HomeBeautyಮಲೈಕಾ ಮತ್ತು ಅಮೃತಾ ಅರೋರಾ ಕೇಶರಕ್ಷಣೆಯ ರಹಸ್ಯ ಬಹಿರಂಗ: ತಾಯಿ ತಯಾರಿಸುವ ಮನೆಮದ್ದಿನ ಎಣ್ಣೆಯ ರೆಸಿಪಿ...

ಮಲೈಕಾ ಮತ್ತು ಅಮೃತಾ ಅರೋರಾ ಕೇಶರಕ್ಷಣೆಯ ರಹಸ್ಯ ಬಹಿರಂಗ: ತಾಯಿ ತಯಾರಿಸುವ ಮನೆಮದ್ದಿನ ಎಣ್ಣೆಯ ರೆಸಿಪಿ ವೈರಲ್!

ಅವಾರಾ ಪಾಗಲ್ ದೀವಾನಾ ಮತ್ತು ಗೋಲ್‌ಮಾಲ್ ರಿಟರ್ನ್ಸ್ ನಂತಹ ಸೂಪರ್ ಹಿಟ್ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದ ಬಾಲಿವುಡ್ ನಟಿ ಅಮೃತಾ ಅರೋರಾ ತಮ್ಮ ಕುಟುಂಬದ ಪಾರಂಪರಿಕ ಕೇಶರಕ್ಷಣೆಯ ರಹಸ್ಯವನ್ನು ಹಂಚಿಕೊಂಡಿದ್ದಾರೆ. ತಲೆಮಾರಿನಿಂದ ಹರಿದುಬಂದಿರುವ ವಿಶೇಷವಾದ ಗೃಹೋಪಯೋಗಿ ಕೂದಲಿನ ಎಣ್ಣೆಯ ರೆಸಿಪಿಯನ್ನು ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ತಮ್ಮಜ್ಜಿ ಕಲಿಸಿಕೊಟ್ಟ ಈ ಎಣ್ಣೆಯನ್ನು ತಾಯಿ ಇಂದಿಗೂ ಸ್ವತಃ ತಯಾರಿಸಿ ತಮಗೂ ಹಾಗೂ ಸಹೋದರಿ ಮಲೈಕಾ ಅರೋರಾ ಅವರಿಗೂ ನೀಡುತ್ತಾರೆ ಎಂದು ಅಮೃತಾ ತಿಳಿಸಿದ್ದಾರೆ.

ಈ ಎಣ್ಣೆಯ ತಯಾರಿಕಾ ವಿಧಾನದ ಬಗ್ಗೆ ಮಾತನಾಡಿದ ಅವರು, ಸಮಪ್ರಮಾಣದ ಕೋಲ್ಡ್ ಪ್ರೆಸ್ಡ್ ಕೊಬ್ಬರಿ ಎಣ್ಣೆ, ಹರಳೆಣ್ಣೆ ಮತ್ತು ಕಪ್ಪು ಎಳ್ಳಿನ ಎಣ್ಣೆಯನ್ನು ತೆಗೆದುಕೊಳ್ಳಬೇಕು. ಇದಕ್ಕೆ ಸ್ವಲ್ಪ ಕಲೋಂಜಿ, ಮೆಂತ್ಯ ಕಾಳು, ಒಂದು ಇಡೀ ಈರುಳ್ಳಿ ಮತ್ತು ದಾಸವಾಳದ ಹೂವುಗಳನ್ನು ಸೇರಿಸಿ ಚೆನ್ನಾಗಿ ಕುದಿಸಬೇಕು. ನಂತರ ಅದನ್ನು ಸೋಸಿ ತಣ್ಣಗಾಗಿಸಿ ಬಾಟಲಿಯಲ್ಲಿ ಶೇಖರಿಸಿಟ್ಟುಕೊಳ್ಳಬೇಕು ಎಂದು ವಿವರಣೆ ನೀಡಿದ್ದಾರೆ.

ಚಿಕ್ಕಂದಿನಿಂದಲೂ ತಾವು ಮತ್ತು ಮಲೈಕಾ ಈ ಎಣ್ಣೆಯನ್ನು ಬಳಸುತ್ತಿದ್ದು, ಇದು ಕೂದಲು ಬೆಳ್ಳಗಾಗುವುದನ್ನು ತಡೆಯಲು, ಕೂದಲು ದಟ್ಟವಾಗಿ ಬೆಳೆಯಲು ಹಾಗೂ ಕೂದಲು ಉದುರುವಿಕೆ ತಡೆಯಲು ಅತ್ಯಂತ ಪರಿಣಾಮಕಾರಿ ಎಂದು ಹೇಳಿದ್ದಾರೆ. ಸಿನಿಮಾ ವೃತ್ತಿಜೀವನದ ಆರಂಭದಲ್ಲಿ ಮಾಡೆಲ್ ಮತ್ತು ವಿಡಿಯೋ ಜೊಕಿಯಾಗಿ ಕಾರ್ಯನಿರ್ವಹಿಸಿದ್ದ ಅಮೃತಾ, ಫರ್ದೀನ್ ಖಾನ್ ಜೊತೆ ಕಿತ್ನೆ ದೂರ್ ಕಿತ್ನೆ ಪಾಸ್ ಸಿನಿಮಾ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಪ್ರಸ್ತುತ ನಟಿ ಹಂಚಿಕೊಂಡಿರುವ ಈ ಮನೆಮದ್ದು ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular