HomeKarnatakaಪ್ರಯಾಣಿಕರೇ ಗಮನಿಸಿ: ಇಂದು ಹಾಗೂ ನಾಳೆ ಈ ಮಾರ್ಗದ ರೈಲುಗಳು ರದ್ದು; ಕೆಲ ರೈಲುಗಳ ಸಂಚಾರದಲ್ಲಿ...

ಪ್ರಯಾಣಿಕರೇ ಗಮನಿಸಿ: ಇಂದು ಹಾಗೂ ನಾಳೆ ಈ ಮಾರ್ಗದ ರೈಲುಗಳು ರದ್ದು; ಕೆಲ ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರು: ರೈಲ್ವೆ ಕಾಮಗಾರಿ ಹಿನ್ನೆಲೆಯಲ್ಲಿ ಇಂದು ಹಾಗೂ ನಾಳೆ ಕೆಲ ರೈಲುಗಳ ಸಂಚಾರ ರದ್ದಾಗಲಿದ್ದು, ಕೆಲ ರೈಲುಗಳು ಮಾರ್ಗ ಬದಲಾವಣೆಯಾಗಲಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ತಿಪಟೂರು ಮತ್ತು ಹೊನ್ನವಳ್ಳಿ ರಸ್ತೆ ನಿಲ್ದಾಣಗಳ ಲೆವೆಲ್ ಕ್ರಾಸಿಂಗ್ ಗೇಟ್ ನಂ. 88 ರಲ್ಲಿ ಕಾಂಪೋಸಿಟ್ ಗರ್ಡರ್ ಅಳವಡಿಕೆ ಕಾಮಗಾರಿಗಾಗಿ ಲೈನ್ ಬ್ಲಾಕ್ ಹಾಗೂ ಪವರ್ ಬ್ಲಾಕ್ ತೆಗೆದುಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೈಲು ಮಾರ್ಗ ಮತ್ತು ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಹಲವು ಪ್ರಮುಖ ರೈಲುಗಳ ಸಂಚಾರದಲ್ಲಿ ವ್ಯತ್ಯಯವಗಲಿದೆ ಎಂದು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂದು ರದ್ದಾಗುವ ರೈಲುಗಳು:

56224: ಅರಸೀಕೆರೆ–ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್

56229: ಕೆಎಸ್‌ಆರ್ ಬೆಂಗಳೂರು–ಚನ್ನಪಟ್ಟಣ ಪ್ಯಾಸೆಂಜರ್

56230: ಚನ್ನಪಟ್ಟಣ–ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್

56223: ಕೆಎಸ್‌ಆರ್ ಬೆಂಗಳೂರು–ಅರಸೀಕೆರೆ ಪ್ಯಾಸೆಂಜರ್

ಅಕ್ಟೋಬರ್ 28ರಂದು ರದ್ದಾಗುವ ರೈಲುಗಳು

66505: ಯಲಹಂಕ–ಅರಸೀಕೆರೆ ಮೆಮು

66506: ಅರಸೀಕೆರೆ–ಯಲಹಂಕ ಮೆಮು

ಮಾರ್ಗ ಬದಲಾವಣೆ ರೈಲುಗಳು:

12090 ಶಿವಮೊಗ್ಗ ಟೌನ್–ಕೆಎಸ್‌ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್: ಅರಸೀಕೆರೆ, ಹಾಸನ, ನೆಲಮಂಗಲ ಮತ್ತು ಯಶವಂತಪುರ ಮಾರ್ಗವಾಗಿ ಸಂಚರಿಸಲಿದೆ. ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

56519 ಕೆಎಸ್‌ಆರ್ ಬೆಂಗಳೂರು–ಹೊಸಪೇಟೆ ಪ್ಯಾಸೆಂಜರ್: ಅಕ್ಟೋಬರ್ 27 ಮತ್ತು 28ರಂದು ಚಿಕ್ಕಬಾಣಾವರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ದೊಡ್ಡಬೆಲೆ, ಕ್ಯಾತ್ಸಂದ್ರ, ತುಮಕೂರು, ಗುಬ್ಬಿ, ಅಮಸಂದ್ರ ಮತ್ತು ತಿಪಟೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

11006 ಪುದುಚೇರಿ–ದಾದರ್ ಎಕ್ಸ್‌ಪ್ರೆಸ್: ಚಿಕ್ಕಬಾಣಾವರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ತುಮಕೂರು ಮತ್ತು ತಿಪಟೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

ಅಕ್ಟೋಬರ್ 28ರಂದು ಮಾರ್ಗ ಬದಲಾವಣೆಯಾಗುವ ರೈಲುಗಳು:

12079 ಕೆಎಸ್‌ಆರ್ ಬೆಂಗಳೂರು–ಹುಬ್ಬಳ್ಳಿ ಜನಶತಾಬ್ದಿ ಎಕ್ಸ್‌ಪ್ರೆಸ್: ನೆಲಮಂಗಲ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ತುಮಕೂರು ಮತ್ತು ತಿಪಟೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

ರೈಲುಗಳ ಪ್ರಯಾಣ ಆರಂಭದ ಸಮಯ ಬದಲಾವಣೆ:

17310 ವಾಸ್ಕೋ ಡ ಗಾಮಾ–ಯಶವಂತಪುರ ಎಕ್ಸ್‌ಪ್ರೆಸ್: ಅಕ್ಟೋಬರ್ 27ರಂದು ವಾಸ್ಕೋ ಡ ಗಾಮಾದಿಂದ ಹೊರಡುವ ಸಮಯವನ್ನು 120 ನಿಮಿಷ ಮುಂದೂಡಲಾಗಿದೆ.

20652 ತಾಳಗುಪ್ಪ–ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್: ಅಕ್ಟೋಬರ್ 28ರಂದು ತಾಳಗುಪ್ಪದಿಂದ ಹೊರಡುವ ಸಮಯವನ್ನು 140 ನಿಮಿಷ ಮುಂದೂಡಲಾಗಿದೆ.

16239 ಚಿಕ್ಕಮಗಳೂರು–ಯಶವಂತಪುರ ಎಕ್ಸ್‌ಪ್ರೆಸ್: ಅಕ್ಟೋಬರ್ 28ರಂದು ಚಿಕ್ಕಮಗಳೂರಿನಿಂದ ಹೊರಡುವ ಸಮಯವನ್ನು 60 ನಿಮಿಷ ಮುಂದೂಡಲಾಗಿದೆ.

ರೈಲು ಸಂಚಾರದಲ್ಲಿ ಬದಲಾವಣೆ ಇರುವುದರಿಂದ ಪ್ರಯಾಣಿಕರು ರೈಲಿನ ಸಂಖ್ಯೆ, ಸಂಚಾರದ ದಿನಾಂಕ, ಮಾರ್ಗ ಮತ್ತು ನಿಲುಗಡೆಗಳ ವಿವರಗಳನ್ನು ಪರಿಶೀಲಿಸಿಕೊಂಡು ಪ್ರಯಾಣಿಸಬೇಕು ಎಂದು ರೈಲ್ವೆ ಇಲಾಖೆ ಮನವಿ ಮಾಡಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular