ಮಂಡ್ಯ: ಕಾಲೇಜು ವಿದ್ಯಾರ್ಥಿನಿಯರಿಗೆ ಉಪನ್ಯಾಸಕನೊಬ್ಬ ಅಶ್ಲೀಲವಾಗಿ ಮೆಸೇಜ್ ಕಳುಹಿಸಿ ಕಿರುಕುಳ ನೀಡುತ್ತಿದ್ದು, ಇದರಿಂದ ಬೇಸತ್ತ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಾಲೇಜಿನಲ್ಲಿಯೇ ಉಪನ್ಯಾಸಕನನ್ನು ಹಿಡಿದು ಥಳಿಸಿರುವ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ಪದವಿ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಉಪನ್ಯಾಸಕ ಗಂಗೂ ಕಿರುಕುಳ ನೀಡುತ್ತಿದ್ದ ಆರೋಪಿ. ವಿದ್ಯಾರ್ಥಿನಿಯರ ಮೊಬೈಲ್ ನಂಬರ್ ಪಡೆದು ಚಾಟಿಂಗ್ ಮಾಡುತ್ತಿದ್ದರು. ಐ ಲವ್ ಯೂ, ಐ ಲೈಕ್ ಯೂ, ಐ ಲವ್ ಯೂ ಚಿನ್ನು ಎಂದೆಲ್ಲಾ ಉಪನ್ಯಾಸಕ ಮೆಸೇಜ್ ಮಾಡಿದ್ದಾರೆ. ಇತ್ತ ಉಪನ್ಯಾಸಕನ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿನಿಯರು ರೊಚ್ಚಿಗೆದ್ದು, ಕಾಲೇಜಿನಲ್ಲಿಯೇ ಧರ್ಮದೇಟು ನೀಡಿದ್ದಾರೆ.
ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದ ಉಪನ್ಯಾಸಕನಿಗೆ ವಿದ್ಯಾರ್ಥಿನಿಯರು ಥಳಿಸಿದ್ದು, ಈ ಬಗ್ಗೆ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಉಪನ್ಯಾಸಕನ ಕಿರುಕುಳಕ್ಕೆ ಬೇಸತ್ತ ವಿದ್ಯಾಅರ್ಥಿ, ವಿದ್ಯಾರ್ಥಿನಿಯರು, ನೇರವಾಗಿ ಆಫೀಸ್ ರೂಮ್ಗೆ ನುಗ್ಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ವಿಶ್ದ್ಯಾರ್ಥಿನಿಯರು ಉಪನ್ಯಾಸಕ ಗಂಗೂಗೆ ಧರ್ಮದೇಟು ನೀಡಿದ್ದಾರೆ.
ಈ ವೇಳೆ ಅವರು ಕೈ ಮುಗಿದು ಕೇಳಿಕೊಂಡರು ಬಿಟ್ಟಿಲ್ಲ. ಇನ್ನು ಮೊಬೈಲ್ನಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ ಎಂದು ಉಪನ್ಯಾಸಕ ಮಾಸ್ಕ್ ಹಾಕಿಕೊಂಡರು. ಈ ವೇಳೆ ‘ಮಾಡುವುದೆಲ್ಲಾ ಮಾಡಿ ಮಾಸ್ಕ್ ಹಾಕಿದ್ದೀಯಾ’ ಎಂದು ವಿದ್ಯಾರ್ಥಿನಿಯರು ಗದರಿದ್ದಾರೆ. ಘಟನೆಯಿಂದ ಬೆದರಿದ ಗಂಗೂ ಬೀರು ಸಂದಿಯಲ್ಲಿ ಅವಿತುಕೊಂಡಿದ್ದಾರೆ. ಆದರೂ ಬಿಟ್ಟಿಲ್ಲ. ಹಿಡಿದು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಈ ವೇಳೆ ಗಂಗೂ ಆಫೀಸ್ ರೂಮ್ ಗೋಡೆ, ಕಬ್ಬಿಣದ ಕಪಾಟಿಗೆ ತಲೆ ಜಜ್ಜಿಗೊಂಡು ನಾಟಕವಾಡಿದ್ದಾನೆ.
ಉಪನ್ಯಾಸಕನ ಕಿರುಕುಳದ ಬಗ್ಗೆ ವಿದ್ಯಾರ್ಥಿನಿಯರು ನಾಗಮಂಗಲ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.

