ಬೆಂಗಳೂರು: PGCET: ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ 2026ನೇ ಸಾಲಿನ ಪಿಜಿಸಿಇಟಿ (ಎಂಬಿಎ, ಎಂಸಿಎ ಮತ್ತು ಎಂ.ಟೆಕ್ ) ಕೋರ್ಸುಗಳಿಗೆ ಮತ್ತೊಂದು ಕೊನೆಯ ಸುತ್ತಿನ ಕೌನ್ಸೆಲಿಂಗ್ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ತೀರ್ಮಾನಿಸಿದ್ದು, ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಅ.31ರಿಂದ ಇನ್ನೊಂದು ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ನಡೆಯಲಿದೆ.
ಅ.13ರಿಂದ 15ರವರೆಗೆ ಇಚ್ಛೆಗಳನ್ನು ದಾಖಲಿಸಿ ಸೀಟು ಹಂಚಿಕೆಯಾದ ಕಾಲೇಜಿನಲ್ಲಿ ಪ್ರವೇಶ ಪಡೆಯದಿರುವ ಅಭ್ಯರ್ಥಿಗಳು ಅ.31ರ ಸಂಜೆ 6ರೊಳಗೆ ಶುಲ್ಕ ಪಾವತಿಸಿ ಪ್ರವೇಶ ಪಡೆಯಲು ಅವಕಾಶ ನೀಡಲಾಗಿದೆ. ಪ್ರವೇಶ ಪಡೆದ ನಂತರ ಬೇಕಾದರೆ ಅಂತಹ ಅಭ್ಯರ್ಥಿಗಳು ಅಪ್ ಗ್ರೇಡೇಷನ್ ಗೆ ಹೋಗಬಹುದು. ಆದರೆ ಹಂಚಿಕೆಯಾಗದ ಕಾಲೇಜಿಗೆ ಪ್ರವೇಶ ಪಡೆಯದಿದ್ದರೆ ಅಂತಹವರಿಗೆ ಈ ಸುತ್ತಿನಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ.
ಈ ಸುತ್ತಿನಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಅ.31ರಿಂದ ನ.3ರ ಒಳಗೆ ಕಾಷನ್ ಡಿಪಾಸಿಟ್ ಪಾವತಿಸಬೇಕು. ಅ.31ರ ಮಧ್ಯಾಹ್ನ 2ರಿಂದ ನ.4ರ ಮಧ್ಯಾಹ್ನ 2ರ ಒಳಗೆ ಹೊಸದಾಗಿ ಇಚ್ಛೆ/ಆಯ್ಕೆಗಳನ್ನು ಆದ್ಯತಾ ಕ್ರಮದಲ್ಲಿ ದಾಖಲಿಸಬೇಕು. ನ.5ರಂದು ಫಲಿತಾಂಶ ಪ್ರಕಟಿಸಲಾಗುತ್ತದೆ.
ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ನ.5ರ ಮಧ್ಯಾಹ್ನ 1ರ ನಂತರ ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಪ್ರಾಧಿಕಾರದ ವೆಬ್ ಸೈಟ್ ನೋಡಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಮುಂದುವರೆದ ಸುತ್ತು
ಪಿಜಿಸಿಇಟಿ ಕೋರ್ಸಗಳಿಗೆ 2026ನೇ ಸಾಲಿಗೆ ಪ್ರವೇಶಾತಿ ದಿನಾಂಕವನ್ನು ವಿಸ್ತರಿಸಿ ಇನ್ನೊಂದು ಸುತ್ತಿನ ಸೀಟು ಹಂಚಿಕೆಯನ್ನು ಕೈಗೊಳ್ಳಲು KEA ಗೆ ಆದೇಶಿಸಿರುವ ಹಿನ್ನಲೆಯಲ್ಲಿ, ಪಿಜಿಸಿಇಟಿ ಎಂಬಿಎ, ಎಂಸಿಎ, ಎಂಟೆಕ್ ಕೋರ್ಸಗಳಿಗೆ ಕೊನೆಯ ಮುಂದುವರಿದ ಸೀಟು ಹಂಚಿಕೆಯನ್ನು ನಡೆಸಲಾಗುತ್ತದೆ. ಈ ರೀತಿ ನಡೆಸಲಾಗುವ ಮುಂದುವರಿದ ಸುತ್ತಿನ ಸೀಟು ಹಂಚಿಕೆಗೆ ಹಂಚಿಕೆಯಾಗದೆ ಉಳಿದಿರುವ ಸೀಟುಗಳನ್ನು ಹಾಗೂ ದಿನಾಂಕ 13-10-2026 ರಿಂದ 15-10-2026 ರ ವರೆಗೆ ನಡೆಸಿದ ಸುತ್ತಿನಲ್ಲಿ ಪ್ರವೇಶ ಪಡೆಯದೇ ಇರುವ ಕಾರಣದಿಂದ ಲಭ್ಯವಾಗುವ ಸೀಟುಗಳನ್ನು ಪರಿಗಣಿಸಲಾಗುತ್ತದೆ.
ಆದ ಕಾರಣ ದಿನಾಂಕ 13-10-2026 ರಿಂದ 15-10-2026 ರ ವರೆಗೆ ಇಚ್ಚೆಗಳನ್ನು ದಾಖಲಿಸಿ ಸೀಟು ಹಂಚಿಕೆಯಾಗಿರುವ ಕಾಲೇಜಿನಲ್ಲಿ ಪ್ರವೇಶ ಪಡೆಯದೇ ಇರುವ ಅಭ್ಯರ್ಥಿಗಳಿಗೆ ಕೊನೆಯ ಅವಕಾಶ ನೀಡಿದ್ದು, ಅಂತಹ ಅಭ್ಯರ್ಥಿಗಳು ದಿನಾಂಕ 31-10-2026 ಸಂಜೆ 6.00 ರೊಳಗೆ ಶುಲ್ಕ ಪಾವತಿಸಿ ಪ್ರವೇಶ ಪಡೆಯಲು ಕೊನೆಯ ಅವಕಾಶ ನೀಡಿ ಸೂಚಿಸಿದೆ; ಇಲ್ಲದಿದ್ದಲ್ಲಿ ಇಂತಹ ಸೀಟುಗಳನ್ನೂ ಸಹ ಹಂಚಿಕೆಗೆ ಪರಿಗಣಿಸಲಾಗುವುದು.
ಕೊನೆಯ ಹಾಗೂ ಮುಂದುವರಿದ ಸುತ್ತಿನ ಸೀಟು ಹಂಚಿಕೆಯ ಸೂಚನೆಗಳು ಮತ್ತು ವೇಳಾಪಟ್ಟಿ
ಅರ್ಹತೆ:
1. ಈ ಹಿಂದೆ ನಡೆಸಿದ ಸೀಟು ಹಂಚಿಕೆಗಳಲ್ಲಿ ಯಾವುದೇ ಸೀಟು ಹಂಚಿಕೆಯಾಗದವರು ಲಭ್ಯವಿರುವ ಸೀಟುಗಳಲ್ಲಿ ಆಸಕ್ತಿ ಇದ್ದಲ್ಲಿ ಈ ಸುತ್ತಿನಲ್ಲಿ ಭಾಗವಹಿಸಬಹುದು.
2. ಈ ಹಿಂದೆ ನಡೆಸಿದ ಸೀಟು ಹಂಚಿಕೆಯಲ್ಲಿ ಸೀಟು ಹಂಚಿಕೆಯ ನಂತರ ಪ್ರವೇಶ ಪಡೆದಿರುವ ಅಭ್ಯರ್ಥಿಗಳು ಅಪ್‌ಗ್ರಡೇಶನ್ ಗಾಗಿ ಲಭ್ಯವಿರುವ ಸೀಟುಗಳಲ್ಲಿ ಆಸಕ್ತಿ ಇದ್ದಲ್ಲಿ ಈ ಸುತ್ತಿನಲ್ಲಿ ಭಾಗವಹಿಸಬಹುದು.
3. ಸೀಟು ಹಂಚಿಕೆಯಾಗಿ ದಂಡ ಪಾವತಿಸುವ ಮೂಲಕ ರದ್ದು ಪಡಿಸಿಕೊಂಡಿರುವ ಅಭ್ಯರ್ಥಿಗಳು ಲಭ್ಯವಿರುವ ಸೀಟುಗಳಿಗೆ ಆಸಕ್ತಿ ಇದ್ದಲ್ಲಿ ಭಾಗವಹಿಸಬಹುದು.
ಅನರ್ಹತೆ:
1. ಈ ಹಿಂದೆ 13-10-2026 ರಿಂದ 15-10-2026 ರ ವರೆಗೆ ನಡೆಸಿದ ಸೀಟು ಹಂಚಿಕೆಗಳಲ್ಲಿ ಸೀಟು ಹಂಚಿಕೆಯ ನಂತರ ಶುಲ್ಕ ಪಾವತಿಸಲು ವಿಫಲರಾದ ಅಥವಾ ಹಂಚಿಕೆಯಾದ ಕಾಲೇಜಿಗೆ ಪ್ರವೇಶ ಪಡೆಯದೇ ಇರುವ ಅಭ್ಯರ್ಥಿಗಳು ಈ ಸುತ್ತಿನಲ್ಲಿ ಭಾಗವಹಿಸಲು ಅರ್ಹತೆ ಇರುವುದಿಲ್ಲ.
2. ಆದರೆ ಅಂತಹ ಅಭ್ಯರ್ಥಿಗಳು 31-10-2026 ರೊಳಗೆ ಶುಲ್ಕ ಪಾವತಿಸಿ ಕಾಲೇಜಿನಲ್ಲಿ ಪ್ರವೇಶ ಪಡೆದು ನಂತರ ಈ ಸುತ್ತಿನಲ್ಲಿ ಅಪ್‌ಗ್ರಡೇಶನ್‌ಗಾಗಿ ಭಾಗವಹಿಸಬಹುದು ಅಥವಾ ಸೀಟು ಬೇಡವಾದಲ್ಲಿ ರೂ.10,000/- (ಹತ್ತು ಸಾವಿರ ರೂಪಾಯಿಗಳು) ಆನ್‌ಲೈನ್ ಮೂಲಕ ದಂಡ ಪಾವತಿಸಿ ಸೀಟನ್ನು ರದ್ದು ಪಡಿಸಿಕೊಂಡು ಈ ಸುತ್ತಿನಲ್ಲಿ ಭಾಗವಹಿಸಬಹುದು.
3. ಈಗಾಗಲೇ ಪೂರ್ಣ ಶುಲ್ಕ ಪಾವತಿಸುವ ಮೂಲಕ ಸೀಟು ರದ್ದುಪಡಿಸಿಕೊಂಡಿರುವ ಅಭ್ಯರ್ಥಿಗಳಿಗೆ ರೂ.10,000/- ಕಟಾವು ಮಾಡಿ ಉಳಿದ ಮೊತ್ತವನ್ನು ಹಿಂದಿರುಗಿಸಲಾಗುವುದು.
ಡೆಪಾಸಿಟ್ ಪಾವತಿ
1. ಸದರಿ ಮುಂದುವರಿದ ಸುತ್ತಿನಲ್ಲಿ ಭಾಗವಹಿಸಲು ಅಭ್ಯರ್ಥಿಗಳು ಕಾಶನ್ ಡೆಪಾಸಿಟ್ ಪಾವತಿಸುವುದು ಕಡ್ಡಾಯವಾಗಿದೆ. ಮುಂದುವರಿದ ಸುತ್ತಿನಲ್ಲಿ ಸೀಟು ಹಂಚಿಕೆಯಾದಲ್ಲಿ ಅಭ್ಯರ್ಥಿಗಳು ಪಾವತಿಸುವ ಕಾಶನ್‌ಡೆಪಾಸಿಟ್ ಮೊತ್ತವನ್ನು ಶುಲ್ಕಕ್ಕೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು.
2. ಒಂದು ವೇಳೆ ಅಭ್ಯರ್ಥಿಯು ಉಳಿದ ಮೊತ್ತವನ್ನು ಪಾವತಿಸಲು / ಕಾಲೇಜಿಗೆ ಪ್ರವೇಶ ಪಡೆಯಲು ವಿಫಲನಾದಲ್ಲಿ ಅಥವಾ ಸೀಟು ರದ್ದುಪಡಿಸಿಕೊಳ್ಳಲು ಇಚ್ಛಿಸಿದಲ್ಲಿ ಕಾಶನ್ ಡೆಪಾಸಿಟ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು; ಅಭ್ಯರ್ಥಿಯು ನಿಯಮಾನುಸಾರ ಸಂಪೂರ್ಣ ಶುಲ್ಕವನ್ನು ದಂಡದ ರೂಪದಲ್ಲಿ ಪಾವತಿಸಬೇಕು.
3. ಕಾಶನ್ ಡೆಪಾಸಿಟ್ ರೂ.35,000/- (ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ರೂ. 10,000/-)
4. ಈಗಾಗಲೇ ಕಾಲೇಜಿನಲ್ಲಿ ಪ್ರವೇಶ ಪಡೆದಿರುವ ಅಭ್ಯರ್ಥಿಗಳು ಕಾಶನ್ ಡೆಪಾಸಿಟ್ ಪಾವತಿಸುವಂತಿಲ್ಲ.
ಇಚ್ಛೆ / ಆಯ್ಕೆಗಳನ್ನು ದಾಖಲಿಸುವುದು:
ಈ ಸುತ್ತಿನಲ್ಲಿ ಭಾಗವಹಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಆದ್ಯತಾ ಕ್ರಮದಲ್ಲಿ ಇಚ್ಛೆ / ಆಯ್ಕೆಗಳನ್ನು ಹೊಸದಾಗಿ ದಾಖಲಿಸುವುದು. ಈ ಹಿಂದೆ ದಾಖಲಿಸಿದ್ದ ಇಚ್ಛೆ / ಆಯ್ಕೆಗಳನ್ನು ಪರಿಗಣಿಸುವುದಿಲ್ಲ ಎಂದು ಹೇಳಲಾಗಿದೆ.

