HomeLatest Newsವಿಚ್ಛೇದನದ ಬಳಿಕ ಮಿತಿ ಮೀರಿದ ಮದ್ಯದ ಚಟ: ತನ್ನ ಕರಾಳ ದಿನಗಳ ಬಗ್ಗೆ ಮುಕ್ತವಾಗಿ ಮಾತನಾಡಿದ...

ವಿಚ್ಛೇದನದ ಬಳಿಕ ಮಿತಿ ಮೀರಿದ ಮದ್ಯದ ಚಟ: ತನ್ನ ಕರಾಳ ದಿನಗಳ ಬಗ್ಗೆ ಮುಕ್ತವಾಗಿ ಮಾತನಾಡಿದ ಚಹಾಲ್!

ಐಪಿಎಲ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂದರೆ ಟಾಪ್‌ನಲ್ಲಿ ನಿಲ್ಲುವ ಹೆಸರು ಯುಜ್ವೇಂದ್ರ ಚಹಾಲ್. 188 ಪಂದ್ಯಗಳಲ್ಲಿ ಬರೋಬ್ಬರಿ 233 ವಿಕೆಟ್ಗಳನ್ನು ಕಬಳಿಸಿರುವ ಚಹಾಲ್, ಜಸ್ಪ್ರೀತ್ ಬುಮ್ರಾ, ಸುನಿಲ್ ನರೈನ್, ರವಿಚಂದ್ರನ್ ಅಶ್ವಿನ್ ಹಾಗೂ ಲಸಿತ್ ಮಾಲಿಂಗ ಅವರಂತಹ ದಿಗ್ಗಜರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆದರೆ ಅವರ ವೃತ್ತಿಜೀವನವು ಹಲವು ಏಳು-ಬೀಳುಗಳು ಹಾಗೂ ವೈಯಕ್ತಿಕ ಹೋರಾಟಗಳಿಂದ ಕೂಡಿದೆ. ಭಾರತದ ಪರ 72 ಏಕದಿನ ಹಾಗೂ 80 ಟಿ20 ಪಂದ್ಯಗಳನ್ನು ಆಡಿರುವ ಅವರು, ಒಮ್ಮೆಯೂ ಟೆಸ್ಟ್ ಕ್ರಿಕೆಟ್ ಆಡುವ ಅವಕಾಶ ಪಡೆಯಲಿಲ್ಲ. ಮೈದಾನದಲ್ಲಿ ಸದಾ ನಗುತ್ತಾ ಎಲ್ಲರನ್ನೂ ರಂಜಿಸುವ ಚಹಾಲ್, ವೈಯಕ್ತಿಕ ಜೀವನದಲ್ಲಿ ಮದ್ಯದ ಚಟ, ವಿಚ್ಛೇದನ ಮತ್ತು ಸಾರ್ವಜನಿಕ ಟೀಕೆಗಳಂತಹ ಕಠಿಣ ಸವಾಲುಗಳನ್ನು ಎದುರಿಸಿದ್ದಾರೆ.

ಖ್ಯಾತ ಕ್ರಿಕೆಟ್ ನಿರೂಪಕ ಆಕಾಶ್ ಚೋಪ್ರಾ ಅವರ ಯೂಟ್ಯೂಬ್ ಪಾಡ್‌ಕಾಸ್ಟ್‌ನಲ್ಲಿ ಈ ಎಲ್ಲಾ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿರುವ 36 ವರ್ಷದ ಯುಜ್ವೇಂದ್ರ ಚಹಾಲ್, ತಮ್ಮ ಜೀವನದ ಕರಾಳ ದಿನಗಳನ್ನು ಮೆಲುಕು ಹಾಕಿದ್ದಾರೆ. ಮದ್ಯದ ಚಟ ಮಿತಿಮೀರಿದಾಗ ತಾವೇ ಸ್ವಯಂಪ್ರೇರಿತರಾಗಿ ಪುನಶ್ಚೇತನ ಕೇಂದ್ರಕ್ಕೆ (Rehab Centre) ತೆರಳಿ 26 ದಿನಗಳ ಕಾಲ ಚಿಕಿತ್ಸೆ ಪಡೆದುಕೊಂಡಿದ್ದಾಗಿ ಅವರು ಬಹಿರಂಗಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಚಹಾಲ್, “ಕೌಂಟಿ ಕ್ರಿಕೆಟ್ ಬಳಿಕ ಪರಿಸ್ಥಿತಿ ಕೈಮೀರಿ ಹೋಯಿತು. ಎಲ್ಲವೂ ಮಿತಿ ಮೀರಿದಾಗ ನಾನು ರೆಹಾಬ್ ಸೆಂಟರ್‌ಗೆ ದಾಖಲಾಗಿ 26 ದಿನಗಳ ಕಾಲ ಅಲ್ಲಿದ್ದೆ. ಆ ನಿರ್ಧಾರವು ನನ್ನ ವೈಯಕ್ತಿಕ ಜೀವನದಲ್ಲಿ ದೊಡ್ಡ ಬದಲಾವಣೆ ತಂದಿತು. ನನ್ನಲ್ಲಿ ಪರಿಪಕ್ವತೆ ಬೆಳೆಯಿತು ಮತ್ತು ಭಾವನೆಗಳು ಹತೋಟಿಗೆ ಬಂದವು. ಕಳೆದ ಐಪಿಎಲ್‌ನಲ್ಲಿ ನನ್ನ ದೇಹವು ಮತ್ತೆ 30 ವರ್ಷದ ಯುವಕನಂತೆ ಚುರುಕಾಗಿ ಅನುಭವವಾಯಿತು” ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರಂಭದಲ್ಲಿ ಪಾರ್ಟಿಗಳಿಂದ ಶುರುವಾದ ಈ ಚಟವು ವಿಚ್ಛೇದನದ ನಂತರ ತೀವ್ರಗೊಂಡಿತು ಎಂದು ತಿಳಿಸಿರುವ ಅವರು, “ನನ್ನ ಮಾನಸಿಕ ಸ್ಥಿತಿ ಸರಿಯಿರಲಿಲ್ಲ. ಇದೇ ರೀತಿ ಮುಂದುವರಿದರೆ ನಾನು ಅತಿ ಹೆಚ್ಚು ಪ್ರೀತಿಸುವ ಕ್ರಿಕೆಟನ್ನು ಕಳೆದುಕೊಳ್ಳುತ್ತೇನೆ ಎಂದು ನನಗೆ ಅರಿವಾಯಿತು. ಹಾಗಾಗಿ ಅದಕ್ಕೆ ಅಂತ್ಯ ಹಾಡಿದೆ. ಈಗ ನಾನು ಬಹಳ ನೆಮ್ಮದಿಯ ಹಾಗೂ ಉತ್ತಮ ವಾತಾವರಣದಲ್ಲಿದ್ದೇನೆ” ಎಂದಿದ್ದಾರೆ.

ವೈಯಕ್ತಿಕ ಜೀವನದ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಾಗುವುದು ಮತ್ತು ಟೀಕೆಗಳನ್ನು ಎದುರಿಸುವ ಕುರಿತು ಮಾತನಾಡುತ್ತಾ, “ನೀವು ಸಾರ್ವಜನಿಕ ವ್ಯಕ್ತಿಯಾದಾಗ ನಿಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ವಿಷಯವೂ ಜನರ ಚರ್ಚೆಗೆ ಆಹ್ವಾನವಾಗುತ್ತದೆ. ಇದು ನನ್ನ ಕ್ರಿಕೆಟ್ ಮೇಲೂ ಪರಿಣಾಮ ಬೀರಿತು. ಆ ವರ್ಷ ಕೇವಲ ಎರಡು ವೈಟ್-ಬಾಲ್ ಪಂದ್ಯಗಳನ್ನು ಆಡಿದೆ, ಬಳಿಕ ಮಾನಸಿಕ ಸ್ಥಿತಿ ಸರಿಯಿಲ್ಲದ ಕಾರಣ ಟಿ20 ಆಡಲಿಲ್ಲ. ತಂಡಕ್ಕೆ ನನ್ನಿಂದ ತೊಂದರೆಯಾಗಬಾರದು ಎಂದು ಅನಿರುದ್ಧ್ ಸರ್ ಅವರ ಬಳಿ ಮಾತನಾಡಿ ವಿರಾಮ ಪಡೆದುಕೊಂಡೆ” ಎಂದು ತಿಳಿಸಿದ್ದಾರೆ.

ಇದೇ ವೇಳೆ ತಮಗೆ ಕಾಡಿದ್ದ ಆತಂಕ (Anxiety) ಮತ್ತು ಪ್ಯಾನಿಕ್ ಅಟ್ಯಾಕ್ (Panic Attacks) ಅನುಭವದ ಬಗ್ಗೆಯೂ ಅವರು ಮುಕ್ತವಾಗಿ ಮಾತನಾಡಿದ್ದಾರೆ. “ಆತಂಕ ಎಂದರೆ ಹೃದಯದ ಬಡಿತ ಹೆಚ್ಚಾಗುತ್ತದೆ. ನನಗೆ ಪ್ಯಾನಿಕ್ ಅಟ್ಯಾಕ್ ಆದಾಗ ಮುಖವೆಲ್ಲಾ ಕುಗ್ಗಿಹೋಗುತ್ತಿತ್ತು. ಮಾತನಾಡುವುದೂ ಕಷ್ಟವಾಗುತ್ತಿತ್ತು, ತುಟಿಗಳು ಒಂದು ಕಡೆ ಬಿಗಿದುಕೊಳ್ಳುತ್ತಿದ್ದವು. ಆ ಕ್ಷಣದಲ್ಲಿ ಆತಂಕ ಎಷ್ಟು ತೀವ್ರವಾಗಿರುತ್ತದೆ ಎಂಬುದು ನನಗೆ ತಿಳಿಯಿತು. ಆದರೆ ಸೋಶಿಯಲ್ ಮೀಡಿಯಾ ಏನೇ ಮಾತನಾಡಿದರೂ ಎಲ್ಲರ ಬಾಯಿಯನ್ನು ಮುಚ್ಚಿಸಲು ಸಾಧ್ಯವಿಲ್ಲ ಎಂದುಕೊಂಡು, ಎಲ್ಲವನ್ನೂ ಮರೆತು ಹೊಸ ಆರಂಭ ಮಾಡಿದೆ” ಎಂದು ಚಹಾಲ್ ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular