HomeKarnatakaರಾಜ್ಯ ಸರ್ಕಾರದ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ..! ಅ.15ರವರೆಗೆ ಅವಕಾಶ

ರಾಜ್ಯ ಸರ್ಕಾರದ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ..! ಅ.15ರವರೆಗೆ ಅವಕಾಶ

 ಡಿ.ದೇವರಾಜ ಅರಸು, ಲಿಂಗಾಯತ, ಮರಾಠ, ಒಕ್ಕಲಿಗ, ಉಪ್ಪಾರ, ಅಂಬಿಗ, ವಿಶ್ವಕರ್ಮ, ಮಡಿವಾಳ, ಅಲೇಮಾರಿ, ಸವಿತಾ ಸಮಾಜ, ಕಾಡುಗೊಲ್ಲ, ಆರ್ಯವೈಶ್ಯ ಅಭಿವೃದ್ದಿ ನಿಗಮಗಳ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30, 2026 ರವರೆಗೆ ನಿಗದಿಪಡಿಸಲಾಗಿತ್ತು. ಆದರೆ ಹಿಂದುಳಿದ ವರ್ಗಗಳ ಜನರ ಅನುಕೂಲಕ್ಕಾಗಿ ಅರ್ಜಿ ಸಲ್ಲಿಸಲು ಅಕ್ಟೋಬರ್ 15, 2026 ರವರೆಗೆ ಅವಧಿ ವಿಸ್ತರಿಸಲಾಗಿದೆ.

 ಸ್ವಯಂ ಉದ್ಯೋಗ /ಕಾಯಕ ಕಿರಣ/ಸಹಜೀರಾಜೇ ಸಮೃಧ್ದಿ ಯೋಜನೆ, ಗಂಗಾ ಕಲ್ಯಾಣ, ಜೀವಜಲ, ಜೀಜಾವು ಜಲಭಾಗ್ಯ, ಶ್ರೀ ಭಗಿರಥ ಯೋಜನೆ, ಅರಿವು-ಶೈಕ್ಷಣಿಕ, ಬಸವ ಬೆಳಗು ಯೋಜನೆ, ವಿದೇಶಿ ವಿದ್ಯಾ ವಿಕಾಸ /ವಿದೇಶಿ ವಿಶ್ವ ವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ಹೊಲಿಗೆ ಯಂತ್ರ ವಿತರಣೆ ಯೋಜನೆ, (ಡಿ.ದೇವರಾಜ ಅರಸು ಮತ್ತು ಮರಾಠ, ವಿಶ್ವಕರ್ಮ, ಕಾಡುಗೊಲ್ಲ, ನಿಗಮಗಳಿಗೆ ಮಾತ್ರ)

ಸ್ವಾತಂತ್ರ್ಯ ಮಹೋತ್ಸವದ ಅಮೃತ ಮುನ್ನಡೆ ಯೋಜನೆಯ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ (ಲಿಂಗಾಯತ, ಮರಾಠ , ವಿಶ್ವಕರ್ಮ, ಒಕ್ಕಲಿಗ, ಕಾಡುಗೊಲ್ಲ, ನಿಗಮಗಳಿಗೆ ಮಾತ್ರ)

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿಸಲ್ಲಿಸಲು ಅರ್ಹರಿರುವುದಿಲ್ಲ. 2023-24 ಮತ್ತು 2024-25 ಹಾಗೂ 2025-26ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯದೇ ಇರುವ ಫಲಾಪೇಕ್ಷಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.

ಅರ್ಜಿದಾರರು ಅರ್ಜಿಗಳನ್ನು ಸೇವಾಸಿಂಧು ಪೋರ್ಟಲ್ http://sevasindhu.karnataka.gov.in ಮುಖಾಂತರ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ಕಛೇರಿಯ ದೂರವಾಣಿ ಸಂ:0836-2957829 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಹಿಂಗಾರು ಹಂಗಾಮಿಗೆ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಲಭ್ಯ

  2026-27 ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಧಾರವಾಡ ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಕಡಲೆ, ಜೋಳ, ಗೋಧಿ, ಮೆಕ್ಕೆಜೋಳ ಮತ್ತು ಕುಸುಬೆ ಇತ್ಯಾದಿ ಬಿತ್ತನೆ ಬೀಜಗಳು ಲಭ್ಯವಿದ್ದು, ರೈತರು ತಮ್ಮ ಹತ್ತಿರದ ರೈತ ಸಂಪರ್ಕಕ್ಕೆ ಭೇಟಿ ನೀಡಿ ಬಿತ್ತನೆ ಬೀಜ ಪಡೆಯಬಹುದಾಗಿದೆ.

 ಒಬ್ಬ ರೈತರಿಗೆ ಒಂದು ಹಂಗಾಮಿನಲ್ಲಿ ಗರಿಷ್ಟ 5 ಎಕರೆ (2ಹೆಕ್ಟೇರ್) ವರೆಗೆ ವರ್ಷದಲ್ಲಿ ಯಾವುದಾದರೂ ಎರಡು ಹಂಗಾಮಿನಲ್ಲಿ ಮಾತ್ರ ಬಿತ್ತನೆ ಬೀಜ ವಿತರಿಸಲು ಅವಕಾಶವಿದ್ದು, ಒಂದು ಬೆಳೆಯ ಬಿತ್ತನೆ ಬೀಜವನ್ನು ಕೇವಲ 3 ಎಕರೆಗೆ ಸೀಮಿತಗೊಳಿಸಿ ಹಾಗೂ ಉಳಿದ ಎರಡು ಎಕರೆಗೆ ಬೇರೆ ಬೆಳೆಯ ಬಿತ್ತನೆ ಬೀಜವನ್ನು ವಿತರಿಸಲಾಗುವುದು. ರೈತರು ಕಡ್ಡಾಯವಾಗಿ ಆಧಾರ ಕಾರ್ಡ ಝರಾಕ್ಸ್ ಪ್ರತಿಯನ್ನು ತರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರು ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರವನ್ನು ಮತ್ತು ಆಧಾರ ಕಾರ್ಡ ಝರಾಕ್ಸ್ ಪ್ರತಿಯನ್ನು ತರಬೇಕು ಮತ್ತು ಬಿತ್ತನೆ ಬೀಜ ಪಡೆಯಲು ಎಫ್.ಐ.ಡಿ, ನಂಬರ್ ಕಡ್ಡಾಯವಾಗಿ ಇರಬೇಕು.

 ಒಣ ಮಣ್ಣಿನಲ್ಲಿ ಕಡಿಮೆ ತೇವಾಂಶ ಇರುವ ಪ್ರದೇಶಗಳಲ್ಲಿ (ಅರೆ ಹಸಿಯಾಗುವ ಸಂದರ್ಭ) ರೈತರು ಬಿತ್ತನೆ ಕೈಗೊಳ್ಳದೇ ಸಮರ್ಪಕ ಮಳೆಗಾಗಿ ಕಾಯ್ದು ನಂತರ ಬಿತ್ತನೆ ಕೈಗೊಳ್ಳುವುದು ಸೂಕ್ತವೆಂದು ಪರಿಗಣಿಸಲಾಗಿದೆ. ಆದ್ದರಿಂದ ರೈತರು ಮಣ್ಣಿನ ತೇವಾಂಶ ಗಮನದಲ್ಲಿಟ್ಟುಕೊಂಡು ಬಿತ್ತನೆಗೆ ಹದಭರಿತವಾಗಿದ್ದ ಸಂದರ್ಭಧಲ್ಲಿ ಮಾತ್ರ ಬಿತ್ತನೆ ಕೈಗೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular