ಮುಂಬೈನಲ್ಲಿ ಪುಸ್ತಕಗಳು, ಆಲೋಚನೆಗಳು ಹಾಗೂ ಸಾಂಸ್ಕೃತಿಕ ಚರ್ಚೆಗಳಿಗಾಗಿ ನೂತನ ಗ್ರಂಥಾಲಯವೊಂದು ಆರಂಭಗೊಂಡಿದ್ದು, ಇದರ ಉದ್ಘಾಟನಾ ಸಮಾರಂಭದಲ್ಲಿ ಸಿನಿಮಾ, ಫ್ಯಾಷನ್ ಹಾಗೂ ಸಾಹಿತ್ಯ ಕ್ಷೇತ್ರದ ಪ್ರಮುಖ ಗಣ್ಯರು ಭಾಗವಹಿಸಿ ಮಿಂಚಿದ್ದಾರೆ. ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ (ಎನ್‌ಎಮ್‌ಎಸಿಸಿ) ವತಿಯಿಂದ ಈ ವಿಶೇಷ ಗ್ರಂಥಾಲಯವನ್ನು ಅನಾವರಣಗೊಳಿಸಲಾಗಿದ್ದು, ವಾಚನಾಭಿರುಚಿ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಸಮಾರಂಭದಲ್ಲಿ ಭಾಗವಹಿಸಿದ ಗಣ್ಯರು ಹಾಗೂ ಅವರ ಉಡುಪಿನ ವೈಖರಿ ಹೀಗಿತ್ತು:
-
ಇಶಾ ಅಂಬಾನಿ: ಕಸೂತಿ ಕೆಲಸವಿರುವ ಬ್ರೊಕೇಡ್ ಬ್ಲೌಸ್ ಹಾಗೂ ಡಾರ್ಕ್ ಬ್ಲೂ ಜೀನ್ಸ್ ಧರಿಸಿ ಆಧುನಿಕ ಲುಕ್‌ನಲ್ಲಿ ಕಾಣಿಸಿಕೊಂಡರು. ವಜ್ರದ ಓಲೆಗಳು, ಬಳೆ ಹಾಗೂ ಕೆಂಪು ಬಣ್ಣದ ಶೂಗಳು ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದ್ದವು.
-
ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್: ನಟಿ ಕರೀನಾ ಕಪೂರ್ ಸಬ್ಯಾಸಚಿ ವಿನ್ಯಾಸದ ಪೇಸ್ಲೇ ಪ್ರಿಂಟ್ ಶರ್ಟ್ ಹಾಗೂ ಕಪ್ಪು ಟ್ರೌಸರ್ ಧರಿಸಿ ಮಿಂಚಿದರೆ, ಪತಿ ಸೈಫ್ ಅಲಿ ಖಾನ್ ಟ್ಯಾನ್ ಕಲರ್ ಸೂಟ್ ಹಾಗೂ ಡಾರ್ಕ್ ಬ್ಲೂ ಶರ್ಟ್‌ನಲ್ಲಿ ಕ್ಲಾಸಿಕ್ ಲುಕ್ ನೀಡಿದರು.
-
ಕಾಜೋಲ್ ಮತ್ತು ನ್ಯಾಸಾ ದೇವಗನ್: ನಟಿ ಕಾಜೋಲ್ ಸಂಪೂರ್ಣ ಕಪ್ಪು ಬಣ್ಣದ ಔಟ್‌ಫಿಟ್‌ನಲ್ಲಿ ರಾಜಸಿಕವಾಗಿ ಕಾಣಿಸಿಕೊಂಡರೆ, ಮಗಳು ನ್ಯಾಸಾ ದೇವಗನ್ ಮೆಟಾಲಿಕ್ ಗ್ರೆ ಟಾಪ್ ಹಾಗೂ ಡೈಮಂಡ್ ಜ್ಯುವೆಲ್ಲರಿ ಧರಿಸಿ ಗಮನ ಸೆಳೆದರು.
-
ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್: ಬಾಲಿವುಡ್ ದಂಪತಿ ಶಾಹಿದ್ ಕಪೂರ್ ಹಾಗೂ ಮೀರಾ ರಜಪೂತ್ ಕೂಡ ಈ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
-
ವಿಕ್ರಾಂತ್ ಮಸ್ಸಿ ಮತ್ತು ಸೊನಾಲಿ ಬೇಂದ್ರೆ: ನಟ ವಿಕ್ರಾಂತ್ ಮಸ್ಸಿ ನೇವಿ ಬ್ಲೂ ಬ್ಲೇಜರ್ ಮತ್ತು ಗ್ರೆ ಟ್ರೌಸರ್ಸ್‌ನೊಂದಿಗೆ ಸಿಂಪಲ್ ಆಗಿ ಕಾಣಿಸಿಕೊಂಡರೆ, ನಟಿ ಸೊನಾಲಿ ಬೇಂದ್ರೆ ನಯವಾದ ಹೂವಿನ ಕಸೂತಿ ಇರುವ ಕಪ್ಪು ಎಥ್ನಿಕ್ ಉಡುಪಿನಲ್ಲಿ ಹಬ್ಬದ ಕಳೆ ತಂದರು.

