HomeKarnatakaBREAKING : ರಾಜ್ಯದಲ್ಲಿ 'ವಾಲ್ಮೀಕಿ ಜಯಂತಿ' ರಜೆ ದಿನಾಂಕ ಬದಲು..! ಅ.25ರ ಬದಲು ಅ.26ರಂದು...

BREAKING : ರಾಜ್ಯದಲ್ಲಿ ‘ವಾಲ್ಮೀಕಿ ಜಯಂತಿ’ ರಜೆ ದಿನಾಂಕ ಬದಲು..! ಅ.25ರ ಬದಲು ಅ.26ರಂದು ಸಾರ್ವತ್ರಿಕ ರಜೆ ಘೋಷಣೆ

ಬೆಂಗಳೂರು: ಕರ್ನಾಟಕ ಸರ್ಕಾರವು 2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ನೀಡಲಾಗಿದ್ದ ರಜೆಯ ದಿನಾಂಕವನ್ನು ಬದಲಾಯಿಸಿ ಸರ್ಕಾರ ಆದೇಶ ಹೊರಡಿಸಿದೆ.

ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 2026ರ ಅಕ್ಟೋಬರ್ 5ರಂದು ಈ ಕುರಿತು ಅಧಿಸೂಚನೆ ಹೊರಡಿಸಿದೆ. ಈ ಹಿಂದೆ ಪ್ರಕಟಿಸಲಾಗಿದ್ದ 2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅಕ್ಟೋಬರ್ 25ರಂದು ಆಚರಿಸಲು ಹಾಗೂ ರಜೆ ನೀಡಲು ಘೋಷಿಸಲಾಗಿತ್ತು.

ಆದರೆ ಅಕ್ಟೋಬರ್ 25, 2026 ಭಾನುವಾರ ಬರುತ್ತಿರುವ ಹಿನ್ನೆಲೆಯಲ್ಲಿ, ಇದೀಗ ರಜೆಯ ದಿನಾಂಕವನ್ನು ಬದಲಾಯಿಸಲಾಗಿದೆ. ಅದರಂತೆ ಅಕ್ಟೋಬರ್ 26, 2026 ಸೋಮವಾರವನ್ನು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ ದಿನವಾಗಿ ಪರಿಗಣಿಸಿ, ಅಂದು ಸಾರ್ವತ್ರಿಕ ರಜೆ ಘೋಷಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅ.26ರಂದು ಸಾರ್ವತ್ರಿಕ ರಜೆ

ಸರ್ಕಾರದ ಅಧಿಸೂಚನೆಯ ಪ್ರಕಾರ, ಅಕ್ಟೋಬರ್ 26, 2026ರಂದು ರಾಜ್ಯದಾದ್ಯಂತ ಸಾರ್ವತ್ರಿಕ ರಜೆ ಇರಲಿದೆ. ಈ ರಜೆಯನ್ನು Negotiable Instruments Act, 1881ರ ಸೆಕ್ಷನ್ 25ರ ಅಡಿಯಲ್ಲಿ ಸಾರ್ವತ್ರಿಕ ರಜೆಯಾಗಿ ಘೋಷಿಸಲಾಗಿದೆ.

ಈ ಬದಲಾವಣೆಯಿಂದಾಗಿ ಅಕ್ಟೋಬರ್ 25ರ ಬದಲಿಗೆ ಅಕ್ಟೋಬರ್ 26ರಂದು ಸರ್ಕಾರಿ ಕಚೇರಿಗಳು ಹಾಗೂ ಸಂಬಂಧಿತ ಸಂಸ್ಥೆಗಳಿಗೆ ರಜೆ ಅನ್ವಯವಾಗಲಿದೆ. ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ-1 ಅವರು ಈ ಅಧಿಸೂಚನೆಯನ್ನು ಹೊರಡಿಸಿದ್ದಾರೆ.

‘ಪಿ.ಎಂ. ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ’ ನೋಂದಣಿ ಶಿಬಿರ

ಬಳ್ಳಾರಿ : ಬಳ್ಳಾರಿ ಗ್ರಾಮೀಣ ಜೆಸ್ಕಾಂ ಉಪ-ವಿಭಾಗ ವ್ಯಾಪ್ತಿಯಲ್ಲಿ ಅಕ್ಟೋಬರ್ 5, 6 ಮತ್ತು 7 ರಂದು ನಡೆಯಲಿರುವ ‘ಸೇವಾ ಸೇತು’ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಪಿ.ಎಂ. ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆ” ಕುರಿತು ಸಾರ್ವಜನಿಕರಿಗೆ ಮಾಹಿತಿ ಹಾಗೂ ಸ್ಥಳದಲ್ಲೇ ನೋಂದಣಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜೆಸ್ಕಾಂ ಗ್ರಾಮೀಣ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮೋಹನಬಾಬು ತಿಳಿಸಿದ್ದಾರೆ.

ನೋಂದಣಿಗೆ ಅಗತ್ಯವಿರುವ ದಾಖಲೆಗಳು:

ಇತ್ತೀಚಿನ ವಿದ್ಯುತ್ ಬಿಲ್, ಆಧಾರ್ ಕಾರ್ಡ್ ಪ್ರತಿ, ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಪಾಸ್‌ಬುಕ್ ಪ್ರತಿ ಅಥವಾ ರದ್ದುಪಡಿಸಿದ ಚೆಕ್, ಆಧಾರ್ ಮತ್ತು ವಿದ್ಯುತ್ ಸಂಪರ್ಕಕ್ಕೆ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆ, ಮನೆಯ ಮೇಲ್ಛಾವಣಿಯ ಹಕ್ಕಿನ ದಾಖಲೆ / ಕಂದಾಯ ರಶೀದಿಗಳು.

ಸಂಪರ್ಕಿಸಬೇಕಾದ ಅಧಿಕಾರಿಗಳು ಮತ್ತು ದೂರವಾಣಿ ಸಂಖ್ಯೆಗಳು:

ಮೋಹನಬಾಬು (ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು)-9448482161

ಮAಜುನಾಥ (ಘಟಕ-1)-9449597337

ಮಂಜುನಾಥ ಚೌದರಿ (ಘಟಕ-2)-9449597338

ಚಿಟ್ಟಿ ಚಂದ್ರಶೇಖರ (ಘಟಕ-3)-9449597351

ದಿಲೀಪ್ (ಘಟಕ-ಪಿ.ಡಿ.ಹಳ್ಳಿ)-9449597352

ರಾಜಶೇಖರ್ (ಘಟಕ-ಮೋಕಾ)-9449597346

ಕಾರ್ಯಕ್ರಮದಲ್ಲಿ ಮನೆಗಳ ಮೇಲ್ಛಾವಣಿ ಸೌರ ವಿದ್ಯುತ್ ಘಟಕ (ಸೋಲಾರ್ ರೂಫ್‌ಟಾಪ್) ಅಳವಡಿಕೆಗೆ ಸ್ಥಳದಲ್ಲೇ ಮಾರ್ಗದರ್ಶನ ಮತ್ತು ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ. ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸರ್ಕಾರದ ಅನುದಾನ ಪಡೆದು ಸೋಲಾರ್ ಘಟಕ ಅಳವಡಿಸಿಕೊಳ್ಳುವ ಮೂಲಕ ವಿದ್ಯುತ್ ಬಿಲ್ ಉಳಿತಾಯ ಮಾಡಿಕೊಳ್ಳಬೇಕೆಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

 

📄 Official Documents / Supporting Documents

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular