ದಾವಣಗೆರೆ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ, ದಕ್ಷತೆಯಿಂದ ಮತ್ತು ಪ್ರಾಮಾಣಿಕವಾಗಿ ಪ್ರಕ್ರಿಯೆ ಪೂರ್ಣಗೊಳಿಸಲು ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳು ಉತ್ತಮ ಕೆಲಸ ಮಾಡುವ ಮೂಲಕ ಯಾವುದೇ ದೂರುಗಳಿಗೆ ಆಸ್ಪದ ನೀಡಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ತಿಳಿಸಿದರು.
ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪದವೀಧರ ಕ್ಷೇತ್ರದ ಚುನಾವಣೆ ಕುರಿತು ಹಾಗೂ ಚುನಾವಣೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಶೇಕಡ 100ರಷ್ಟು ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಒಟ್ಟು 7,086 ನೋಟಿಸ್‌ಗಳನ್ನು ನೀಡಲಾಗಿದೆ. ಇದರಲ್ಲಿ 180 ಮತದಾರರು ಮೃತಪಟ್ಟವರು ಮತ್ತು ಎರಡು ಕಡೆ ಇರುವವರು, ನೇಪಾಳಿ 5 ಪ್ರಜೆಗಳು, ವಿದೇಶದಲ್ಲಿರುವ ಒಬ್ಬರು ಮಾತ್ರ ಪಟ್ಟಿಯಿಂದ ತಿರಸ್ಕರಿಸಲಾಗಿದೆ. ಇದಕ್ಕೆ ದಾಖಲೆ ಸಮೇತ ಕಾರಣ ತಿಳಿಸಿ ಈ ಎಲ್ಲಾ ಪಟ್ಟಿಗಳನ್ನು ಎಲ್ಲಾ ರಾಜಕೀಯ ಪಕ್ಷಗಳಿಗಳ ಜೊತೆ ಹಂಚಿಕೊಳ್ಳಲಾಗಿದೆ. ಯಾವ ಪಕ್ಷ ಮತ್ತು ಯಾವ ಕ್ಷೇತ್ರವೆಂಬ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27 ರಂದು ಪ್ರಕಟಿಸಲಾಗುವುದು ಎಂದರು.
ನಮೂನೆ 6, 6A, 7 ಮತ್ತು 8ರ ಮತದಾರರ ಪಟ್ಟಿಗೆ ಸೇರ್ಪಡೆ, ಪಟ್ಟಿಯಲ್ಲಿನ ಹೆಸರು ತಿದ್ದುಪಡಿ, ಮತಪಟ್ಟಿಯಿಂದ ವರ್ಗಾವಣೆ ಮಾಹಿತಿಯನ್ನು ಕೂಡ ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳಿಗೆ ಒದಗಿಸಲಾಗಿದೆ. ಮತದಾರರ ಪಟ್ಟಿಗೆ ಸೇರ್ಪಡೆ, ಪಟ್ಟಿಯಲ್ಲಿನ ಹೆಸರು ತಿದ್ದುಪಡಿ , ಮತಪಟ್ಟಿಯಿಂದ ವರ್ಗಾವಣೆ ನಿರಂತರ ಪ್ರಕ್ರಿಯೆಯಾಗಿದ್ದು ಮತದಾರರು ಯಾವಾಗ ಬೇಕಾದರೂ ಈ ಪ್ರಕ್ರಿಯೆಗಳನ್ನು ಕೖಗೊಳ್ಳಬಹುದು ಎಂದು ತಿಳಿಸಿದರು.
ಚುನಾವಣಾ ಆಯೋಗದ ನಿರ್ದೇಶನಗಳು ಮತ್ತು ಸುತ್ತೋಲೆಗಳಂತೆ ಎಲ್ಲಾ ಸಿಬ್ಬಂದಿ ಅಧಿಕಾರಿಗಳು ತಮ್ಮನ್ನು ತಾವು ತೊಡಗಿಸಿಕೊಂಡು ಎಸ್.ಐ. ಆರ್ ಕೆಲಸವನ್ನು ಪರಿಪೂರ್ಣವಾಗಿ ಮುಗಿಸಿಕೊಟ್ಟಿದ್ದಾರೆ ಎಂದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ: 43 ಮತಗಟ್ಟೆಗಳು
ದಾವಣಗೆರೆ: ಮೂರು ತಾಲ್ಲೂಕುಗಳಲ್ಲಿ ಒಟ್ಟು 43 ಮತ ಕೇಂದ್ರಗಳಲ್ಲಿ ಅಕ್ಟೋಬರ್ 23 ರಂದು ಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಜಿ. ಎಂ. ಗಂಗಾಧರಸ್ವಾಮಿ ತಿಳಿಸಿದರು.
ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಔಪಚಾರಿಕವಾಗಿ ಮಾತನಾಡಿದರು.
ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ ದಾವಣಗೆರೆ, ಹರಿಹರ ಹಾಗೂ ಜಗಳೂರು ತಾಲ್ಲೂಕಿಗೆ ಅನ್ವಯಿಸಲಿದ್ದು ಈ ಜಿಲ್ಲೆಗೆ ಸಂಬಂಧಿಸಿದಂತೆ 17660 ಪುರುಷ, 13956 ಮಹಿಳಾ ಮತದಾರರು ಸೇರಿ ಒಟ್ಟು 31616 ಮತದಾರರಿದ್ದಾರೆ. ಮತದಾರರು ತಮ್ಮ ಹೆಸರುಗಳನ್ನು ದಾವಣಗೆರೆ , ಹರಿಹರ ಜಗಳೂರು ತಾಲ್ಲೂಕು ಕಚೇರಿಗಳಲ್ಲಿ ಮತ್ತು www.ceokarnataka.kar.nic.in ಮತ್ತು https://davanagere.nic.in ವೆಬ್ ಸೈಟ್ ನಲ್ಲಿ ಪರಿಶೀಲಿಸಿಕೊಳ್ಳಬಹುದು ಎಂದು ತಿಳಿಸಿದರು.
43-ಮತಗಟ್ಟೆಗಳ ವಿವರ:
ಮತದಾನವು ಹರಿಹರ 10 ಮತಗಟ್ಟೆಗಳಲ್ಲಿ ದಾವಣಗೆರೆ ಉತ್ತರ-17, ದಾವಣಗೆರೆ ದಕ್ಷಿಣ-06 , ಮಾಯಕೊಂಡ-6 ಮತ್ತು ಜಗಳೂರು -4 ಮತಗಟ್ಟೆಗಳಲ್ಲಿ ನಡೆಯಲಿದೆ.
ಹರಿಹರ-6: ಮರಿಯಾ ನಿವಾಸ್ ಹೈಯರ್ ಪ್ರೈಮರಿ ಶಾಲೆ ಕೊಠಡಿ ಸಂಖ್ಯೆ 1 ಮತ್ತು 2, ಎಸ್.ಜಿ.ಆರ್.ಕೆ.ಎಸ್ ಪ್ರಥಮ ದರ್ಜೆ ಮಹಿಳಾ ಕಾಲೇಜು ಕೊಠಡಿ ಸಂಖ್ಯೆ 1 ಮತ್ತು 2, ಸರ್ಕಾರಿ ಬಾಲಕಿಯರ ಪ್ರೌಡಶಾಲೆ ಗಾಂಧಿ ಮೈದಾನ ಕೊಠಡಿ ಸಂಖ್ಯೆ 1 ಮತ್ತು 2. ಮಲೆಬೆನ್ನೂರು-4 : ಸರ್ಕಾರಿ ಪದವಿ ಪೂರ್ವ ಕಾಲೇಜು ಜಿಗಳಿ ರಸ್ತೆ ಕೊಠಡಿ ಸಂಖ್ಯೆ 1,2,3 ಮತ್ತು 4.
ದಾವಣಗೆರೆ: ರಾಜನಹಳ್ಳಿ ಸೀತಮ್ಮ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು 1,2,3,4 , ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಪಿ.ಜೆ ಬಡಾವಣೆ ಕೊಠಡಿ ಸಂಖ್ಯೆ 1,2,3 4 ಮತ್ತು 5, ಅಶೋಕ ರಸ್ತೆ ಮಹಿಳಾ ಸೇವಾ ಸಮಾಜ ಶ್ರೀಮತಿ ಟಿ ಎಂ ಚಿನ್ನಮ್ಮ ಮಹೇಶ್ವರಯ್ಯ ಮೆಮೆರಿಯಲ್ ಪದವಿ ಪೂರ್ವ ಕಾಲೇಜು ಕೊಠಡಿ ಸಂಖ್ಯೆ 1,2,3,4,5,6 ಮತ್ತು7, ಡಯಟ್ ಕೊಠಡಿ ಸಂಖ್ಯೆ 1,2 ಮತ್ತು 3, ಮೋತಿ ವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಠಡಿ ಸಂಖ್ಯೆ 1,2,3 ಮತ್ತು 4.
ಆನಗೋಡು-2: ಸರ್ಕಾರಿ ಹಿರಿಯ ಹೈಯರ್ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ 1 ಮತ್ತು 2, ಅಣಜಿ ಸರ್ಕಾರಿ ಮೊಡೆಲ್ ಹೈಯರ್ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ 1 , ಮಯಾಕೊಂಡ ಸರ್ಕಾರಿ ಕೆ.ಪಿ.ಎಸ್ ಶಾಲೆ ಕೊಠಡಿ ಸಂಖ್ಯೆ1 , ಲೋಕಿಕೆರೆ ಮಾರುತಿ ಸರ್ಕಾರಿ ಪ್ರೌಡಶಾಲೆ ಕೊಠಡಿ ಸಂಖ್ಯೆ 1 ಮತ್ತು 2 , ಜಗಳೂರು ಡಾ.ಬಿ.ಆರ್ . ಅಂಬೇಡ್ಕರ್ ವೃತ್ತ ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಠಡಿ ಸಂಖ್ಯೆ 1 ಮತ್ತು 2, 1-ಹೊಸಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು ,1- ಜಗಳೂರು ಬಿಳಿಚೋಡು ಸರ್ಕಾರಿ ಕೆ.ಪಿ.ಎಸ್ ಮತ್ತು ಕಾಲೇಜು ವಿಭಾಗ
ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಮತಾ ಹೊಸಗೌಡರ್, ಮಹಾನಗರ ಪಾಲಿಕೆ ಆಯುಕ್ತ ಮಹಾಂತೇಶ್ ಹಾಗೂ ಇತರರು ಉಪಸ್ಥಿತರಿದ್ದರು.

