ಬೆಂಗಳೂರು-ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆರಂಭಿಸಿದ್ದು, ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ನವೆಂಬರ್ 2ರಂದು ಸಂಜೆ 4 ಗಂಟೆವರೆಗೆ ಅವಕಾಶ ನೀಡಿದೆ.
ನವೆಂಬರ್ 3ರಂದು ಸಂಜೆ 4ಕ್ಕೆ ಅಣಕು ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಲಾಗುತ್ತದೆ. ಬಳಿಕ ನ.3ರಂದು ಸಂಜೆ 5ರಿಂದ ನ.5ರ ಬೆಳಿಗ್ಗೆ 10ಗಂಟೆವರೆಗೆ ಆಪ್ಷನ್‌್ಸ ಬದಲಿಸಿಕೊಳ್ಳಲು, ಹೊಸದಾಗಿ ಸೇರಿಸಲು, ಅಳಿಸಲು ಸಮಯ ನಿಗದಿಪಡಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ನ.5ರಂದು ಸಂಜೆ 8 ಗಂಟೆಗೆ ತಾತ್ಕಾಲಿಕ ಫಲಿತಾಂಶ ಹಾಗೂ ನ.6ರಂದು ಬೆಳಿಗ್ಗೆ 11 ಗಂಟೆಗೆ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ಮೊದಲ ಸುತ್ತಿಗೆ ದಾಖಲಿಸಿರುವ ಆಪ್ಷನ್‌್ಸ ಎರಡನೇ ಸುತ್ತಿಗೂ ಇರುತ್ತವೆ. ಹೀಗಾಗಿ ಎಚ್ಚರಿಕೆಯಿಂದ ಆಪ್ಷನ್‌್ಸ ದಾಖಲಿಸಿ. ಎರಡನೇ ಸುತ್ತಿನಲ್ಲಿ ಹೊಸದಾಗಿ ಆಪ್ಷನ್‌್ಸ ದಾಖಲಿಸಲು ಅವಕಾಶ ಇರುವುದಿಲ್ಲ ಎಂದು ಅವರು ವಿವರಿಸಿದ್ದಾರೆ.

