HomeKarnatakaಹಾಸನ ಜಿಲ್ಲೆಯ ನೈಸರ್ಗಿಕ, ಪ್ರಾಕೃತಿಕ, ಧಾರ್ಮಿಕ, ಪಾರಂಪರಿಕ ಪ್ರವಾಸಿ ತಾಣಗಳ ಭೇಟಿಗೆ ಟೂರ್ ಪ್ಯಾಕೇಜ್ ಗೆ...

ಹಾಸನ ಜಿಲ್ಲೆಯ ನೈಸರ್ಗಿಕ, ಪ್ರಾಕೃತಿಕ, ಧಾರ್ಮಿಕ, ಪಾರಂಪರಿಕ ಪ್ರವಾಸಿ ತಾಣಗಳ ಭೇಟಿಗೆ ಟೂರ್ ಪ್ಯಾಕೇಜ್ ಗೆ ಚಾಲನೆ

ಹಾಸನ: ಶ್ರೀ ಹಾಸನಾಂಬ ದೇವಿ ದರ್ಶನ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಟೂರ್ ಪ್ಯಾಕೇಜ್ ಕಾರ್ಯಕ್ರಮಕ್ಕೆ ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಂ. ಶಿವಲಿಂಗೇಗೌಡ ಅವರು ಚಾಲನೆ ನೀಡಿದರು.

ಅ.30 ರಿಂದ ನವೆಂಬರ್ 10 ರವರೆಗೆ ಟೂರ್ ಪ್ಯಾಕೇಜ್ ಅನ್ನು ಆಯೋಜಿಸಲಾಗಿದ್ದು, ಟಿಕೆಟ್ ದರ 1 ಸಾವಿರ ರೂ. ಇದ್ದು, ಇದರಲ್ಲಿ ದೇವಿಯ ವಿಶೇಷ ದರ್ಶನವನ್ನು ಒಳಗೊಂಡಿದೆ ಎಂದು ಸಚಿವರು ತಿಳಿಸಿದರು.

ಹಾಸನ ಜಿಲ್ಲೆಯ ನೈಸರ್ಗಿಕ, ಪ್ರಾಕೃತಿಕ, ಧಾರ್ಮಿಕ, ಪಾರಂಪರಿಕ ಪ್ರವಾಸಿ ತಾಣಗಳ ಭೇಟಿ ಜೊತೆಗೆ ಸಾಹಸ ಪ್ರವಾಸೋದ್ಯಮ ಚಟುವಟಿಕೆಗಳು ಇರಲಿವೆ. 10 ಮಾರ್ಗಗಳಲ್ಲಿ ಟೂರ್ ಪ್ಯಾಕೇಜ್ ಲಭ್ಯವಿದೆ ಎಂದು ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮುಜರಾಯಿ ಸಚಿವರಾದ ಕೆ. ಎಸ್. ಬಸವಂತಪ್ಪ, ಜಿಲ್ಲಾಧಿಕಾರಿ ಲತಾ ಕುಮಾರಿ, ಕೆ.ಎಸ್.ಆರ್. ಟಿ.ಸಿ. ವಿಭಾಗಾಧಿಕಾರಿ ದಶರಥ್, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ರೂಪ ಮತ್ತಿತರರು ಹಾಜರಿದ್ದರು.

ಹಾಸನಾಂಬ ಉತ್ಸವ: ಸಂಚಾರಿ ವಾಹನಗಳಿಗೆ ಚಾಲನೆ

ಹಾಸನ: ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ಮುಜರಾಯಿ ಸಚಿವ ಕೆ. ಎಸ್. ಬಸವಂತಪ್ಪ ಅವರೊಂದಿಗೆ ಹಾಸನಾಂಬ ಉತ್ಸವದ ಹಿನ್ನೆಲೆಯಲ್ಲಿ ಸಂಚರಿಸುವ ವಾಹನಗಳಿಗೆ ಪ್ರವಾಸಿ ಮಂದಿರದಲ್ಲಿಂದು ಪೂಜೆ ಸಲ್ಲಿಸಿ, ಹಸಿರು ನಿಶಾನೆ ತೋರಿಸುವ ಚಾಲನೆ ನೀಡಿದರು.

ಈ ಸಂದರ್ಭ ಜಿಲ್ಲಾಧಿಕಾರಿ ಲತಾ ಕುಮಾರಿ, ಶ್ರೀ ಹಾಸನಾಂಬ ದೇವಾಲಯದ ಆಡಳಿತಾಧಿಕಾರಿ ಜಗದೀಶ್ ಗಂಗಣ್ಣನವರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಾಶ್ ಹಾಗೂ ಮತ್ತಿತರರು ಹಾಜರಿದ್ದರು.

ಹಾಸನಾಂಬ ಜಾತ್ರಾ ಮಹೋತ್ಸವ: ಸಚಿವರಿಂದ ರಂಗೋಲಿಗೆ ಸ್ವರ್ಧೆಗೆ ಚಾಲನೆ

ಹಾಸನ: ರಂಗೋಲಿ ಸ್ಪರ್ಧೆಯ ಮೂಲಕ ಕಲೆ ಮತ್ತು ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕೆಲಸವಾಗುತ್ತಿದೆ ಎಂದು ಅಬಕಾರಿ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ತಿಳಿಸಿದ್ದಾರೆ.

ನಗರದ ಮಹಾರಾಜ ಉದ್ಯಾನವನದಲ್ಲಿ ಇಂದು ಶ್ರೀ ಹಾಸನಾಂಬ ದೇವಿ ಮತ್ತು ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಜಾತ್ರಾ ಮಹೋತ್ಸವದ ಅಂಗವಾಗಿ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಿದ್ದು, ಕಲಾವಿದರು ಅತ್ಯಂತ ಸುಂದರವಾಗಿ ರಂಗೋಲಿ ಬಿಡಿಸುವ ಮೂಲಕ ಕಲೆಯ ವೈಭವ ಪೂರ್ಣ ಚಿತ್ರಣವನ್ನು ಮೂಡಿಸಿದ್ದಾರೆ.

ಇಂತಹ ಸ್ಪರ್ಧೆಗಳಿಂದ ಕಲಾವಿದರಲ್ಲಿರುವ ಕಲಾ ಕೌಶಲ್ಯ ಹೊರಬರಲು ಅವಕಾಶ ಕಲ್ಪಿಸಿದಂತಾಗು ತ್ತದೆ ಎಂದ ಅವರು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾರ್ಥಿಗಳಿಗೆ ಜಿಲ್ಲಾಡಳಿತ ವತಿಯಿಂದ ಸೂಕ್ತ ಪ್ರಶಸ್ತಿ ಮತ್ತು ಬಹುಮಾನ ನೀಡು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವರಾದ ಕೆ.ಎಸ್. ಬಸವಂತಪ್ಪ ಅವರು ಸ್ಪರ್ಧೆಯನ್ನು ಉದ್ದೇಶಿಸಿ ಮಾತನಾಡಿ ಬೆಳಗಿನ ಜಾವ ತಾಯಂದಿರು ಮಾಡುವ ಮೊದಲ ಕಾಯಕವೇ ಅಂಗಳಕ್ಕೆ ನೀರು ಹಾಕಿ ರಂಗೋಲಿ ಹಾಕುವುದು, ರಂಗೋಲಿ ಒಂದು ಶಾಂತಿಯ ಸಂಕೇತವಾಗಿದೆ ಎಂದು ಹೇಳಿದರು.

ನಮ್ಮ ಸಂಪ್ರದಾಯವನ್ನು ಬಿಂಬಿಸುವ ರಂಗೋಲಿ ಸ್ಪರ್ಧೆಯನ್ನು ಪ್ರಥಮ ಬಾರಿಗೆ ಆಯೋಜಿಸುವ ಮೂಲಕ ಗೃಹಿಣಿಯರಿಗೆ ಮತ್ತು ತಾಯಂದಿರಿಗೆ ಉತ್ತೇಜನ ನೀಡುವ ಕೆಲಸವನ್ನು ಜಿಲ್ಲಾಡಳಿತ ಮಾಡಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕೆ.ಎಸ್ ಲತಾಕುಮಾರಿ, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಶ್ರೀ ಹಾಸಂನಾಬ ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಜಗದೀಶ್ ಗಂಗಣ್ಣನವರ್, ತಹಸೀಲ್ದಾರ್ ಗೀತಾ ಹಾಗೂ ಮತ್ತಿತರರು ಹಾಜರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular