HomeLatest Newsದೀಪಾವಳಿಗೆ ಮನೆಗೆ ದಿಢೀರ್ ಅತಿಥಿಗಳು ಬಂದ್ರೆ ಚಿಂತೆ ಬೇಡ: 5 ನಿಮಿಷದಲ್ಲಿ ಮಾಡಿ ಈ ರುಚಿಕರ...

ದೀಪಾವಳಿಗೆ ಮನೆಗೆ ದಿಢೀರ್ ಅತಿಥಿಗಳು ಬಂದ್ರೆ ಚಿಂತೆ ಬೇಡ: 5 ನಿಮಿಷದಲ್ಲಿ ಮಾಡಿ ಈ ರುಚಿಕರ ಸ್ನ್ಯಾಕ್ಸ್!

ದೀಪಾವಳಿ ಹಬ್ಬವೆಂದರೆ ಮನೆಗೆ ಬಂಧು-ಮಿತ್ರರ ಆಗಮನ, ಇಷ್ಟವಾದ ತಿಂಡಿಗಳ ಸಂಭ್ರಮ. ಆದರೆ ದಿಢೀರನೆ ಮನೆಗೆ ಅತಿಥಿಗಳು ಬಂದಾಗ ಸಮಯವಿಲ್ಲದೆ ಗಡಿಬಿಡಿಯಾಗುವುದು ಸಹಜ. ಇಂತಹ ಸಮಯದಲ್ಲಿ ಕೇವಲ 5 ನಿಮಿಷಗಳಲ್ಲಿ ಸುಲಭವಾಗಿ ಹಾಗೂ ರುಚಿಕರವಾಗಿ ತಯಾರಿಸಬಹುದಾದ 7 ಕ್ವಿಕ್ ಸ್ನ್ಯಾಕ್ಸ್ ಇಲ್ಲಿದೆ.

  • ಮಸಾಲ ಪಾಪಡ್: ಹಪ್ಪಳವನ್ನು ತವಾ ಅಥವಾ ಮೈಕ್ರೋವೇವ್‌ನಲ್ಲಿ ಹುರಿದುಕೊಳ್ಳಿ. ನಂತರ ಹೆಚ್ಚಿದ ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ, ಕೊತ್ತಂಬರಿ, ನಿಂಬೆ ರಸ, ಉಪ್ಪು ಮತ್ತು ಚಾಟ್ ಮಸಾಲ ಮಿಶ್ರಣ ಮಾಡಿ ಹುರಿದ ಹಪ್ಪಳದ ಮೇಲೆ ಉದುರಿಸಿ ತಕ್ಷಣ ಬಡಿಸಿ.

  • ಬ್ರೆಡ್ ಮೊಸರು ಚಾಟ್: ಬ್ರೆಡ್ ತುಂಡುಗಳನ್ನು ತುಪ್ಪದಲ್ಲಿ ಗರಿಗರಿಯಾಗಿ ಹುರಿದುಕೊಳ್ಳಿ. ನಂತರ ಸಿಹಿ ಮೊಸರು, ಹಸಿರು ಚಟ್ನಿ, ಸಿಹಿ ಚಟ್ನಿ, ಈರುಳ್ಳಿ, ಸೇವಿಯ ಜೊತೆಗೆ ಜೀರಿಗೆ ಪುಡಿ ಹಾಗೂ ಚಾಟ್ ಮಸಾಲ ಸೇರಿಸಿ ತಕ್ಷಣವೇ ಬಡಿಸಿ.

    📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
    APP ತೆರೆಯಿರಿ
  • ರೋಸ್ಟೆಡ್ ಮಸಾಲ ಮಖಾನಾ: ತುಪ್ಪದಲ್ಲಿ ಮಖಾನಾವನ್ನು ಗರಿಗರಿಯಾಗುವವರೆಗೆ ಹುರಿಯಿರಿ. ನಂತರ ಉಪ್ಪು, ಅರಿಶಿನ, ಖಾರದ ಪುಡಿ, ಕಾಳುಮೆಣಸಿನ ಪುಡಿ ಮತ್ತು ಚಾಟ್ ಮಸಾಲ ಸೇರಿಸಿ ಚೆನ್ನಾಗಿ ಕstated ಮಾಡಿ ಸವಿಯಿರಿ.

  • ಬೇಸನ್ ಚಿಲ್ಲಾ ಬೈಟ್ಸ್: ಕಡಲೆಹಿಟ್ಟಿಗೆ ನೀರು, ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ, ಕೊತ್ತಂಬರಿ, ಅಜ್ವೈನ್ ಹಾಗೂ ಉಪ್ಪು ಸೇರಿಸಿ ಗಟ್ಟಿಯಾದ ಹಿಟ್ಟು ಮಾಡಿ. ತವಾದಲ್ಲಿ ಸಣ್ಣ ಚಿಲ್ಲಾ ಮಾಡಿ, ತುಂಡುಗಳಾಗಿ ಕತ್ತರಿಸಿ ಚಟ್ನಿಯೊಂದಿಗೆ ಬಡಿಸಿ.

  • ಸ್ಪೈಸಿ ಪೀನಟ್ ಚಾಟ್: ಬೇಯಿಸಿದ ಅಥವಾ ಹುರಿದ ಶೇಂಗಾಗೆ ಹೆಚ್ಚಿದ ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ, ಕೊತ್ತಂಬರಿ, ನಿಂಬೆ ರಸ, ಜೀರಿಗೆ ಪುಡಿ, ಚಾಟ್ ಮಸಾಲ ಹಾಗೂ ಸೇವಿಯನ್ನು ಮಿಕ್ಸ್ ಮಾಡಿದರೆ ಖಾರ ಖಾರವಾದ ಚಾಟ್ ಸಿದ್ಧ.

  • ಪನೀರ್ ಟಿಕ್ಕಾ ಬೈಟ್ಸ್: ಪನೀರ್ ತುಂಡುಗಳಿಗೆ ಗಟ್ಟಿ ಮೊಸರು, ತಂದೂರಿ ಮಸಾಲ, ಖಾರದ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಗೂ ಉಪ್ಪು ಹಾಕಿ ಮಿಕ್ಸ್ ಮಾಡಿ ತವಾದಲ್ಲಿ ಹಗುರವಾಗಿ ಬೇಯಿಸಿ, ನಿಂಬೆ ರಸ ಚಿಮುಕಿಸಿ ಬಡಿಸಿ.

  • ಸ್ವೀಟ್ ಬನಾನಾ ಚಾಟ್: ಬಾಳೆಹಣ್ಣಿನ ಬಿಲ್ಲೆಗಳಿಗೆ ಜೇನುತುಪ್ಪ ಅಥವಾ ಬೆಲ್ಲದ ಪುಡಿ, ಹುರಿದ ಕೊಬ್ಬರಿ, ಒಣಹಣ್ಣುಗಳು ಮತ್ತು ಏಲಕ್ಕಿ ಪುಡಿ ಸೇರಿಸಿ ಹಗುರವಾಗಿ ಮಿಕ್ಸ್ ಮಾಡಿ ಸಿಹಿ ತಿಂಡಿಯಾಗಿ ಬಡಿಸಿ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular