ಶಿವಮೊಗ್ಗ: ವೇಗವಾಗಿ ಬಂದ ಕಾರು ವಾಕಿಂಗ್ ಹೋಗಿದ್ದ ಶಿಕ್ಷಕಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಭೀಕರ ಅಪಘಾತದಲ್ಲಿ ಶಿಕ್ಷಕಿ ಸ್ಥಳದಲ್ಲೇ ಸಾಅವನ್ನ[ಪಿರುವ ದಾರುಣ ಘಟನೆ ಶಿವಮೊಗ್ಗದಲ್ಲಿ ನಡೆದುದೆ.
ಶುವಮೊಗ್ಗದ ಸಾಗರ ರಸ್ತೆಯಲ್ಲಿ ಗಂಗಮ್ಮ ದೇವಿ ದೇವಸ್ಥಾನದ ಬಳಿ ಈ ಅಪಘಾತ ಸಂಭವಿಸಿದೆ. ವಾಕಿಂಗ್ ಗೆ ಹೋಗುತ್ತಿದ್ದ ಶಿಕ್ಷಕಿಗೆ ಕಾರು ಡಿಕ್ಕಿ ಹೊಡೆದಿದೆ. ಶಿಕ್ಷಕಿ ರೂಪಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತದ ಬಳಿಕ ಕಾರು ಚಾಲಕ ಕಾರಿನ ಸಮೇತ ಪರಾರುಯಾಗಿದ್ದಾನೆ. ಮೃತ ಶಿಕ್ಷಕಿ ರೂಪಾ ಅವರು ಶಕ್ತಿಧಾಮ ಲೇಔಟ್ ನಿವಾಸಿ ಪ್ರೊ.ಅವೀಶ್ ಪತ್ನಿ. ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕುದುರೆ ಗಡಿ ರೇಸ್: ವಾಹನ ಸವಾರರ ಪರದಾಟ: ಲಕ್ಷ ಲಕ್ಷ ರೂ.ಬೆಟ್ಟಿಂಗ್ ಆರೋಪ
ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಕಿಡಿಗೇಡಿಗಳು ರಾಜಾರೋಷವಾಗಿ ಕುದುರೆ ಗಾಡಿ ರೇಸ್ ನಡೆಸಿ, ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿದ್ದಲ್ಲದೇ ವಾಹನ ಸವಾರರು, ಪ್ರಾಯಾಣಿಕರಿಗೆ ಸಮಸ್ಯೆಯುಂಟುಮಾಡಿದ ಘಟನೆ ನಡೆದಿದೆ.
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-75 (ಮಂಡ್ಯ NH-75) ಅನ್ನು ರೇಸ್ ಟ್ರಾಕ್ ಮಾಡಿಕೊಂಡಿ್ ಕಿಡಿಗೇಡಿಗಳು ಕುದುರೆ ಗಾಡಿ ರೇಸ್ ನಡೆಸಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್ನಿಂದ ಕದಬಳ್ಳಿ ಟೋಲ್ ಗೇಟ್ವರೆಗಿನ ಹೆದ್ದಾರಿ ರಸ್ತೆಯಲ್ಲಿ ಈ ಘಟನೆ ನಡೆದಿದೆ.
ಪೊಲೀಸ್ ಇಲಾಖೆಯ ಅಥವಾ ಕಾನೂನಿನ ಯಾವುದೇ ಭಯವಿಲ್ಲದೇ, ರಾಷ್ಟ್ರೀಯ ಹೆದ್ದಾರಿಯಲ್ಲಿ ಭರ್ಜರಿ ಕುದುರೆ ಗಾಡಿಗಳನ್ನ ಓಡಿಸಲಾಗಿದೆ.
ಕುದುರೆ ಗಾಡಿ ರೇಸ್ ಹಿಂದೆ ದೊಡ್ಡ ಮಟ್ಟದ ಬೆಟ್ಟಿಂಗ್ ನಡೆದಿರುವ ಆರೋಪ ಕೇಳಿಬಂದಿದೆ. ಲಕ್ಷ-ಲಕ್ಷ ರೂಪಾಯಿ ಹಣವನ್ನ ಬೆಟ್ಟಿಂಗ್ ಕಟ್ಟಿ ಈ ಅಪಾಯಕಾರಿ ರೇಸ್ ನಡೆಸಲಾಗಿದೆ. ಕುದುರೆ ಗಾಡಿ ಬೆನ್ನಲ್ಲೇ ನೂರಾರು ಬೈಕ್ಗಳು ಸಹ ಅಜಾಗರೂಕತೆಯಿಂದ ರಸ್ತೆಯಲ್ಲಿ ನುಗ್ಗಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾರೆ.
ಹೆದ್ದಾರಿಯಲ್ಲಿ ಈ ರೀತಿ ಕುದುರೆ ಗಾಡಿ ರೇಸ್ ಆಡಿ ಇತರರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವುದನ್ನ ಕಂಡು ಪ್ರಶ್ನಿಸಲು ಹೋದ ಸಾರ್ವಜನಿಕರಿಗೆ ರೇಸ್ನಲ್ಲಿದ್ದವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದಾರೆ. ಇದರಿಂದಾಗಿ ಆ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಇತರೆ ವಾಹನ ಸವಾರರು ಮತ್ತು ಪ್ರಯಾಣಿಕರು ಕೆಲಕಾಲ ತೀವ್ರ ಪರದಾಟ ನಡೆಸಿದರು. ಇಂತಹ ಕಿಡಿಗೇಡಿಗಳ ವಿರುದ್ಧ ಪೊಲೀಸ್ ಇಲಾಖೆ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

