HomeKarnatakaಭಾರತ ಜಾಗತಿಕ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಕೇಂದ್ರವಾಗಲಿದೆ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸ

ಭಾರತ ಜಾಗತಿಕ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಕೇಂದ್ರವಾಗಲಿದೆ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸ

ಪುಣೆ-ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವದಲ್ಲಿ ಮುಂಬರುವ ಕೆಲವೇ ವರ್ಷಗಳಲ್ಲಿ ಎಲೆಕ್ಟ್ರಿಕ್‌ ವಾಹನ ಕ್ಷೇತ್ರದಲ್ಲಿ ಭಾರತವು ಜಾಗತಿಕ ಶಕ್ತಿಯಾಗಿ ಹೊರ ಹೊಮಲಿದೆ ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್‌‍.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಪುಣೆಯಲ್ಲಿ ಹಮಿಕೊಳ್ಳಲಾಗಿದ್ದ ಏಕಾ ಮೊಬಿಲಿಟಿ ಮತ್ತು ಪಿನ್ನಾಕಲ್‌ ಸಮೂಹದ ಹೊಸ ಉತ್ಪಾದನೆಗಳ ಲೋಕಾರ್ಪಣೆ ಮಾಡುವ ಏಕಾ ಅವಿರ್ಭವ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತವು ಜಾಗತಿಕ ಉತ್ಪಾದನಾ ಶಕ್ತಿ ಕೇಂದ್ರವಾಗುವತ್ತ ತ್ವರಿತ ಹೆಜ್ಜೆಗಳನ್ನು ಇಡುತ್ತಿದೆ. ಆತನಿರ್ಭರ ಭಾರತ ಮತ್ತು ವಿಕಸಿತ ಭಾರತ 2047ರ ದೃಷ್ಟಿಕೋನವು ಸ್ಥಳೀಯ ಉತ್ಪಾದನೆ, ತಾಂತ್ರಿಕ ನಾವೀನ್ಯತೆ ಮತ್ತು ಸುಸ್ಥಿರ ಚಲನಶೀಲತೆಗೆ ಬಲವಾದ ನೆಲೆಯನ್ನು ಒದಗಿಸಿದೆ ಎಂದು ಪ್ರತಿಪಾದಿಸಿದ್ದಾರೆ.

ಆಟೋಮೊಬೈಲ್‌ ಉದ್ಯಮದ ಪ್ರಭಾವ

ಎಲೆಕ್ಟ್ರಿಕ್‌ ವಾಣಿಜ್ಯ ವಾಹನಗಳು, ಆಟೋಮೋಟಿವ್‌ ಘಟಕಗಳು ಮತ್ತು ಎಂಜಿನಿಯರಿಂಗ್‌ ಪರಿಹಾರಗಳಲ್ಲಿ ಸ್ಥಳೀಯ ಉತ್ಪಾದನಾ ಸಾಮರ್ಥ್ಯಗಳ ವಿಸ್ತರಣೆಯು ಭಾರತದ ಉತ್ಪಾದನಾ ಪೂರಕ ವ್ಯವಸ್ಥೆಯಲ್ಲಿ ಭಾರತೀಯ ಉದ್ಯಮ ಬೆಳೆಯುತ್ತಿರುವ ವಿಶ್ವಾಸವನ್ನು ಪ್ರದರ್ಶಿಸುತ್ತದೆ.ಆಟೋಮೋಟಿವ್‌ ಮತ್ತು ಆಟೋಮೊಬೈಲ್‌ ಉದ್ಯಮವು ಭಾರತದ ಉತ್ಪಾದನಾ ಪ್ರಯಾಣದ ಕೇಂದ್ರವಾಗಿದೆ. ಇದು ಲಕ್ಷಾಂತರ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ವಿಶಾಲವಾದ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕಾ ಪೂರಕ ವ್ಯವಸ್ಥೆಯನ್ನು ಆಧಾರವಾಗಿಟ್ಟುಕೊಳ್ಳುತ್ತದೆ ಮತ್ತು ಉಕ್ಕು, ಎಲೆಕ್ಟ್ರಾನಿಕ್‌್ಸ, ಎಂಜಿನಿಯರಿಂಗ್‌, ಸಾಗಣೆ ಮತ್ತು ಸೇವೆಗಳಲ್ಲಿ ಪ್ರಬಲವಾದ ಗುಣಾತಕ ಪರಿಣಾಮವನ್ನು ಬೀರುತ್ತಿದೆ ಎಂದು ಸಚಿವರು ಒತ್ತಿ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೃಹತ್‌ ಕೈಗಾರಿಕಾ ಸಚಿವಾಲಯವು ನೀತಿ ಉದ್ದೇಶವನ್ನು ಅಳೆಯಬಹುದಾದ ಫಲಿತಾಂಶಗಳತ್ತ ಗಮನಹರಿಸಿದೆ. ನಮ ಯೋಜನೆಗಳು ಹೂಡಿಕೆ, ದೇಶೀಯ ಮೌಲ್ಯವರ್ಧನೆ, ಮುಂದುವರಿದ ತಂತ್ರಜ್ಞಾನ ಉತ್ಪಾದನೆ ಮತ್ತು ಸ್ವಚ್ಛ ಚಲನಶೀಲತೆಗೆ ಪರಿವರ್ತನೆಯನ್ನು ಬೆಂಬಲಿಸುತ್ತಿವೆ. ಎಲೆಕ್ಟ್ರಿಕ್‌ ವಾಹನ ವಲಯಕ್ಕೆ ಉತ್ತೇಜಿಸಲು ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ತಂದ 11,900 ಕೋಟಿ ರೂ.ಗಳ ಯೋಜನೆಗಳ ಫಲವಾಗಿ 30 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್‌ ವಾಹನಗಳನ್ನು ಮಾರಾಟ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಗಣ್ಯರ ಉಪಸ್ಥಿತಿ

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌‍, ಕೇಂದ್ರದ ಭೂಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌‍. ಸಂತೋಷ್‌, ಏಕಾ ಮೊಬಿಲಿಟಿಯ ಡಾ.ಸುಧೀರ್‌ ಮೆಹ್ತಾ ಸೇರಿ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular