HomeLatest Newsಕರ್ವಾಚೌತ್ ದಿನವೇ ಪತ್ನಿ ದೇವಿಶಾ ಮುನಿಸು; ಸೂರ್ಯಕುಮಾರ್ ಯಾದವ್ ವಿಡಿಯೋ ವೈರಲ್

ಕರ್ವಾಚೌತ್ ದಿನವೇ ಪತ್ನಿ ದೇವಿಶಾ ಮುನಿಸು; ಸೂರ್ಯಕುಮಾರ್ ಯಾದವ್ ವಿಡಿಯೋ ವೈರಲ್

ಮುಂಬೈ,: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಸೂರ್ಯಕುಮಾರ್ ಯಾದವ್ ಮತ್ತು ಅವರ ಪತ್ನಿ ದೇವಿಶಾ ಶೆಟ್ಟಿ ಅವರ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಕರ್ವಾಚೌತ್ ಹಬ್ಬದ ಹಿನ್ನೆಲೆಯಲ್ಲಿ ಮುಂಬೈನ ಬಾಬುಲ್ನಾಥ್ ದೇವಸ್ಥಾನಕ್ಕೆ ಭೇಟಿ ನೀಡಿದ್ದ ದಂಪತಿಯ ನಡುವೆ ನಡೆದ ಸಣ್ಣ ಘಟನೆಯ ದೃಶ್ಯಗಳು ನೆಟ್ಟಿಗರ ಗಮನ ಸೆಳೆದಿವೆ.

ಕರ್ವಾಚೌತ್ ಹಬ್ಬದಂದು ಪತಿಯ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ದೇವಿಶಾ ಉಪವಾಸ ಆಚರಿಸಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ಸೂರ್ಯಕುಮಾರ್ ಯಾದವ್ ಅವರೊಂದಿಗೆ ಬಾಬುಲ್ನಾಥ್ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ಆದರೆ, ದೇವಸ್ಥಾನದ ಮೆಟ್ಟಿಲುಗಳನ್ನು ಹತ್ತುವ ಸಂದರ್ಭದಲ್ಲಿ ದೇವಿಶಾ ಆಯಾಸಗೊಂಡು ಮುಂದೆ ಹೋಗಲು ನಿರಾಕರಿಸಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

‘ನಾನು ಬರಲ್ಲ, ನೀವು ಹೋಗಿ!’ ಎಂದ ದೇವಿಶಾ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೇವಸ್ಥಾನಕ್ಕೆ ತೆರಳುವ ವೇಳೆ ಸೂರ್ಯಕುಮಾರ್ ಅವರು ಪತ್ನಿ ದೇವಿಶಾ ಅವರನ್ನು ತಮ್ಮೊಂದಿಗೆ ಮುಂದೆ ಬರುವಂತೆ ಕೇಳಿದ್ದಾರೆ. ಆದರೆ, ಅದಕ್ಕೆ ಒಪ್ಪದ ದೇವಿಶಾ, ‘ನಾನು ಬರಲ್ಲ… ನೀವು ಹೋಗಿ!’ ಎಂದು ಹೇಳಿದ್ದಾರೆ. ಪತ್ನಿಯನ್ನು ಮನವೊಲಿಸಲು ಕ್ರಿಕೆಟಿಗ ಪ್ರಯತ್ನಿಸಿದರೂ ದೇವಿಶಾ ತಮ್ಮ ನಿರ್ಧಾರ ಬದಲಿಸಲಿಲ್ಲ. ಬಳಿಕ ಅಲ್ಲೇ ಇದ್ದ ಎಲೆಕ್ಟ್ರಿಕ್ ಕಾರ್ಟ್‌ನಲ್ಲಿ ಕುಳಿತು ದೇವಸ್ಥಾನದ ಮೆಟ್ಟಿಲು ಹತ್ತುವುದನ್ನು ತಪ್ಪಿಸಿಕೊಂಡಿದ್ದಾರೆ.

ಇಷ್ಟೇ ಅಲ್ಲದೆ, ಎಲೆಕ್ಟ್ರಿಕ್ ಕಾರ್ಟ್‌ನಲ್ಲಿ ತೆರಳುತ್ತಿದ್ದಾಗ ತಮ್ಮನ್ನು ಚಿತ್ರೀಕರಿಸುತ್ತಿದ್ದ ಕ್ಯಾಮೆರಾಮನ್ ವಿರುದ್ಧವೂ ದೇವಿಶಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ವಿಡಿಯೋ ರೆಕಾರ್ಡ್ ಮಾಡದಂತೆ ಸೂಚಿಸಿರುವ ದೃಶ್ಯವೂ ವೈರಲ್ ಆಗಿರುವ ವಿಡಿಯೋದಲ್ಲಿದೆ.

https://x.com/Cric_Mukku/status/2115776835917369766?s=20

ದೇವಿಶಾ ಅವರ ಈ ವರ್ತನೆಗೆ ಉಪವಾಸದ ಹಸಿವು ಮತ್ತು ಆಯಾಸವೇ ಕಾರಣವಾಗಿರಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಅವರು ಅಸಮಾಧಾನಗೊಂಡಿದ್ದಕ್ಕೆ ನಿಖರವಾದ ಕಾರಣ ಏನೆಂಬುದು ಸ್ಪಷ್ಟವಾಗಿಲ್ಲ.

ಪತ್ನಿ, ಮಗಳಿಗಾಗಿ ಸೂರ್ಯಕುಮಾರ್ ಕೂಡ ಉಪವಾಸ

ಇನ್ನು ವಿಶೇಷವೆಂದರೆ, ಸೂರ್ಯಕುಮಾರ್ ಯಾದವ್ ಕೂಡ ತಮ್ಮ ಪತ್ನಿ ದೇವಿಶಾ ಮತ್ತು ಮಗಳ ಆರೋಗ್ಯ ಹಾಗೂ ದೀರ್ಘಾಯುಷ್ಯಕ್ಕಾಗಿ ಕರ್ವಾಚೌತ್ ಉಪವಾಸ ಆಚರಿಸಿದ್ದಾರೆ. ದೇವಸ್ಥಾನದಲ್ಲಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ತಮಾಷೆಯಾಗಿ ಮಾತನಾಡಿದ ಅವರು, ಚಂದ್ರೋದಯವಾಗಲು ಇನ್ನೂ ನಾಲ್ಕೈದು ಗಂಟೆಗಳು ಬಾಕಿ ಇವೆ ಎಂದು ಹೇಳಿದ್ದಾರೆ. ಹೀಗಾಗಿ ಉಪವಾಸ ಮುಗಿಸಲು ಇನ್ನೂ ಕೆಲವು ಗಂಟೆಗಳ ಕಾಲ ಕಾಯಬೇಕಿದೆ ಎಂಬರ್ಥದಲ್ಲಿ ಅವರು ಮಾತನಾಡಿದ್ದಾರೆ.

ದಂಪತಿಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular