರಡಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಸ್ಥಳ ನಿಯುಕ್ತಿಗಾಗಿ ಈ ಅಧಿಕಾರಿಗಳು ತಕ್ಷಣವೇ ಸರ್ಕಾರಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.ವರ್ಗಾವಣೆಗೊಂಡ ಅಧಿಕಾರಿಗಳು ಕೂಡಲೇ ಹೊಸ ಕರ್ತವ್ಯದ ಸ್ಥಳದಲ್ಲಿ ವರದಿ ಮಾಡಿಕೊಂಡು, ಕರ್ತವ್ಯಕ್ಕೆ ಸೇರಿದ (CTC) ಪ್ರತಿಯನ್ನು ಇ-ಮೇಲ್ ಮೂಲಕ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಅಧಿಸೂಚನೆಯಲ್ಲಿ ನಿರ್ದೇಶಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular