ಬೆಂಗಳೂರು : ಶಿಶು ಅಭಿವೃದ್ದಿ ಯೋಜನೆ, ಬೆಂಗಳೂರು ಪೂರ್ವ , ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಇರುವ 22 ಅಂಗನವಾಡಿ ಕಂ.ಕ್ರೀಚ್ ಕೇಂದ್ರಗಳಿಗೆ 22 ಕಾರ್ಯಕರ್ತೆಯರು ಹಾಗೂ 22 ಸಹಾಯಕಿಯರ ಹುದ್ದೆಗಳಿಗೆ ಗೌರವ ಧನದ ಆಧಾರದ ಮೇಲೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ಮಹಿಳಾ ಅಭ್ಯರ್ಥಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ, 3ನೇ ಮಹಡಿ, ಅಂಚೆ ಕಚೇರಿ ಎದುರು ಆರ್.ಟಿ. ನಗರ ಮುಖ್ಯರಸ್ತೆ, ಬೆಂಗಳೂರು ಇಲ್ಲಿ ಅರ್ಜಿಗಳನ್ನು ಪಡೆದು ನವೆಂಬರ್ 30 ರೊಳಗಾಗಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಮಹಿಳಾ ಅಭ್ಯರ್ಥಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ, 3ನೇ ಮಹಡಿ, ಅಂಚೆ ಕಚೇರಿ ಎದುರು ಆರ್.ಟಿ. ನಗರ ಮುಖ್ಯರಸ್ತೆ, ಬೆಂಗಳೂರು ಸಂಪರ್ಕಿಸಬಹುದು ಎಂದು ಬೆಂಗಳೂರು ಪೂರ್ವ ಶಿಶು ಅಭಿವೃದ್ದಿ ಯೋಜನಾಧಿಕಾಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಖಾಲಿ ಇರುವ 6 ‘ಗ್ರಾಮ ಒನ್’ ಕೇಂದ್ರಗಳ ಫ್ರಾಂಚೈಸಿ ನೇಮಕಕ್ಕೆ ಅರ್ಜಿ ಆಹ್ವಾನ
ಬಳ್ಳಾರಿ : ಜಿಲ್ಲೆಯಲ್ಲಿ ಖಾಲಿ ಇರುವ ಗ್ರಾಮ ಒನ್ ಸೇವಾ ಕೇಂದ್ರಗಳಿಗೆ ನೂತನವಾಗಿ ಫ್ರಾಂಚೈಸಿಗಳನ್ನು ನೇಮಕ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 142 ಗ್ರಾಮ ಒನ್ ಕೇಂದ್ರಗಳು ಮಂಜೂರಾಗಿದ್ದು, ಪ್ರಸ್ತುತ ಸಾರ್ವಜನಿಕರಿಗೆ ಸೇವೆ ನೀಡುತ್ತಿವೆ. ಇದೀಗ ಬಳ್ಳಾರಿ ಹಾಗೂ ಸಂಡೂರು ತಾಲೂಕುಗಳ ಒಟ್ಟು 6 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಖಾಲಿ ಇರುವ ಕೇಂದ್ರಗಳಿಗೆ ಮರು-ಅಧಿಸೂಚನೆ ಹೊರಡಿಸಲಾಗಿದೆ.
ಖಾಲಿ ಇರುವ ಗ್ರಾಮ ಪಂಚಾಯತಿ ಕೇಂದ್ರಗಳ ವಿವರ:
ಬಳ್ಳಾರಿ ತಾಲೂಕು: ಬಸರಕೋಡು (ಗ್ರೇಡ್ 1), ಅಮರಾಪುರ (ಗ್ರೇಡ್ 1).
ಸಂಡೂರು ತಾಲೂಕು: ಕಾಳಿಂಗೇರಿ (ಗ್ರೇಡ್ 2), ದರೋಜಿ (ಗ್ರೇಡ್ 1), ಸೋವೇನಹಳ್ಳಿ (ಗ್ರೇಡ್ 2), ದೇವಗಿರಿ (ಗ್ರೇಡ್ 2).
ಆಸಕ್ತ ನಾಗರಿಕರು ಸರ್ಕಾರದ ಸೇವಾ ಸಿಂಧು ವೆಬ್ ಸೈಟ್ ಪೋರ್ಟಲ್ ಲಿಂಕ್ (https://sevasindhuservices.karnataka.gov.in/directApply…) ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ನವೆಂಬರ್ 15 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟತಾಲೂಕಿನ ತಹಶೀಲ್ದಾರ್ ಕಾರ್ಯಾಲಯ ಅಥವಾ ಅಧಿಕೃತ ವೆಬ್ ಸೈಟ್ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
ಕನ್ನಡ ರಾಜ್ಯೋತ್ಸವ ಸಂಭ್ರಮ: ನವೆಂಬರ್ ಪೂರ್ತಿ ಕನ್ನಡ ಪುಸ್ತಕ ಪ್ರಾಧಿಕಾರದ ಕೃತಿಗಳಿಗೆ ಶೇ. 50 ರಿಯಾಯಿತಿ
ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್ ತಿಂಗಳ ಪೂರ್ತಿ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪ್ರಕಟಣೆಗಳ ಮೇಲೆ ಶೇಕಡಾ 50ರಷ್ಟು ರಿಯಾಯಿತಿ ನೀಡುವುದಾಗಿ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ಅವರು ತಿಳಿಸಿದ್ದಾರೆ.
ಈ ರಿಯಾಯಿತಿ ಸೌಲಭ್ಯವು ಬೆಂಗಳೂರಿನ ಕನ್ನಡ ಭವನದಲ್ಲಿರುವ ‘ಸಿರಿಗನ್ನಡ ಪುಸ್ತಕ ಮಳಿಗೆ’ಯಲ್ಲಿ ಲಭ್ಯವಿರಲಿದೆ (ಸಂಪರ್ಕ ಸಂಖ್ಯೆ: 080-22107705). ಇದರೊಂದಿಗೆ ರಾಜ್ಯದ ಎಲ್ಲಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗಳಲ್ಲಿ ಹಾಗೂ ಪ್ರಾಧಿಕಾರವು ತೆರೆದಿರುವ ಎಲ್ಲಾ ‘ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ’ಗಳಲ್ಲಿಯೂ ಪುಸ್ತಕ ಪ್ರಿಯರಿಗೆ ಈ ರಿಯಾಯಿತಿ ದೊರೆಯಲಿದೆ.
ಮಳಿಗೆಗಳಿಗೆ ತೆರಳಲು ಸಾಧ್ಯವಾಗದ ಓದುಗರು ಪ್ರಾಧಿಕಾರದ ಅಧಿಕೃತ ವೆಬ್ ಸೈಟ್ (https://kpp.karnataka.gov.in) ಮೂಲಕ ಆನ್ ಲೈನ್ ನಲ್ಲಿಯೂ ಸಹ ಶೇ. 50ರ ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಖರೀದಿಸಬಹುದಾಗಿದೆ.
ಕನ್ನಡ ಪುಸ್ತಕ ಪ್ರಾಧಿಕಾರವು ವ್ಯಕ್ತಿಚಿತ್ರಗಳು, ನಾಟಕ, ಅಲೆಮಾರಿ ಸಮುದಾಯಗಳ ಕುರಿತ ಬರಹಗಳು, ವೈದ್ಯಕೀಯ, ಪ್ರಾಚೀನ ಸಾಹಿತ್ಯ, ಜಾನಪದ, ಪರಿಸರ ಹಾಗೂ ಕೃಷಿ ಸೇರಿದಂತೆ ಹಲವು ಪ್ರಕಾರಗಳ ಮೌಲಿಕ ಕೃತಿಗಳನ್ನು ಪ್ರಕಟಿಸಿದೆ. ಪ್ರಾಜ್ಞರಿಂದ ರಚಿತವಾದ ಈ ಉಪಯುಕ್ತ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಿ ಸದುಪಯೋಗಪಡಿಸಿಕೊಳ್ಳುವಂತೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ

