ಚಿತ್ರದುರ್ಗ: ಲಾರಿಗೆ ಕಾರ್ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿದ್ದಾರೆ. ಕೆಆರ್ ಹಳ್ಳಿ ಗೇಟ್ ಸಮೀಪ ಅಪಘಾತ ಸಂಭವಿಸಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕೆಆರ್ ಹಳ್ಳಿ ಸಮೀಪ ಅಪಘಾತ ಸಂಭವಿಸಿದೆ. ಲಾರಿ ಟೈಯರ್ ಸ್ಪೋಟಗೊಂಡು ದಿಢೀರ್ ಎಡಕ್ಕೆ ತಿರುಗಿದೆ. ಲಾರಿ ಹಿಂದೆ ಬರುತ್ತಿದ್ದ ಕಾರ್ ಲಾರಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.
ಶಶಿಧರ್(22), ಮಂಜುನಾಥ್(22) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಬಸವರಾಜ್(21) ಸಾವನ್ನಪ್ಪಿದ್ದಾರೆ. ಮೃತರು ಕೊಪ್ಪಳ ಜಿಲ್ಲೆ ಕುಷ್ಟಗಿ ಮೂಲದವರು ಎಂದು ತಿಳಿದುಬಂದಿದೆ. ಕಾರ್ ನಲ್ಲಿದ್ದ ಇಬ್ಬರು ಗಾಯಗೊಂಡಿದ್ದು, ಹಿರಿಯೂರು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಕಲಾ ಪ್ರತಿಭೋತ್ಸವ – 2026’ ಸ್ಪರ್ಧೆಗೆ ಅರ್ಜಿ ಆಹ್ವಾನ
ಶಿವಮೊಗ್ಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಮೊಗ್ಗ ವತಿಯಿಂದ ನವೆಂಬರ್ ಮಾಹೆಯಲ್ಲಿ ಜಿಲ್ಲಾ ಮಟ್ಟದ ‘ಕಲಾ ಪ್ರತಿಭೋತ್ಸವ’ ವಿವಿಧ ಕಲಾಪ್ರಕಾರಗಳ ಸ್ಪರ್ಧಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಬಾಲಪ್ರತಿಭೆ 8 ರಿಂದ 13 ವರ್ಷ, ಕಿಶೋರ ಪ್ರತಿಭೆ 14 ರಿಂದ 18 ವರ್ಷ, ಯುವ ಪ್ರತಿಭೆ 19 ರಿಂದ 30 ವರ್ಷ ಈ ಮೂರು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.
ಬಾಲಪ್ರತಿಭೆ ಮತ್ತು ಕಿಶೋರ ಪ್ರತಿಭೆ: ಶಾಸ್ತ್ರೀಯ ನೃತ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಸಂಗೀತ, ಸುಗಮ ಸಂಗೀತ, ಚಿತ್ರಕಲೆ, ಜನಪದ ಗೀತೆ, ಹಿಂದೂಸ್ತಾನಿ ವಾದ್ಯ ಸಂಗೀತ ಸ್ಪರ್ಧೆಗಳು ನಡೆಯಲಿವೆ.
ಯುವ ಪ್ರತಿಭೆ: ಏಕವ್ಯಕ್ತಿ ಸ್ಪರ್ಧೆಗಳು: ಆಶುಭಾಷಣ, ಶಾಸ್ತ್ರೀಯ ನೃತ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಸಂಗೀತ, ಚಿತ್ರಕಲೆ, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಸಂಗೀತ,ಜನಪದ ಗೀತೆ.
ಸಮೂಹ ಸ್ಪರ್ಧೆಗಳು: ಜನಪದ ನೃತ್ಯ ಹಾಗೂ ನಾಟಕ ಸ್ಪರ್ಧಗಳು ನಡೆಯಲಿವೆ.
ನಿಬಂಧನೆಗಳು ಹಾಗೂ ಅರ್ಹತೆಗಳು:
ವಯಸ್ಸಿನ ದೃಢೀಕರಣಕ್ಕಾಗಿ ಶಾಲೆ/ಕಾಲೇಜಿನ ದೃಢೀಕರಣ ಪತ್ರ ಸಲ್ಲಿಸಬೇಕು. ವಿದ್ಯಾರ್ಥಿಗಳಲ್ಲದಿದ್ದಲ್ಲಿ ನಗರಸಭೆ ಅಥವಾ ಪಂಚಾಯತಿಯಿಂದ ಪಡೆಯಲಾದ ದೃಢೀಕರಣ ಪತ್ರವನ್ನು ಲಗತ್ತಿಸಬೇಕು.
ಒಬ್ಬ ಅಭ್ಯರ್ಥಿಯು ಕೇವಲ ಒಂದೇ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.
ಕಳೆದ ಬಾರಿ ರಾಜ್ಯಮಟ್ಟದಲ್ಲಿ ವಿಜೇತರಾದ ಅಭ್ಯರ್ಥಿಗಳು ಈ ಬಾರಿ ಭಾಗವಹಿಸುವಂತಿಲ್ಲ.
ಜನಪದ ನೃತ್ಯ ವಿಭಾಗದಲ್ಲಿ ಸಿದ್ದಿ ಡಮಾಮಿ, ಡೊಳ್ಳು, ಗೊರವರ, ಗೋರುಕಾನ, ಜಗ್ಗಲಿಗೆ, ಕಂಗೀಲು, ಸೋಮನಕುಣಿತ, ಪಟಕುಣಿತ, ಕಂಸಾಳೆ, ಪೂಜಾಕುಣಿತ, ಜಡೆ ಕೋಲಾಟ, ಲಂಬಾಣಿ, ಕರಡಿ ಮಜಲು, ಕೊಡವ ನೃತ್ಯ ಮುಂತಾದ ಸಾಂಪ್ರದಾಯಿಕ ಕುಣಿತಗಳಿಗೆ ಮಾತ್ರ ಅವಕಾಶವಿದ್ದು, ಮುದ್ರಿತ ಜನಪದ ಗೀತೆಗಳ ಹಾಡುಗಳಿಗೆ ನೃತ್ಯ ಮಾಡುವುದನ್ನು ಪರಿಗಣಿಸಲಾಗುವುದಿಲ್ಲ.
ಆಸಕ್ತರು ಭರ್ತಿ ಮಾಡಿದ ಅರ್ಜಿಗಳನ್ನು ಅಕ್ಟೋಬರ್ 31ರ ಸಂಜೆ 5:30 ರೊಳಗಾಗಿ ‘ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕುವೆಂಪು ರಂಗಮಂದಿರ, ಶಿವಮೊಗ್ಗ’ ಈ ವಿಳಾಸಕ್ಕೆ ಸಲ್ಲಿಸಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್ ತಿಳಿಸಿದ್ದಾರೆ.

