ನಟ ಚಿಕ್ಕಣ್ಣ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಲಕ್ಷ್ಮಿಪುತ್ರ’ ಸಿನಿಮಾದಿಂದ ಮತ್ತೊಂದು ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಪ್ರಮುಖ ಮೂರನೇ ಹಾಡಾದ ‘ಐ ಲವ್ ಪರಿಮಳ’ ಹಾಡು ಅಕ್ಟೋಬರ್ 24ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ. ಈ ಚಿತ್ರದ ಮೂಲಕ ಭಿನ್ನ ಶೈಲಿಯ ಮನರಂಜನೆಯನ್ನು ನೀಡಲು ಚಿತ್ರತಂಡ ಸಜ್ಜಾಗಿದ್ದು, ಈಗಾಗಲೇ ಬಿಡುಗಡೆಯಾಗಿರುವ ಪ್ರಚಾರ ಸಾಮಗ್ರಿಗಳು ಸಿನಿಪ್ರಿಯರ ಗಮನ ಸೆಳೆದಿವೆ.
ಎಪಿ ಅರ್ಜುನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಅನ್ನಪೂರ್ಣ ಎಪಿ ಅರ್ಜುನ್ ಅವರು ಈ ಚಿತ್ರವನ್ನು ನಿರ್ಮಿಸಿದ್ದು, ರವಿಕಿರಣ್ ಎಂ ಗೌಡ ಸಹ-ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಚಿತ್ರಕ್ಕೆ ಎಪಿ ಅರ್ಜುನ್ ಅವರೇ ಕಥೆ, ಸಾಹಿತ್ಯ ಹಾಗೂ ಸಂಭಾಷಣೆಯನ್ನು ಬರೆದಿದ್ದು, ವಿಜಯ್ ಎಸ್ ಸ್ವಾಮಿ ನಿರ್ದೇಶನದ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಚಿಕ್ಕಣ್ಣ ಜತೆಗೆ ವಂದಿತಾ, ನಟಿ ತಾರಾ ಅನುರಾಧ, ಕುರಿ ಪ್ರತಾಪ್, ಧರ್ಮಣ್ಣ ಕಡೂರು, ಮನು ಹಾಗೂ ಮಿತ್ರ ಮುಂತಾದ ಅನುಭವಿ ತಾರಾಗಣ ಚಿತ್ರದಲ್ಲಿದೆ.
ತಾಂತ್ರಿಕ ವಿಭಾಗದಲ್ಲೂ ಬಲಿಘ್ಠ ತಂಡವಿದ್ದು, ದೀಪು ಎಸ್ ಕುಮಾರ್ ಸಂಕಲನ, ಮಾಸ್ ಮಾಡ ಸಾಹಸ ನಿರ್ದೇಶನ ಹಾಗೂ ಭೂಷಣ್ ನೃತ್ಯ ಸಂಯೋಜನೆ ಈ ಚಿತ್ರಕ್ಕಿದೆ. ಎಪಿ ಅರ್ಜುನ್, ಪ್ರಶಾಂತ್ ರಾಜಪ್ಪ ಹಾಗೂ ವಿಜಯ್ ಈಶ್ವರ್ ಸಂಭಾಷಣೆ ರಚಿಸಿದ್ದು, ನಿರ್ದೇಶಕರ ಜತೆಗೆ ಎಪಿ ಅರ್ಜುನ್ ಚಿತ್ರಕಥೆಯನ್ನೂ ಬರೆದಿದ್ದಾರೆ. ಮೋಹನ್ ಬಿ ಕೆರೆ ನಿರ್ಮಾಣ ವಿನ್ಯಾಸ ಹಾಗೂ ಸುರೇಶ್ ಕೆ ಮೈಸೂರು ಮತ್ತು ಮಂಡ್ಯ ಮಂಜು ನಿರ್ಮಾಣ ನಿರ್ವಹಣೆಯ ಜಯವನ್ನು ವಹಿಸಿಕೊಂಡಿದ್ದಾರೆ. ರಾಜೇಶ್ ರಾವ್ ಸಹ-ನಿರ್ದೇಶಕರಾಗಿ ಕೆಲಸ ಮಾಡಿದ್ದು, ಅಕ್ಟೋಬರ್ 24ರಂದು ಬಿಡುಗಡೆಯಾಗಲಿರುವ ‘ಐ ಲವ್ ಪರಿಮಳ’ ಹಾಡಿನ ಮೂಲಕ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

