HomeKarnatakaಆಟೋಮೊಬೈಲ್, ಬಾಹ್ಯಾಕಾಶ, ವಾಹನ ಕ್ಷೇತ್ರಗಳಲ್ಲಿ ಹೂಡಿಕೆ: ಝೆಕ್ ಕಂಪನಿಗಳಿಗೆ ಆಹ್ವಾನ

ಆಟೋಮೊಬೈಲ್, ಬಾಹ್ಯಾಕಾಶ, ವಾಹನ ಕ್ಷೇತ್ರಗಳಲ್ಲಿ ಹೂಡಿಕೆ: ಝೆಕ್ ಕಂಪನಿಗಳಿಗೆ ಆಹ್ವಾನ

ಬೆಂಗಳೂರು: ಝೆಕ್ ಗಣರಾಜ್ಯದ ಉಪಪ್ರಧಾನಿ ನೇತೃತ್ವದ ನಿಯೋಗ ಇಂದು ರಾಜ್ಯಕ್ಕೆ ಭೇಟಿ ನೀಡಿದ್ದು, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲೂ ಹೂಡಿಕೆ ಮಾಡುವಂತೆ ಝೆಕ್ ಕಂಪನಿಗಳಿಗೆ ಆಹ್ವಾನ ನೀಡಲಾಗಿದೆ.

ಝೆಕ್ ಗಣರಾಜ್ಯದ (Czech Republic) ಉಪ ಪ್ರಧಾನಮಂತ್ರಿ ಹಾಗೂ ವಾಣಿಜ್ಯ ಸಚಿವರೂ ಆದ ಕಾರೆಲ್ ಹಾವ್ಲಿಕ್ ಅವರ ನೇತೃತ್ವದ ನಿಯೋಗದೊಂದಿಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಡಿಸಿಎಂ ಡಾ.ಜಿ. ಪರಮೇಶ್ವರ್, ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು, ಕರ್ನಾಟಕದಾದ್ಯಂತ ಇರುವ ಬೃಹತ್ ಕೈಗಾರಿಕಾ ಹಾಗೂ ಹೂಡಿಕೆ ಅವಕಾಶಗಳನ್ನು ಪ್ರಸ್ತಾಪಿಸಿ, ರಾಜ್ಯದಲ್ಲಿ ಹೂಡಿಕೆ ಮಾಡಲು ಝೆಕ್ ಕಂಪನಿಗಳಿಗೆ ಆಹ್ವಾನ ನೀಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚರ್ಚೆಯಲ್ಲಿನ ಪ್ರಮುಖ ಅಂಶಗಳು:

ಇಂಧನ ಕ್ಷೇತ್ರ: ದೇಶದ ಅತಿದೊಡ್ಡ ಸೌರ ಹಾಗೂ ಜಲವಿದ್ಯುತ್ ಯೋಜನೆಗಳನ್ನು ಹೊಂದಿರುವ ಕರ್ನಾಟಕದಲ್ಲಿ ಶಕ್ತಿ ಹಾಗೂ ಇಂಧನ ಕ್ಷೇತ್ರಕ್ಕೆ ಅಪಾರ ಅವಕಾಶಗಳಿವೆ.

ಆಟೋಮೊಬೈಲ್ & ಭವಿಷ್ಯದ ಸಂಚಾರ: EV, ವಿದ್ಯುತ್ ವಾಹನಗಳು, ಪರೀಕ್ಷೆ ಹಾಗೂ ಆಟೋ ಬಿಡಿಭಾಗಗಳ ತಯಾರಿಕೆಯಲ್ಲಿ ಸಹಕಾರ.

ಬಾಹ್ಯಾಕಾಶ & ರಕ್ಷಣೆ: ವೈಮಾಂತರಿಕ್ಷ (Aerospace) ಮತ್ತು ರಕ್ಷಣಾ ಉತ್ಪಾದನೆಯಲ್ಲಿ ನೂತನ ಪಾಲುದಾರಿಕೆ.

ಕೃಷಿ & ಅರಣ್ಯ: ತೋಟಗಾರಿಕೆ, ಪುಷ್ಪಕೃಷಿ ಹಾಗೂ ಕೃಷಿ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನಗಳ ಅಳವಡಿಕೆ.

ಶೈಕ್ಷಣಿಕ & ಸಂಶೋಧನೆ: ಝೆಕ್ ವಿಶ್ವವಿದ್ಯಾಲಯಗಳು ಹಾಗೂ ಕರ್ನಾಟಕದ ಸಂಸ್ಥೆಗಳ ನಡುವೆ ‘ಕೌಶಲ್ಯ ಅಭಿವೃದ್ಧಿ’ ಮತ್ತು ‘ಅನ್ವಯಿಕ ಸಂಶೋಧನೆ’ಗೆ (Applied Research) ಒತ್ತು.

ಸ್ಕೋಡಾ (Škoda), ಬಾಟಾ (Bata) ನಂತಹ ಜಾಗತಿಕ ಸಂಸ್ಥೆಗಳ ಮಾದರಿಯಲ್ಲೇ ಕರ್ನಾಟಕದ ಕಂಪನಿಗಳೊಂದಿಗೆ ‘ಟಾಟಾ ಆಟೋಕಾಂಪ್ – ಸ್ಕೋಡಾ ಗ್ರೂಪ್’ ಮಾದರಿಯ ಹೊಸ ಪಾಲುದಾರಿಕೆಗಳನ್ನು ರೂಪಿಸಲು ಸರ್ಕಾರ ಮುಕ್ತವಾಗಿದೆ.

ತಂತ್ರಜ್ಞಾನ ವರ್ಗಾವಣೆ, ಸಂಶೋಧನೆ, ಕೌಶಲ್ಯ ಅಭಿವೃದ್ಧಿ, ಸ್ಥಳೀಯ ಉದ್ಯಮಗಳ ಬಲವರ್ಧನೆ ಮತ್ತು ಗುಣಮಟ್ಟದ ಉದ್ಯೋಗ ಸೃಷ್ಟಿಗೆ ಈ ಪಾಲುದಾರಿಕೆ ಹೊಸ ವೇಗ ನೀಡಲಿದೆ.

ಜಾಗತಿಕ ಹೂಡಿಕೆ – ಸ್ಥಳೀಯ ಅಭಿವೃದ್ಧಿ – ಯುವಜನರಿಗೆ ಉದ್ಯೋಗ.

ಕರ್ನಾಟಕದ ಕೈಗಾರಿಕಾ ಪ್ರಗತಿಯ ಫಲ ರಾಜ್ಯದ ಪ್ರತಿಯೊಂದು ಜಿಲ್ಲೆಗೂ ತಲುಪಬೇಕು. ಹೂಡಿಕೆ, ಉದ್ಯೋಗ ಮತ್ತು ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಗೆ ಉತ್ತೇಜನ ನೀಡುವುದು ನಮ್ಮ ಬದ್ಧತೆಯಾಗಿದೆ.

ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಝೆಕ್ ನಿಯೋಗದ ಪ್ರತಿನಿಧಿಗಳಾದ ಝೆಕ್ ಗಣರಾಜ್ಯದ ವಿದೇಶಾಂಗ ಸಚಿವೆ ಮರಿಯಾ ಚಟರ್ಡೋವ, ಮಾರೆಟ್ ಲಿಬ್ರರ್ಕಿ, ಕ್ಯಾತರಿನ ಗಜುರ್ನೋವಾ, ರಿಚರ್ಡ್ ಲಾವರ್ಟಿ, ಮಿರೋಸ್ಲಾವ್ ಒಕ್ರೂಲಿ, ಕ್ಯಾತರಿನ ಪೀಟರ್ಸನ್, ಕ್ಯಾತರಿನ ವವ್ಕೊವಾ ಹಾಗೂ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಂದ ಸರಳ ವಿವಾಹ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

2026-27ನೇ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಆರ್ಥಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಹಾಗೂ ಪಾರ್ಸಿ ಅಭ್ಯರ್ಥಿಗಳಿಂದ ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಯುವ ಸಮೂಹ ವಿವಾಹಗಳ ವೆಚ್ಚಗಳಿಗಾಗಿ ಪ್ರತಿ ಜೋಡಿಗೆ ರೂ. 50,000 ನೀಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ: ವಧು, ವರರು ಜಿಲ್ಲಾ ನೋಂದಣಿ/ ವಕ್ಫ್ ಬೋರ್ಡ್ ಕಚೇರಿಗಳಲ್ಲಿ ಸಾಮೂಹಿಕ ವಿವಾಹಗಳ ಆಯೋಜಕರೆಂದು ನೋಂದಣಿಯಾಗಿರುವ ಖಾಸಗಿ ಟ್ರಸ್ಟ್ಗಳು, ದೇವಸ್ಥಾನ ಟ್ರಸ್ಟ್ಗಳು, ಸಂಘ, ಸೊಸೈಟಿಗಳು, ವಕ್ಫ್ ಸಂಸ್ಥೆಗಳು ಮತ್ತು ಖಾಸಗಿ ವ್ಯಕ್ತಿಗಳು ನಡೆಸುವ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ವಿವಾಹವಾದಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಸಾಮೂಹಿಕ ವಿವಾಹಗಳನ್ನು ಏರ್ಪಡಿಸುವ ಆಯೋಜಕರುಗಳಿಗೆ ಪ್ರೋತ್ಸಾಹ ಹಾಗೂ ವಿವಾಹದ ಖರ್ಚು-ವೆಚ್ಚಗಳಿಗಾಗಿ ಪ್ರತಿ ಜೋಡಿಗೆ ರೂ. 5,000/-ಗಳನ್ನು ನೀಡಲಾಗುವುದು. ಸಾಮೂಹಿಕ ವಿವಾಹಗಳನ್ನು ಏರ್ಪಡಿಸುವ ಆಯೋಜಕರುಗಳು ಈ ಕಾರ್ಯಕ್ರಮದ ಏಳು ದಿನ ಮುಂಚಿತವಾಗಿ ಕಾರ್ಯಕ್ರಮ ಆಯೋಜನೆಯ ಬಗ್ಗೆ ಅರ್ಜಿ ಸಲ್ಲಿಸುವುದು ಮತ್ತು ವಿವಾಹ ನಡೆದ ದಿನಾಂಕದಿಂದ 3 ದಿನಗಳೊಳಗಾಗಿ ಅಗತ್ಯ ದಾಖಲಾತಿಗಳನ್ನು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಚೇರಿಗೆ ಸಲ್ಲಿಸುವುದು. ವಧು-ವರರು ಕನಿಷ್ಠ ಏಳು ದಿನ ಮುಂಚಿತವಾಗಿ ವಾಸ್ತವ್ಯವಿರುವ ಜಿಲ್ಲೆಯಲ್ಲಿಯೇ ಅರ್ಜಿ ಸಲ್ಲಿಸತಕ್ಕದ್ದು.

ಸಾಮೂಹಿಕ ವಿವಾಹಗಳಲ್ಲಿ ಕನಿಷ್ಠ 5 ಜೋಡಿಗಳು ಭಾಗವಹಿಸಿರತಕ್ಕದ್ದು, ವಧುವಿಗೆ ಕನಿಷ್ಠ 18 ವರ್ಷದಿಂದ 42 ವರ್ಷಗಳು, ವರನಿಗೆ ಕನಿಷ್ಠ 21 -45 ವರ್ಷ ವಯಸ್ಸು ಆಗಿರತಕ್ಕದ್ದು. ವಧುವರರ ವಾರ್ಷಿಕ ಆದಾಯವು ರೂ. 2.50 ಲಕ್ಷಗಳು ಮತ್ತು ಒಟ್ಟಾರೆಯಾಗಿ 5.00 ಲಕ್ಷಗಳನ್ನು ಮೀರತಕ್ಕದ್ದಲ್ಲ. ಈ ಸೌಲಭ್ಯವನ್ನು ಜೀವನದಲ್ಲಿ ಒಮ್ಮೆ ಮಾತ್ರ ಪಡೆಯಬಹುದಾಗಿದೆ. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಈ ಯೋಜನೆಯ ಸೌಲಭ್ಯ ನೀಡೊಲಾಗುವುದು. ವರನಿಗೆ ಈಗಾಗಲೇ ಜೀವಂತ ಪತ್ನಿಯಿದ್ದಲ್ಲಿ ಅಥವಾ ವಧುವಿಗೆ ಜೀವಂತ ಪತಿ ಇದ್ದಲ್ಲಿ ಈ ಯೋಜನೆ ಅನ್ವಯಿಸುವುದಿಲ್ಲ

ಆಸಕ್ತರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-220206ನ್ನು ಸಂಪರ್ಕಿಸುವಂತೆ ಇಲಾಖೆಯ ಶಿವಮೊಗ್ಗ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular