ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ ಸಿನಿಮಾ ‘ಮೈಸಾ’ ಚಿತ್ರದ ಮೊದಲ ಹಾಡು ‘ಓ ಮೈಸಾ ರೇ’ ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆಯಾಗಿದೆ. ಟೀಸರ್ ಮೂಲಕ ಕುತೂಹಲ ಮೂಡಿಸಿದ್ದ ಈ ಚಿತ್ರದ ಹೊಸ ಹಾಡಿನಲ್ಲಿ ರಶ್ಮಿಕಾ ಅವರ ತೀವ್ರ ಸ್ವರೂಪದ ರುದ್ರಾವತಾರ ಮತ್ತು ಮಾಸ್ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ಶಕ್ತಿಶಾಲಿ ಕಾಡಿನ ಹಿನ್ನೆಲೆಯಲ್ಲಿ ನೃತ್ಯಜೆಕ್ಸ್ ಬಿಜೋಯ್ ಸಂಗೀತ ಸಂಯೋಜಿಸಿರುವ ಈ ಹಾಡಿನಲ್ಲಿ ಗಿರಿಜನ ಸಂಸ್ಕೃತಿಯ ತಾಂಡವ್ ಶೈಲಿಯ ನೃತ್ಯ ಮತ್ತು ಶಕ್ತಿಶಾಲಿ ಬಿಟ್ಗಳಿವೆ. ಬೃಂದಾ ಮಾಸ್ಟರ್ ನೃತ್ಯ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಹಾಡಿನಲ್ಲಿ ರಶ್ಮಿಕಾ ಮಂದಣ್ಣ ಅತ್ಯಂತ ಆಕ್ರಮಣಕಾರಿ ಹಾಗೂ ಭಾವನಾತ್ಮಕ ಅಭಿನಯ ನೀಡಿದ್ದಾರೆ. ತಮ್ಮ ಪಾತ್ರದ ಕುರಿತು ಬರೆದುಕೊಂಡಿರುವ ರಶ್ಮಿಕಾ, ಈ ಹಾಡನ್ನು “ನೋವು, ಕೋಪ ಮತ್ತು ಜಾಗೃತಿಯ ಯುದ್ಧ ಕಹಳೆ” ಎಂದು ಬಣ್ಣಿಸಿದ್ದಾರೆ.
ತಂದೆ-ಮಗಳ ಅಳಿಸಲಾಗದ ಅನುಬಂಧ ರವೀಂದ್ರ ಪುಲ್ಲೆ ನಿರ್ದೇಶನದ ಈ ಚಿತ್ರವು ಗಿರಿಜನ ಪ್ರದೇಶದ ಹಿನ್ನೆಲೆಯಲ್ಲಿ ಸಾಗುವ ಕಥೆಯನ್ನೊಳಗೊಂಡಿದೆ. ಆಕ್ಷನ್ ಸನ್ನಿವೇಶಗಳ ಜೊತೆಗೆ ತಂದೆ ಮತ್ತು ಮಗಳ ನಡುವಿನ ಭಾವನಾತ್ಮಕ ಬಾಂಧವ್ಯವನ್ನು ಮುಖ್ಯವಾಗಿಟ್ಟುಕೊಂಡು ಈ ಸಿನಿಮಾ ರೂಪಿಸಲಾಗಿದೆ.
ಬಿಡುಗಡೆ ದಿನಾಂಕ ನಿಗದಿ ಅನ್ಫಾರ್ಮುಲಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಈಶ್ವರಿ ರಾವ್, ಗುರು ಸೋಮಸುಂದರಂ ಮತ್ತು ರಾವ್ ರಮೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಮೈಸಾ’ ಸಿನಿಮಾ ಮುಂಬರುವ ನವೆಂಬರ್ 27, 2026 ರಂದು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

