ಮಂಗಳೂರು: ಚರ್ಚ್ ಗೆ ಪ್ರಾರ್ಥನೆಗೆಂದು ಬರುತ್ತಿದ್ದ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ ಆರೋಪದಲ್ಲಿ ಚರ್ಚ್ ಪಾದ್ರಿಯನ್ನು ಮಂಗಳೂರು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಮಂಗಳೂರಿನ ವೆಲೆನ್ಸಿಯಾ ಚರ್ಚ್ನ ಫಾದರ್ ಸಿಪ್ರಿಯನ್ ಪಿಂಟೋ ಬಂಧಿತ ಆರೋಪಿ. ಈತ ಪ್ರಾರ್ಥನೆಗೆ ಚರ್ಚ್ ಗೆ ಹೋಗುವ ಬಾಲಕರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಇಬ್ಬರು ಮಕ್ಕಳು ಪೋಷಕರ ಬಳಿ ಹೇಳಿಕೊಂಡಿದ್ದು, ಪೋಷಕರು ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಮೇರೆಗೆ ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಪೊಲೀಸರು, ಆರೋಪಿ ಸಿಪ್ರಿಯನ್ ಪಿಂಟೋನನ್ನು ಬಂಧಿಸಿದ್ದಾರೆ.
ಚರ್ಚ್ ಗೆ ಬರುತ್ತಿದ್ದ ಬಾಲಕನಿಗೆ ಪಾದ್ರಿ ‘Sweet boy I Love You’ ಎಂದು ಪುಸಲಾಯಿಸಿ ಲೈಂಗಿಕ ಕಿರುಕುಳ ನೀಡಿದ್ದ. ಬಾಅಲಕರು ಈ ಬಗ್ಗೆ ತಮ್ಮ ಪೋಷ್ಕರಿಗೆ ವಿಷಯ ತಿಳಿಸಿದ್ದರು. ಪೋಷಕರು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು.
ತನ್ನ ವಿರುದ್ಧ ಕೇಸ್ ದಾಖಲಾಗುತ್ತಿದ್ದಂತೆ ಆರೋಪಿ ಸಿಪ್ರಿಯನ್ ಪಿಂಟೋ ತಲೆಮರೆಸಿಕೊಂಡಿದ್ದ. ಹಾಸನ ಜಿಲ್ಲೆಯ ಸಕಲೇಶಪುರದ ಸಂಬಂಧಿ ಮನೆಯಲ್ಲಿ ಅಡಗಿಕೊಂಡಿರುವ ಬಗ್ಗೆ ಪೊಲೀಸರುಗೆ ಮಾಹಿತಿ ಸಿಗುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಜೆನ್ ಕೆಮಿಕಲ್ ಟ್ಯಾಂಕರ್ ಟೈರ್ ಸ್ಫೋಟಗೊಂಡು ಪಲ್ಟಿ: ನೈಸ್ ರಸ್ತೆಯಲ್ಲಿ ಧಗಧಗನೆ ಹೊತ್ತಿ ಉರಿದ ಕೆಮಿಕಲ್ ಟ್ಯಾಂಕರ್: 8-10 ಕಿ.ಮೀ ಟ್ರಾಫಿಕ್ ಜಾಮ್
ಬೆಂಗಳೂರು: ಜೆನ್ ಕಂಪನಿಗೆ ಸೇರಿದ ಕೆಮಿಕಲ್ ಟ್ಯಾಂಕರ್ ವೊಂದು ಕಾರಿಗೆ ಟಚ್ ಆಗಿ ಪಲ್ಟಿಯಾಗಿ ಬಿದ್ದ ಪರಿಣಾಮ ಕೆಮಿಕಲ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿರುವ ಘಟನೆ ಬೆಂಗಳೂರಿನ ನೈಸ್ ರಸ್ತೆಯಲ್ಲಿ ನಡೆದಿದೆ.
ಕನಕಪುರ ರಸ್ತೆಯ ಟೋಲ್ ಗೇಟ್ ಬಳಿ ಕೆಮಿಕಲ್ ಟ್ಯಾಂಕರ್ ಪಲ್ಟಿಯಾಗಿದ್ದು, ಧಗಧಗನೆ ಬೆಂಕಿ ಹೊತ್ತಿ ಉರಿದಿದೆ. ಟ್ಯಾಂಕರ್ ನಲ್ಲಿ ಒಟ್ಟು ನಾಲ್ಕು ಚಿಕ್ಕ ಚಿಕ್ಕ ಕೆಮಿಕಲ್ ಟ್ಯಾಂಕ್ ಗಳಿದ್ದು, ಅವುಗಳಲ್ಲಿ ಎರಡು ಟ್ಯಾಂಕ್ ಗಳು ಹೊತ್ತಿ ಉರಿಯುತ್ತಿವೆ. ಉಳಿದ ಎರಡು ಟ್ಯಂಕ್ ಗಳಿಗೂ ಬೆಂಕಿ ತಗುಲುವ ಸಾಧ್ಯತೆ ಇದ್ದು, ಅವುಗಳೂ ಹೊತ್ತಿ ಉರಿಯುವ ಆತಂಕ ಎದುರಾಗಿದೆ.
ಘಟನಾ ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಆದರೆ ಬೆಂಕಿಯ ಕೆನ್ನಾಲಿಗೆ ನಿಯಂತ್ರಣಕ್ಕೆ ಬರುತ್ತಿಲ್ಲ. ಉಳಿದ ಎರಡು ಕೆಮಿಕಲ್ ಟ್ಯಾಂಕ್ ಗಳು ಹೊತ್ತಿ ಉರಿಯುವವರೆಗೂ ಬೆಂಕಿ ತಹಬದಿಗೆ ಬರುವ ಸಾಧ್ಯತೆ ಕಡಿಮೆ. ಆದರೆ ಸ್ಫೋಟಗೊಳ್ಳದಂತೆ ಬೆಂಕಿ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಗ್ನಿಶಾಕಮ ಸಿಬ್ಬಂದಿಗಳು ತಿಳಿಸಿದ್ದಾರೆ.
ಜೆನ್ ಕೆಮಿಕಲ್ ಟ್ಯಾಂಕರ್ ಚೆನ್ನೈನಿಂದ ಮುಂಬೈಗೆ ತೆರಳುತ್ತಿದ್ದ ವೇಳೆ ಕನಕಪುರ ಟೋಲ್ ಗೇಟ್ ಬಳಿ ಬರುತ್ತಿದ್ದಂತೆ ಕಾರಿಗೆ ಟ್ಯಾಂಕರ್ ಟಚ್ ಆಗಿ ಈ ಅವಘಡ ಸಂಭವಿಸಿದೆ. ನಡುರಸ್ತೆಯಲ್ಲೇ ಟ್ಯಾಂಕರ್ ಪಲ್ಟಿಯಾಗಿ ಹೊತ್ತಿ ಉರಿಯುತ್ತಿರುವ ಹಿನ್ನೆಲೆಯಲ್ಲಿ ನೈಸ್ ರಸ್ತೆಯಲ್ಲಿ ವಾಹನಗಳು ಸಾಲು ಸಾಲಾಗಿ ನಿಂತಿದ್ದು, ಸುಮಾರು 8-10 ಕೀ.ಮೀವರೆಗೆ ಟ್ರಾಫಿಕ್ ಜಾಮ್ ಉಂಟಾಗಿದೆ. ಘಟನಾ ಸ್ಥಳದಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೀಡು ಬಿಟ್ಟಿದ್ದು, ಯಾವುದೇ ಅನಾಹುತ ಸಂಭವಿಸದಂತೆ ಕ್ರಮ ಕೈಗೊಳ್ಳುತ್ತಿದ್ದಾರೆ.

