HomeKarnatakaಹಾಸನ ಡಿಸಿ V/S ಎಸ್ ಪಿ: ಅವಘಡ ಸಂಭವಿಸಿದ್ದರೆ ಅದರ ಹೊಣೆ ಯಾರು ಹೊರುತ್ತಿದ್ದರು? ಜಿಲ್ಲಾಧಿಕಾರಿ...

ಹಾಸನ ಡಿಸಿ V/S ಎಸ್ ಪಿ: ಅವಘಡ ಸಂಭವಿಸಿದ್ದರೆ ಅದರ ಹೊಣೆ ಯಾರು ಹೊರುತ್ತಿದ್ದರು? ಜಿಲ್ಲಾಧಿಕಾರಿ ಲತಾಕುಮಾರಿ ಪ್ರಶ್ನೆ

ಹಾಸನ: ಗಣೇಶ ವಿಸರ್ಜನೆ ವಿಚಾರವಾಗಿ ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ಹಾಗೂ ಎಸ್ ಪಿ ಶುಭನ್ವಿತಾ ಜಟಾಪಟಿ ವಿಚಾರವಾಗಿ ಡಿಸಿ ಲತಾಕುಮಾರಿ ಸ್ಪಷ್ಟನೆ ನೀಡಿದ್ದಾರೆ. ದೇವಿಗೆರೆಯಲ್ಲಿ ಗಣೇಶ ವಿಸರ್ಜನೆ ವೇಳೆ ಯಾವುದಾದರೂ ಅವಘಡ ಸಂಭವಿಸಿದ್ದರೆ ಜಿಲ್ಲಾಡಳಿತ ಸಮಸ್ಯೆಗೆ ಸಿಲುಕುತ್ತಿತ್ತು. ಅದರ ಹೊಣೆಯನ್ನು ಯಾರು ಹೊರುತ್ತಿದ್ದರು? ಎಂದು ಪ್ರಶ್ನಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ದೇವಿಗೆರೆಯಲ್ಲಿ ಗಣಪತಿ ವಿಸರ್ಜನೆ ಮಾಡುವವರು ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ. ದೇವರ ದಯೆಯಿಂದ ಏನೂ ಆಗಿಲ್ಲ. ತೊಂದರೆ ಆದಾಗ ಮಾತ್ರ ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡುತ್ತಾರೆ. ಅಲ್ಲಿಯವರೆಗೂ ಕಣ್ಮುಚ್ಚಿ ಕುಳಿತು ಕೊಂಡಿರುತ್ತಾರೆ. ಏನಾದ್ರೂ ಅವಘಡ ಆಗಿದ್ದರೆ ಯಾರು ಹೊಣೆ ಎಂದು ಹಾಸನ ಡಿಸಿ ಲತಾಕುಮಾರಿಯವರು ಪೊಲೀಸ್ ಇಲಾಖೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಯ್ದೆಯಲ್ಲಿ ಇರುವುದನ್ನು ಫಾಲೋ ಮಾಡ್ತಿಲ್ಲ. ಏನಾದರೂ ಘಟನೆ ಆದರೆ ಮಾತ್ರ ಕಾನೂನು ಸುವ್ಯವಸ್ಥೆಯ ಮಾತು ಬರುತ್ತದೆ. ತಹಶೀಲ್ದಾರ್ ವರದಿ ಸೂಕ್ಷ್ಮವಾಗಿದೆ. ಅದನ್ನು ಪರಿಶೀಲಿಸಿ ಆದೇಶ ಕೊಡಬೇಕಿತ್ತು ಎಂದಿದ್ದಾರೆ.

ಇದೇ ವೇಳೆ, ಕಳೆದ ವರ್ಷ ಮೊಸಳೆಹೊಸಳ್ಳಿಯಲ್ಲಿ ಗಣಪತಿ ಮೆರವಣಿಗೆ ವೇಳೆ ಟ್ರಕ್ ಹರಿದು 11 ಮಂದಿ ಮೃತಪಟ್ಟಿದ್ದನ್ನು ಅವರು ನೆನಪಿಸಿಕೊಂಡರು. ದೇವಿಗೆರೆ ಕೊಳಕ್ಕೆ ತನ್ನದೇ ಆದ ಇತಿಹಾಸ ಇದೆ. ಧಾರ್ಮಿಕವಾಗಿ ಪ್ರಸಿದ್ಧವಾದ ಸ್ಥಳವಾಗಿದೆ. ವಾರಾಹಿ, ಇಂದ್ರಾಣಿ, ಚಾಮುಂಡಿ ದೇವಿಗೆರೆಯಲ್ಲಿ ನೆಲೆಸಿದ್ದಾರೆ ಎಂಬ ನಂಬಿಕೆ ಇದೆ. ಅಷ್ಟೊಂದು ಪವಿತ್ರ ಸ್ಥಳವನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಅದನ್ನು ಬಿಟ್ಟು ಬೇರೆ ಯಾವ ಉದ್ದೇಶವೂ ಇಲ್ಲ ಎಂದರು.

ಮಹಾನಗರಪಾಲಿಕೆ ವತಿಯಿಂದ 35 ವಾರ್ಡ್‌ಗಳಲ್ಲಿ ಗಣಪತಿ ವಿಸರ್ಜನೆಗೆ ಅವಕಾಶ ಮಾಡಿಕೊಡಲಾಗಿತ್ತು. ಎಲ್ಲಿಯೂ ಸಮಸ್ಯೆ ಆಗಲಿಲ್ಲ ಎಂದು ತಿಳಿಸಿದ್ದಾರೆ. ದೇವಿಗೆರೆಯಲ್ಲಿ ಗಣಪತಿ ವಿಸರ್ಜನೆ ಮಾಡುತ್ತಿದ್ದಾರೆ ಎಂದು ಅ.3 ರಂದು ತಹಶೀಲ್ದಾರ್ ಪತ್ರ ಬಂದಿತ್ತು. ರಸಾಯನಿಕಯುಕ್ತ, ಪಿಓಪಿ ಗಣಪತಿಗಳನ್ನು ನೀರಿಗೆ ಹಾಕುವಂತಿಲ್ಲ. ನಿಯಮ ಉಲ್ಲಂಘನೆ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದರು.

ನಾನು ಕಾನೂನಿನ ಬಗ್ಗೆ ಮಾತ್ರ ಮಾತನಾಡುತ್ತಿದ್ದೇನೆ. ತಹಶೀಲ್ದಾರ್ ಪತ್ರ ನೋಡಿ ನನಗೆ ಬೇಸರ ಆಯ್ತು. ಕ್ರಮ ಕೈಗೊಳ್ಳಲು ಒಂದು ಆದೇಶವನ್ನು ಹೊರಡಿಸಿದೆ. ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೃತ್ಯ ಮಾಡಿಲ್ಲ. ಹಳ್ಳ, ಕೊಳ್ಳ, ಕಲ್ಯಾಣಿ ಉಳಿಸುವುದು ಎಲ್ಲರ ಜವಾಬ್ದಾರಿ ಎಂದು ತಿಳಿಸಿದರು.

ಗಣಪತಿ ವಿಸರ್ಜನೆಗೆ ಮುಜರಾಯಿ, ತಹಶೀಲ್ದಾರ್, ಯಾವ ಅಧಿಕಾರಿಯಿಂದ ಅವರು ಅನುಮತಿ ಪಡೆದಿದ್ದಾರೆ? ಹೆಚ್ಚಿನ ಎತ್ತರದ ಗಣಪತಿಗಳನ್ನು ವಿಸರ್ಜನೆ ಮಾಡಲಾಗಿದೆ. ಯಾರಿಂದಲೂ ಅನುಮತಿ ಪಡೆದಿಲ್ಲ. ಗಣೇಶಮೂರ್ತಿ ಎಷ್ಟು ಎತ್ತರ, ಅಗಲ, ಯಾವುದರ ಬಗ್ಗೆ ಮಾಹಿತಿ ಹೇಳಿಲ್ಲ. ಗಣಪತಿ ಮೂರ್ತಿ ರಸಾಯನಿಕಯುಕ್ತ ಬಣ್ಣದಿಂದ ಕೂಡಿತ್ತು ಎಂದು ಹೇಳಿದ್ದಾರೆ.

ಇದು ಆಡಳೀತಾತ್ಮಕ ವಿಚಾರ. ಅವರು ಒಬ್ಬರು ಅಧಿಕಾರಿ, ಅವರದ್ದೇ ಆದ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಯಾವ ಅಧಿಕಾರಿಯ ಮೇಲೂ ನನಗೆ ವೈಯಕ್ತಿಕ ದ್ವೇಷ ಇಲ್ಲ. ಅವರ ಕೆಲಸ ಅವರು ಮಾಡಬೇಕು. ಭಿನ್ನಾಭಿಪ್ರಾಯ ಇರಲ್ಲ, ನಾನು ಆದೇಶ ಹೊರಡಿಸಿದ್ದನ್ನು ತಹಶೀಲ್ದಾರ್ ಆಗಲಿ ಇನ್ನೊಬ್ಬರಾಗಲಿ ಪಾಲನೆ ಮಾಡಬೇಕು ಎಂದು ಎಸ್‌ಪಿ ಶುಭನ್ವಿತಾ ಅವರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಅವಘಡ ಸಂಭವಿಸಿದಾಗ ಜನಪ್ರತಿನಿಧಿಗಳನ್ನು ದೂರುತ್ತಿದ್ದರೋ, ಅಧಿಕಾರಿಗಳನ್ನು ದೂರುತ್ತಿದ್ದರೋ? ಮೊದಲು ಅವರ ಪರ, ಇವರ ಪರ ನಿಲ್ತಿವಿ ಅಂತಾರೆ ಬರೀ ಮೌಖಿಕವಾಗಿ ಮಾತನಾಡಿದರೆ ಆಗಲ್ಲ. ಅವಘಡ ಸಂಭವಿಸಿದಾಗ ಅವರು ಯಾರದಾದರೂ ಬರ್ತಾರಾ? ಲಿಖಿತವಾಗಿಯೇ ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಗಣಪತಿ ವಿಸರ್ಜನೆಗೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಅವರಿಗೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಈ ವಿಚಾರ ಹಾಸನ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular