HomeIndiaಬೆಂಗಳೂರಿನ ಕಾನ್ರಾಡ್ ಹೋಟೆಲ್ ಈಜುಕೊಳದಲ್ಲಿ ವಿದ್ಯುತ್ ಅವಘಡ: ಜರ್ಮನ್, ಸ್ಲೋವಾಕ್ ಪ್ರಜೆಗಳು ಸಾವು; ರಕ್ಷಣೆಗೆ ಧಾವಿಸಿದ...

ಬೆಂಗಳೂರಿನ ಕಾನ್ರಾಡ್ ಹೋಟೆಲ್ ಈಜುಕೊಳದಲ್ಲಿ ವಿದ್ಯುತ್ ಅವಘಡ: ಜರ್ಮನ್, ಸ್ಲೋವಾಕ್ ಪ್ರಜೆಗಳು ಸಾವು; ರಕ್ಷಣೆಗೆ ಧಾವಿಸಿದ ಇಬ್ಬರಿಗೆ ಗಾಯ

ಬೆಂಗಳೂರು-ನಗರದ ಉಲ್ಸೂರು ಬಳಿ ಇರುವ ಪಂಚತಾರಾ ಹೋಟೆಲ್ ‘ಕಾನ್ರಾಡ್’ನ ಮೂರನೇ ಮಹಡಿಯಲ್ಲಿರುವ ಈಜುಕೊಳದಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ದುರಂತದಲ್ಲಿ ಶಂಕಿತ ವಿದ್ಯುತ್ ಸ್ಪರ್ಶಿಸಿ ಇಬ್ಬರು ವಿದೇಶಿ ಪ್ರಜೆಗಳು ಮೃತಪಟ್ಟಿದ್ದಾರೆ. ಸಂಕಷ್ಟದಲ್ಲಿದ್ದವರನ್ನು ರಕ್ಷಿಸಲು ಧಾವಿಸಿದ ಅಮೆರಿಕದ ಪ್ರವಾಸಿ ಹಾಗೂ ಹೋಟೆಲ್ ಸಿಬ್ಬಂದಿ ಗಾಯಗೊಂಡಿದ್ದಾರೆ.

ಅಲೆಕ್ಸಾಂಡರ್ ಮ್ಯಾಕ್ಸಿಮಿಲಿಯನ್ ಥೀಸ್ (57), ಜರ್ಮನ್ ಪ್ರಜೆ ಹಾಗೂ ಲುಫ್ತಾನ್ಸಾ ವಿಮಾನಯಾನ ಸಂಸ್ಥೆಯ ಸಿಬ್ಬಂದಿ, ಹಾಗೂ ಜುರಾಜ್ ಹೊರ್ವಾಟ್ (45) ಸ್ಲೋವಾಕಿಯಾ ಪ್ರಜೆ ಹಾಗೂ ಐಬಿಎಂ ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ಮೃತಪಟ್ಟವರು

ಮ್ಯಾಥ್ಯೂ ಡೆಸಾಂಟಿಸ್ (41): ಹೋಟೆಲ್‌ನಲ್ಲಿ ತಂಗಿದ್ದ ಅಮೆರಿಕದ ಪ್ರವಾಸಿ.,ರಾಹುಲ್ ತಿವಾರಿ (28): ಕಾನ್ರಾಡ್ ಹೋಟೆಲ್‌ನ ಪೂಲ್ ಅಟೆಂಡೆಂಟ್ ಹಾಗೂ ಲೈಫ್‌ಗಾರ್ಡ್ ಗಾಯಗೊಂಡವರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿದ್ಯುತ್ ಪ್ರಸರಣದಿಂದ ದುರಂತ

ಕಾನ್ರಾಡ್ ಹೋಟೆಲ್‌ನ 3ನೇ ಮಹಡಿಯಲ್ಲಿರುವ ಈಜುಕೊಳದಲ್ಲಿ ವಿದೇಶಿ ಪ್ರಜೆಗಳು ಈಜುತ್ತಿದ್ದಾಗ ವಿದ್ಯುತ್ ಪ್ರವಹಿಸಿದೆ ಎನ್ನಲಾಗಿದೆ. ನೀರಲ್ಲಿದ್ದ ಇಬ್ಬರು ಅಪಾಯಕ್ಕೆ ಸಿಲುಕಿದ್ದನ್ನು ಕಂಡು, ಅವರನ್ನು ರಕ್ಷಿಸಲು ಅಮೆರಿಕದ ಪ್ರವಾಸಿ ಮ್ಯಾಥ್ಯೂ ಹಾಗೂ ಲೈಫ್‌ಗಾರ್ಡ್ ರಾಹುಲ್ ತಿವಾರಿ ತಕ್ಷಣ ಪೂಲ್‌ಗೆ ಧುಮುಕಿದ್ದಾರೆ. ಈ ವೇಳೆ ಅವರಿಗೂ ವಿದ್ಯುತ್ ಸ್ಪರ್ಶಿಸಿ ಗಾಯಗಳಾಗಿವೆ.

ಘಟನೆ ನಡೆದ ತಕ್ಷಣ ನಾಲ್ವರನ್ನೂ ಸಮೀಪದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ತೀವ್ರವಾಗಿ ಅಸ್ವಸ್ಥಗೊಂಡಿದ್ದ ಜರ್ಮನ್ ಹಾಗೂ ಸ್ಲೋವಾಕ್ ಪ್ರಜೆಗಳು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಗಾಯಗೊಂಡಿರುವ ಮ್ಯಾಥ್ಯೂ ಮತ್ತು ರಾಹುಲ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಪೊಲೀಸ್ ತನಿಖೆ

ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪೂಲ್‌ನಲ್ಲಿ ವಿದ್ಯುತ್ ಪ್ರವಹಿಸಲು ಕಾರಣವೇನು ಮತ್ತು ಹೋಟೆಲ್ ಸಿಬ್ಬಂದಿಯ ನಿರ್ಲಕ್ಷ್ಯವಿದೆಯೇ ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular