HomeJobsಉದ್ಯೋಗಾಕಾಂಕ್ಷಿಗಳೇ ಗಮನಿಸಿ! ಕರ್ನಾಟಕ ಮಿದುಳು ಆರೋಗ್ಯ ಉಪಕ್ರಮದಡಿ ವಿವಿಧ ಹುದ್ದೆಗಳಿಗೆ ಸಂದರ್ಶನ

ಉದ್ಯೋಗಾಕಾಂಕ್ಷಿಗಳೇ ಗಮನಿಸಿ! ಕರ್ನಾಟಕ ಮಿದುಳು ಆರೋಗ್ಯ ಉಪಕ್ರಮದಡಿ ವಿವಿಧ ಹುದ್ದೆಗಳಿಗೆ ಸಂದರ್ಶನ

ಶಿವಮೊಗ್ಗ :  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ವತಿಯಿಂದ ‘ಕರ್ನಾಟಕ ಮಿದುಳು ಆರೋಗ್ಯ ಉಪಕ್ರಮ’ ಕಾರ್ಯಕ್ರಮದಡಿ ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

 ಹುದ್ದೆಗಳ ವಿವರ ಹಾಗೂ ವಿದ್ಯಾರ್ಹತೆ

 ನ್ಯೂರಾಲಜಿಸ್ಟ್ – 1 ಹುದ್ದೆ: ಡಿ.ಎಂ. ಅಥವಾ ಡಿ.ಎನ್.ಬಿ. ನ್ಯೂರಾಲಜಿ ವಿದ್ಯಾರ್ಹತೆಗೆ ಮಾಸಿಕ ವೇತನ ರೂ. 1,50,000/-, ಹಾಗೂ ಎಂ.ಡಿ/ಡಿ.ಎನ್.ಬಿ. ಜನರಲ್ ಮೆಡಿಸಿನ್ ವಿದ್ಯಾರ್ಹತೆಗೆ ವೇತನ ರೂ. 1,10,000/- ಹಾಗೂ 5 ವರ್ಷಗಳ ಅನುಭವವಿರುವ ಎಂ.ಬಿ.ಬಿ.ಎಸ್. ಪದವೀಧರರಿಗೆ ರೂ. 60,000/- ವೇತನವಿರುತ್ತದೆ. ಈ ಹುದ್ದೆಗೆ ಗರಿಷ್ಠ ವಯೋಮಿತಿ 60 ವರ್ಷಗಳು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಿಲ್ಲಾ ಸಂಯೋಜಕರು – 1 ಹುದ್ದೆ: ಲೈಫ್ ಸೈನ್ಸಸ್, ಪಬ್ಲಿಕ್ ಹೆಲ್ತ್, ಸಮಾಜಶಾಸ್ತ್ರ, ಗ್ರಾಮೀಣಾಭಿವೃದ್ಧಿ, ಅರ್ಥಶಾಸ್ತ್ರ, ಮಾನವ ಸಂಪನ್ಮೂಲ, ಸಮಾಜ ಕಾರ್ಯ(ಎಂಎಸ್ ಡಬ್ಲ್ಯೂ) ಅಥವಾ ಮನೋವಿಜ್ಞಾನ (ಸೈಕಾಲಜಿ) ವಿಷಯಗಳಲ್ಲಿ ಪ್ರಥಮ ದರ್ಜೆಯೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರಬೇಕು. ಮಾಸಿಕ ವೇತನ ರೂ. 30,000/- ಹಾಗೂ ಗರಿಷ್ಠ ವಯೋಮಿತಿ 45 ವರ್ಷಗಳು‌ ಆಗಿರುತ್ತದೆ.

 ಅರ್ಜಿ ವಿತರಣೆ: ದಿನಾಂಕ 14/10/2026 ರಿಂದ 27/10/2026 ರವರೆಗೆ ಪ್ರತಿದಿನ ಮಧ್ಯಾಹ್ನ 1:00 ಗಂಟೆಯ ತನಕ ಮಾತ್ರ ಅರ್ಜಿಗಳನ್ನು ವಿತರಿಸಲಾಗುತ್ತದೆ (ಸರ್ಕಾರಿ ರಜಾ ದಿನಗಳು, 4ನೇ ಶನಿವಾರ ಮತ್ತು ಭಾನುವಾರ ಹೊರತುಪಡಿಸಿ).

 ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ದಿನಾಂಕ 28/10/2026 ರ ಸಂಜೆ 5:00 ಗಂಟೆಯವರೆಗೆ ಅವಕಾಶವಿರುತ್ತದೆ. ಅಭ್ಯರ್ಥಿಗಳು ಕನ್ನಡದಲ್ಲಿ ಸ್ಪಷ್ಟವಾಗಿ ಓದಲು ಮತ್ತು ಬರೆಯಲು ಬರುವವರಾಗಿರಬೇಕು. ನೇಮಕಾತಿ ಪ್ರಕ್ರಿಯೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ ದೂರವಾಣಿ ಸಂಖ್ಯೆ 08182 – 222382 ಅಥವಾ 9481691580 ಅನ್ನು ಸಂಪರ್ಕಿಸಹುದು ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

 ರೈತರಿಗೆ ಉಚಿತ ಮೇವಿನ ಬೀಜದ ಕಿರುಪೊಟ್ಟಣ ವಿತರಣೆಗೆ ಅರ್ಜಿ ಆಹ್ವಾನ

 ಶಿವಮೊಗ್ಗ:2026-27ನೇ ಸಾಲಿನ ಮುಂಗಾರು ಮಳೆ ಕೊರತೆಯ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುವ ಸಂಭವವಿದೆ. ಇದರ ಮುನ್ನೆಚ್ಚರಿಕೆ ಕ್ರಮವಾಗಿ, ಜಿಲ್ಲೆಯ ಜಾನುವಾರು ಸಾಕಾಣಿಕೆಯಲ್ಲಿ ತೊಡಗಿರುವ ರೈತರಿಗೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಉಚಿತವಾಗಿ ವಿವಿಧ ತಳಿಯ ಮೇವಿನ ಬೀಜದ ಕಿರುಪೊಟ್ಟಣಗಳನ್ನು ವಿತರಿಸಲಾಗುತ್ತಿದೆ.

 ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ, ಜಾನುವಾರು ಹೊಂದಿರುವ ಹಾಗೂ ನೀರಾವರಿ ಜಮೀನು ಹೊಂದಿರುವ ಆಸಕ್ತ ರೈತರಿಗೆ ಆದ್ಯತೆ ಮೇರೆಗೆ ಈ ಮೇವಿನ ಕಿರುಪೊಟ್ಟಣಗಳನ್ನು ವಿತರಿಸಲಾಗುತ್ತದೆ. ಈ ಯೋಜನೆ ಸೌಲಭ್ಯವನ್ನು ಪಶುವೈದ್ಯಕೀಯ ಸಂಸ್ಥೆಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ ಗ್ರಾಮ ಪಂಚಾಯತಿಗಳ ಮೂಲಕ ನಿಯಮಾನುಸಾರ ನೀಡಲಾಗುವುದು.

ಆಸಕ್ತ ರೈತರು ಉಚಿತ ಮೇವಿನ ಬೀಜ ಪಡೆಯಲು ಆಧಾರ್ ಕಾರ್ಡ್, ಫ್ರೂಟ್ ಐಡಿ, ಜಮೀನಿನ ಪಹಣಿ ಪ್ರತಿಯೊಂದಿಗೆ ಒಂದು ವಾರದ ಒಳಗಾಗಿ ತಮ್ಮ ಹತ್ತಿರದ ಪಶುವೈದ್ಯಕೀಯ ಸಂಸ್ಥೆಯನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಲು ಕೋರಲಾಗಿದೆ:

 ಹೆಚ್ಚುವರಿ ಮೇವು ಹೊಂದಿರುವ ರೈತರ ಗಮನಕ್ಕೆ:

ಒಂದು ವೇಳೆ ರೈತರ ಬಳಿ ತಮ್ಮ ಜಾನುವಾರುಗಳಿಗೆ ಬೇಕಾದ ಪ್ರಮಾಣಕ್ಕಿಂತ ಹೆಚ್ಚುವರಿ ಮೇವು ಲಭ್ಯವಿದ್ದರೆ, ಅಂತಹ ರೈತರು ತಮ್ಮ ಬಳಿ ಇರುವ ಹೆಚ್ಚಿನ ಮೇವಿನ ಪ್ರಮಾಣ, ದರ, ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ತಮ್ಮ ಹತ್ತಿರದ ಪಶುವೈದ್ಯಕೀಯ ಸಂಸ್ಥೆಯಲ್ಲಿ ​ನೊಂದಾಯಿಸಿಕೊಳ್ಳುವುದು. ಹೆಚ್ಚಿನ ಮಾಹಿತಿಗಾಗಿ ತಾಲೂಕು ಮಟ್ಟದ ಅಧಿಕಾರಿಗಳ ದೂ.ಸಂ.: ಶಿವಮೊಗ್ಗ -9343464008, ಭದ್ರಾವತಿ-9448318878, ತೀರ್ಥಹಳ್ಳಿ-9448438142, ಶಿಕಾರಿಪುರ-9448697472, ಸೊರಬ-9900632880, ಸಾಗರ-9449139374, ಹೊಸನಗರ-9663702482 ಗಳನ್ನು ಸಂಪರ್ಕಿಸು​ವಂತೆ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular