HomeEntertainmentಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದ 'ಕಿಂಗ್': ಬಿಡುಗಡೆಗೂ ಮುನ್ನವೇ 175 ಕೋಟಿಗೆ ಓವರ್‌ಸೀಸ್ ಹಕ್ಕು...

ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದ ‘ಕಿಂಗ್’: ಬಿಡುಗಡೆಗೂ ಮುನ್ನವೇ 175 ಕೋಟಿಗೆ ಓವರ್‌ಸೀಸ್ ಹಕ್ಕು ಸೇಲ್!

ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ನಟನೆಯ ಬಹುನಿರೀಕ್ಷಿತ ‘ಕಿಂಗ್’ ಗ್ಯಾಂಗ್‌ಸ್ಟರ್ ಆಕ್ಷನ್ ಡ್ರಾಮಾ ಸಿನಿಮಾ ಬಿಡುಗಡೆಗೂ ಮುನ್ನವೇ ವಿಶ್ವಮಟ್ಟದಲ್ಲಿ ಹೊಸ ದಾಖಲೆ ಬರೆದಿದೆ. ‘ಪಠಾನ್’ ಮತ್ತು ‘ವಾರ್’ ಖ್ಯಾತಿಯ ಸಿದ್ಧಾರ್ಥ್ ಆನಂದ್ ನಿರ್ದೇಶಿಸುತ್ತಿರುವ ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಇದುವರೆಗೆ ಕಾಣದ ಬೃಹತ್ ಮೊತ್ತದ ಸOverseas ವಿತರಣೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಧಮಾಕಾ ಸೃಷ್ಟಿಸಿದೆ.

ಪಿಂಕ್‌ವಿಲ್ಲಾ ವರದಿಯ ಪ್ರಕಾರ, ಪ್ರಸಿದ್ಧ ಫಾರ್ಸ್ ಫಿಲ್ಮ್ಸ್ ಸಂಸ್ಥೆಯು ‘ಕಿಂಗ್’ ಚಿತ್ರದ ಸ Overseas ವಿತರಣೆಯ ಹಕ್ಕನ್ನು ಭಾರಿ 175 ಕೋಟಿ ರೂಪಾಯಿಗಳಿಗೆ ಖರೀದಿ ಮಾಡಿದೆ. ಇದು ಭಾರತೀಯ ಸಿನಿಮಾವೊಂದರ ಸ Overseas ಹಕ್ಕು ಮಾರಾಟವಾದ ಸಾರ್ವಕಾಲಿಕ ಗರಿಷ್ಠ ಮೊತ್ತವಾಗಿದೆ.

ಸಾಮಾನ್ಯವಾಗಿ ಬಾಲಿವುಡ್ ಸಿನಿಮಾಗಳಿಗೆ ಸಿಗದ ‘ಮಿನಿಮಮ್ ಗ್ಯಾರಂಟಿ’ (MG) ಆಧಾರದ ಮೇಲೆ ಈ ಐತಿಹಾಸಿಕ ಒಪ್ಪಂದ ನಡೆದಿದೆ. ಇದುವರೆಗೆ ಭಾರತದ ಯಾವುದೇ ಪ್ರಮುಖ ಚಿತ್ರವೂ ಮಿನಿಮಮ್ ಗ್ಯಾರಂಟಿ ಆಧಾರದಲ್ಲಿ ಸ Overseas ಮಾರುಕಟ್ಟೆಯಲ್ಲಿ 100 ಕೋಟಿ ರೂಪಾಯಿಗಳ ಗಡಿಯನ್ನು ದಾಟಿರಿಲಿಲ್ಲ. ಆದರೆ ಶಾರುಖ್ ಅವರ ಜಾಗತಿಕ ಕ್ರೇಜ್‌ನಿಂದಾಗಿ ಈ ಸಿನಿಮಾ 175 ಕೋಟಿ ಬಿಸಿನೆಸ್ ಮಾಡಿ ಇತಿಹಾಸ ನಿರ್ಮಿಸಿದೆ. ಆರಂಭದಲ್ಲಿ ಯಶ್ ರಾಜ್ ಫಿಲ್ಮ್ಸ್ ಈ ಚಿತ್ರವನ್ನು ವಿದೇಶದಲ್ಲಿ ಬಿಡುಗಡೆ ಮಾಡಲು ಯೋಜಿಸಿತ್ತಾದರೂ, ಇದೀಗ ಒಪ್ಪಂದವು ಫಾರ್ಸ್ ಫಿಲ್ಮ್ಸ್ ಪಾಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಾರಾಗಣ ಮತ್ತು ಬಿಡುಗಡೆ ದಿನಾಂಕ: ಶಾರುಖ್ ಖಾನ್ ಮಗಳು ಸುಹಾನಾ ಖಾನ್ ಅವರ ಬೆಳ್ಳಿಪರದೆಯ ಚೊಚ್ಚಲ ಪ್ರವೇಶಕ್ಕೆ ಈ ಸಿನಿಮಾ ವೇದಿಕೆಯಾಗಿದ್ದು, ಪ್ರಮುಖ ಪಾತ್ರಗಳಲ್ಲಿ ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್, ರಾಣಿ ಮುಖರ್ಜಿ, ಅನಿಲ್ ಕಪೂರ್, ಜಾಕಿ ಶ್ರಾಫ್, ಜೈದೀಪ್ ಅಹ್ಲಾವತ್, ಅರ್ಷದ್ ವಾರ್ಸಿ ಮತ್ತು ರಾಘವ್ ಜುಯಲ್ ನಟಿಸುತ್ತಿದ್ದಾರೆ. ಈ ದೃಶ್ಯಕಾವ್ಯವು 2026 ರ ಡಿಸೆಂಬರ್ 24 ರಂದು ವಿಶ್ವಾದ್ಯಂತ ಪ್ರದರ್ಶನ ಕಾಣಲಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular