HomeKarnatakaಹಾಸನಾಂಬೆ ಜಾತ್ರಾ ಮಹೋತ್ಸವ: ಸಾಮಾನ್ಯ ಸರತಿ ದರ್ಶನಕ್ಕೆ ಸಮಯ ನಿಗದಿ ಸಾಧ್ಯವಿಲ್ಲ; ಸಚಿವ ಶಿವಲಿಂಗೇಗೌಡ

ಹಾಸನಾಂಬೆ ಜಾತ್ರಾ ಮಹೋತ್ಸವ: ಸಾಮಾನ್ಯ ಸರತಿ ದರ್ಶನಕ್ಕೆ ಸಮಯ ನಿಗದಿ ಸಾಧ್ಯವಿಲ್ಲ; ಸಚಿವ ಶಿವಲಿಂಗೇಗೌಡ

ಹಾಸನ :   ಐತಿಹಾಸಿಕ ಹಾಸನಾಂಬ ಉತ್ಸವಕ್ಕೆ ಆಗಮಿಸುವ ಸಮಸ್ತ ಭಕ್ತರು ಅತ್ಯಂತ ಶಾಂತಿಯುತವಾಗಿ ದೇವಿ ದರ್ಶನ ಪಡೆಯಬೇಕು. ಸಾಮಾನ್ಯ ಸರತಿ ಸಾಲಿನಲ್ಲಿ ಬರುವವರಿಗೆ ಪ್ರತ್ಯೇಕ ಸಮಯ ನಿಗದಿ ಪಡಿಸಲು ಸಾಧ್ಯವಿಲ್ಲ. ಭಕ್ತಾದಿಗಳು ಸಹಕರಿಸಬೇಕು ಎಂದು ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಎಂ. ಶಿವಲಿಂಗೇಗೌಡ ಅವರು ವಿನಂತಿಸಿದ್ದಾರೆ.

 ಧರ್ಮ ದರ್ಶನದ ಸರತಿ ಸಾಲಿನಲ್ಲಿ ಆಗಮಿಸುವವರಿಗೂ ಸಮಯ ನಿಗದಿ ಪಡಿಸಬೇಕು ಎಂಬ ಭಕ್ತರ ಕೋರಿಕೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಚಿವ ಶಿವಲಿಂಗೇಗೌಡ ಅವರು ಲಕ್ಷಾಂತರ ಭಕ್ತರು ಆಗಮಿಸುತ್ತಿರುವ ಹಿನ್ನೆಲೆ ಪ್ರತ್ಯೇಕ ಸಮಯ ನಿಗದಿ ಪಡಿಸಲು ಸಾಧ್ಯವಿಲ್ಲ. ವಿಐಪಿ ದರ್ಶನ, ವಿಶೇಷ ದರ್ಶನದ ಪಾಸ್ ಪಡೆದು ಬರುವ ಭಕ್ತರಿಗೆ ತ್ವರಿತ ದರ್ಶನದ ಅವಕಾಶ ಸಿಗಬಹುದು. ಆದರೆ ಧರ್ಮ ದರ್ಶನದ ಸರತಿ ಸಾಲಿನಲ್ಲಿ ಬರುವವರಿಗೆ ಸಮಯ ನಿಗದಿಪಡಿಸಲು ಸಾಧ್ಯವಿಲ್ಲ. ಎಲ್ಲರೂ ಅತ್ಯಂತ ಶಾಂತಚಿತ್ತರಾಗಿ, ಸಾವಕಾಶದಿಂದ ದೇವಿಯ ದರ್ಶನ ಪಡೆಯುವ ಮೂಲಕ ಹಾಸನಾಂಬೆಯ ಕೃಪೆಗೆ ಪಾತ್ರರಾಗಬೇಕು ಎಂದು ಹೇಳಿದರು.

 ಭಕ್ತರು ಸರತಿಯಲ್ಲಿ ಹೆಚ್ಚು ಸಮಯ ಕಾಯುವಂತಹ ಪರಿಸ್ಥಿತಿ ಬರಬಾರದು, ತ್ವರಿತ ದರ್ಶನ ಪಡೆಯುವಂತಾಗ ಬೇಕು ಎಂಬ ನಿಟ್ಟಿನಲ್ಲಿ ಸಕಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ದಿನದ 24 ಗಂಟೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯ ಅರ್ಚಕರನ್ನು ನೇಮಕ ಮಾಡಿಕೊಳ್ಳುವ ಮೂಲಕ ಬಿಡುವು ರಹಿತ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 ಶ್ರೀ ಹಾಸನಾಂಬ ಜಾತ್ರೆಗೆ ಆಟೋರಿಕ್ಷಕ್ಯಾಬ್‌ಗಳ ದರ ನಿಗದಿ

 ಹಾಸನ :  ಶ್ರೀ ಹಾಸನಾಂಬ ದೇವಿ ದರ್ಶನ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ 2026ನೇ ಸಾಲಿನ ಅಂಗವಾಗಿ ದರ್ಶನಕ್ಕೆ ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಆಟೋರಿಕ್ಷಾಗಳಿಗೆ ತಾತ್ಕಾಲಿಕ ದರವನ್ನು ನಿಗದಿಪಡಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, ಹಾಸನ ರವರ ನಿರ್ದೇಶನದಂತೆ ಲೋಕೋಪಯೋಗಿ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಯ ಜಂಟಿ ಸಮಿತಿಯು ಮಾರ್ಗ ಸಮೀಕ್ಷೆ ನಡೆಸಿ, ನಗರದ 10 ಪ್ರಮುಖ ಸ್ಥಳಗಳನ್ನು ಗುರುತಿಸಿದ್ದು, ಹಾಸನಾಂಬ ದೇವಸ್ಥಾನದವರೆಗೆ ಕ್ರಮಿಸುವ ದೂರ ಮತ್ತು ಅದಕ್ಕೆ ತಗುಲುವ ದರಗಳ ಕೋಷ್ಟಕವನ್ನು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ನಿಗಧಿಪಡಿಸಿರುವ ಕನಿಷ್ಠ ದರಕ್ಕೆ ಅನುಗುಣವಾಗಿ ಸಿದ್ದಪಡಿಸಿದ್ದು, ತಾತ್ಕಾಲಿಕ ದರಪಟ್ಟಿಯ ಜಿಲ್ಲಾಧಿಕಾರಿಗಳು ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಅಧ್ಯಕ್ಷರಿಂದ ಅನುಮೋದನೆಗೊಂಡಿದೆ ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಕಾರ್ಯದಶಿಗಳು ಮತ್ತು ಅಧಿಕಾರಿಗಳು ತಿಳಿಸಿದ್ದಾರೆ.

ಧರ್ಮ ದರ್ಶನ ಮತ್ತು ರೂ.1000 ಟಿಕೆಟ್ ದ್ವಾರಕ್ಕೆ :- ಡೈರಿ ವೃತ್ತದಿಂದ: 3.70 ಕಿ.ಮೀ. – ರೂ.72, ರೈಲ್ವೆ ನಿಲ್ದಾಣದಿಂದ: 2.70 ಕಿ.ಮೀ. – ರೂ.54, ಹೊಸ ಬಸ್ ನಿಲ್ದಾಣ/ಕೋರ್ಟ್ ನಿಂದ: 2.40 ಕಿ.ಮೀ. ರೂ.54, ಹಳೆ ಬಸ್ ನಿಲ್ದಾಣದಿಂದ: 1.40 ಕಿ.ಮೀ ರೂ.54, ತಣ್ಣೀರುಹಳ್ಳ ವೃತ್ತದಿಂದ: 1.50 ಕಿ.ಮೀ. ರೂ.36, ರಿಂಗ್ ರಸ್ತೆ ವೃತ್ತ (ಸುಬೇದಾರ್ ಸರ್ಕಲ್) ಸಾಲಗಾಮೆ ರಸ್ತೆಯಿಂದ: 3.70 ಕಿ.ಮೀ. ರೂ.72, ಎನ್.ಆರ್. ಸರ್ಕಲ್ ನಿಂದ: 1 ಕಿ.ಮೀ. ರೂ.36, ಬಿಟ್ಟಗೌಡನಹಳ್ಳಿ ಸರ್ಕಲ್/ಪಾರ್ಕಿಂಗ್ ನಿಂದ: 1.10 ಕಿ.ಮೀ. ರೂ.36, ಮುಖ್ಯದ್ವಾರದಿಂದ ರೂ.300 ಕ್ಯೂವರೆಗೆ: 2 ಕಿ.ಮೀ. ರೂ.36, ಎಸ್.ಬಿ.ಐ. ಪಾರ್ಕಿಂಗ್ ಹೌಸಿಂಗ್ ಬೋರ್ಡ್ ನಿಂದ: 1.80 ಕಿ.ಮೀ. ರೂ.36.

ಧರ್ಮ ದರ್ಶನ ಮತ್ತು ರೂ.300 ಟಿಕೆಟ್ ದ್ವಾರಕ್ಕೆ :- ಡೈರಿ ವೃತ್ತದಿಂದ: 3.70 ಕಿ.ಮೀ. – ರೂ.72, ರೈಲ್ವೆ ನಿಲ್ದಾಣದಿಂದ: 2.70 ಕಿ.ಮೀ. – ರೂ.54, ಹೊಸ ಬಸ್ ನಿಲ್ದಾಣ/ಕೋರ್ಟ್ ನಿಂದ: 1.80 ಕಿ.ಮೀ. ರೂ.36, ಹಳೆ ಬಸ್ ನಿಲ್ದಾಣದಿಂದ: 0.80 ಕಿ.ಮೀ ರೂ.36, ತಣ್ಣೀರುಹಳ್ಳ ವೃತ್ತದಿಂದ: 2.50 ಕಿ.ಮೀ. ರೂ.54, ರಿಂಗ್ ರಸ್ತೆ ವೃತ್ತ (ಸುಬೇದಾರ್ ಸರ್ಕಲ್) ಸಾಲಗಾಮೆ ರಸ್ತೆಯಿಂದ: 2.70 ಕಿ.ಮೀ. ರೂ.54, ಎನ್.ಆರ್. ಸರ್ಕಲ್ ನಿಂದ: 1 ಕಿ.ಮೀ. ರೂ.36, ಬಿಟ್ಟಗೌಡನಹಳ್ಳಿ ಸರ್ಕಲ್/ಪಾರ್ಕಿಂಗ್ ನಿಂದ: 3.10 ಕಿ.ಮೀ. ರೂ.72, ಮುಖ್ಯದ್ವಾರದಿಂದ ರೂ.300 ಕ್ಯೂವರೆಗೆ: 2 ಕಿ.ಮೀ. ರೂ.36, ಎಸ್.ಬಿ.ಐ. ಪಾರ್ಕಿಂಗ್ ಹೌಸಿಂಗ್ ಬೋರ್ಡ್ ನಿಂದ: 2.30 ಕಿ.ಮೀ. ರೂ.54 ದರವನ್ನು ನಿಗಧಿಪಡಿಸಲಾಗಿದೆ.

ದರಗಳು ಇಂದಿನಿAದ ನ.11 ರವರೆಗೆ ತಾತ್ಕಾಲಿಕವಾಗಿ ಜಾಲ್ತಿಯಲ್ಲಿರುತ್ತವೆ. ನಿಗಧಿತ ನಿಲ್ದಾಣದಿಂದ ಹೊರಡುವ ಮತ್ತು ವಾಪಸ್ಸು ಬರುವ ಎರಡು ಸಮಯಕ್ಕೆ ಅನ್ವಯಿಸುತ್ತದೆ, ಆಟೋರಿಕ್ಷ ಚಾಲಕರು ಪ್ರಾಧಿಕಾರದಿಂದ ನಿಗಧಿಪಡಿಸಿರುವ ಮೊತ್ತಕ್ಕಿಂತ ಹೆಚ್ಚಿನ ದರವನ್ನು ಸಾರ್ವಜನಿಕರಿಂದ ವಸೂಲಿ ಮಾಡುವಂತಿಲ್ಲ.

ಆಟೋರಿಕ್ಷ ಚಾಲಕರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ನಿಯಮ ಪಾಲನೆ ಮಾಡಿ ವಾಹನ ಚಲಾಯಿಸಬೇಕು, ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಒಂದುವರೆ ಪಟ್ಟು ದರ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular