HomeIndiaಉತ್ತರ ಪ್ರದೇಶ ರಾಜ್ಯಸಭಾ ಚುನಾವಣೆ: 8 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ; ಹಳಬರಿಗಿಲ್ಲ ಟಿಕೆಟ್; ಹೊಸ...

ಉತ್ತರ ಪ್ರದೇಶ ರಾಜ್ಯಸಭಾ ಚುನಾವಣೆ: 8 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ; ಹಳಬರಿಗಿಲ್ಲ ಟಿಕೆಟ್; ಹೊಸ ಮುಖಗಳಿಗೆ ಮಣೆ

ನವದೆಹಲಿ: ಉತ್ತರ ಪ್ರದೇಶದ ರಾಜ್ಯಸಭಾ ಚುನಾವಣೆಗೆ ಬಿಜೆಪಿ 8 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಾಲಿ ಇರುವ 8 ರಾಜ್ಯಸಭಾ ಸಂಸದರೆಲ್ಲರ ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟಿದ್ದು, ಹೊಸ ಅಭ್ಯರ್ಥಿಗಳಿಗೆ ಮಣೆ ಹಾಕಿದೆ.

ಅಕ್ಟೋಬರ್ 16ರಂದು ನಡೆಯಲಿರುವ ಈ ದ್ವೈವಾರ್ಷಿಕ ಚುನಾವಣೆಗೆ ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ ಮತ್ತು ಬಿ.ಎಲ್. ವರ್ಮಾ ಸೇರಿದಂತೆ 8 ಹಾಲಿ ಸದಸ್ಯರಿಗೆ ಟಿಕೆಟ್ ನಿರಾಕರಿಸಲಾಗಿದೆ. ಈ ಬಾರಿ 8 ಸ್ಥಾನಗಳಿಗೂ ಬಿಜೆಪಿ ಹೊಸ ಮುಖಗಳಿಗೆ ಟಿಕೆಟ್ ಘೋಷಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿರುವ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹಾಗೂ ಕೇಂದ್ರ ಸಚಿವ ಬನ್ವಾರಿ ಲಾಲ್ ವರ್ಮಾ ಅವರನ್ನು ಕೂಡ ಬಿಜೆಪಿ ಈ ಬಾರಿ ಕೈಬಿಟ್ಟಿರುವುದು ಅಚ್ಚರಿಯ ಬೆಳವಣಿಗೆ.

ಬಿಜೆಪಿ ಬಿಡುಗಡೆ ಮಾಡಿರುವ ನೂತನ ಪಟ್ಟಿಯಲ್ಲಿ ಮಾಜಿ ಲೋಕಸಭಾ ಸಂಸದೆ ಪ್ರಿಯಾಂಕಾ ಸಿಂಗ್ ರಾವತ್ ಮತ್ತು ಜಾರ್ಖಂಡ್ ರಾಜ್ಯಪಾಲ ಸಂತೋಷ್ ಗಂಗ್ವಾರ್ ಅವರ ಪುತ್ರಿ ಹಾಗೂ ಉತ್ತರ ಪ್ರದೇಶ ಬಿಜೆಪಿಯ ಪ್ರಮುಖ ನಾಯಕಿ ಶ್ರುತಿ ಗಂಗ್ವಾರ್ ಅವರಿಗೆ ಸ್ಥಾನ ನೀಡಲಾಗಿದೆ. ಈ ಇಬ್ಬರೂ ಮಹಿಳಾ ಅಭ್ಯರ್ಥಿಗಳಾಗಿದ್ದಾರೆ. ಇನ್ನುಳಿದ ಅಭ್ಯರ್ಥಿಗಳಾಗಿ ಧರಂಪಾಲ್ ಸಿಂಗ್, ರಾಧಾಕಾಂತ್ ಓಜಾ, ಪ್ರಕಾಶ್ ಪಾಲ್, ವಿದ್ಯಾಸಾಗರ್ ಸೋಂಕರ್, ಗೋಪಿ ಕೃಷ್ಣ ಪಾಂಡೆ ಮತ್ತು ರಾಮ್ ಪ್ರತಾಪ್ ಸಿಂಗ್ ಚೌಹಾಣ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.

ಬಿಜೆಪಿಯವರು ಫಾರ್ಮ್-7 ದುರುಪಯೋಗಪಡಿಸಿಕೊಳ್ಳುತ್ತಿದ್ದರೆ ನಾವೇನು ​​ಅವರಿಗೆ ‘ಭಾರತ ರತ್ನ’ ನೀಡಬೇಕೇ?: ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು: ‘ಫಾರ್ಮ್-7’ ಅರ್ಜಿಗಳಿಗೆ ಸಂಬಂಧಿಸಿದಂತೆ ಪಕ್ಷದ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ (FIR) ದಾಖಲಿಸುವುದನ್ನು ಹಾಗೂ ಪರಿಶೀಲನೆಯನ್ನು ನಿಲ್ಲಿಸುವಂತೆ ಕೋರಿ ಕರ್ನಾಟಕ ಬಿಜೆಪಿಯ ಉನ್ನತ ಮಟ್ಟದ ನಿಯೋಗವು ಡಿಜಿ-ಐಜಿಪಿ ಎಂ.ಎ. ಸಲೀಂ ಅವರನ್ನು ಭೇಟಿ ಮಾಡಿದ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, “ಅವರು ಫಾರ್ಮ್-7 ಅನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದರೆ, ನಾವೇನು ​​ಅವರಿಗೆ ‘ಭಾರತ ರತ್ನ’ ನೀಡಬೇಕೇ?… ಎಂದು ಗರಂ ಆಗಿದ್ದಾರೆ.

ಈ ರೀತಿಯ ಬೃಹತ್ ಪ್ರಮಾಣದ ಮತ್ತು ಮೊದಲೇ ಮುದ್ರಿತವಾದ (pre-printed) ಫಾರ್ಮ್-7 ಅರ್ಜಿಗಳು ಕೇವಲ ಬಿಜೆಪಿಯಿಂದಲೇ ಏಕೆ ಬರುತ್ತಿವೆ?… ನೀವು ದೇಶದ ಕಾನೂನನ್ನು ಪಾಲಿಸದಿದ್ದರೆ, ನಿಮ್ಮನ್ನು ಹೊಣೆಗಾರರನ್ನಾಗಿ ಮಾಡುವುದನ್ನು ನಾವು ಖಚಿತಪಡಿಸುತ್ತೇವೆ ಎಂದರು.

ಇದು ಗುಜರಾತ್, ದೆಹಲಿ ಅಥವಾ ಉತ್ತರ ಪ್ರದೇಶವಲ್ಲ, ಅಥವಾ ಇಂತಹ ಕೃತ್ಯಗಳನ್ನು ಎಸಗಿದರೂ ಸುಲಭವಾಗಿ ಪಾರಾಗಬಹುದು ಎಂದುಕೊಳ್ಳಲು ಬೇರೆ ರಾಜ್ಯವಲ್ಲ. ಮತದಾರರ ಗುರುತಿನ ಚೀಟಿ ಸಂಖ್ಯೆಗಳು (EPIC numbers), ಹೆಸರುಗಳು, ವಿಳಾಸಗಳು ಮತ್ತು ಲೋಪದೋಷಗಳ ವಿವರಗಳನ್ನು ಒಳಗೊಂಡಿರುವ 1,000 ಮೊದಲೇ ಮುದ್ರಿತ ಅರ್ಜಿಗಳು ಅವರಿಗೆ ಹೇಗೆ ಸಿಗುತ್ತಿವೆ? ಅವರು ಜೀವಂತವಾಗಿರುವವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸುತ್ತಿದ್ದಾರೆ. ಅಂದರೆ ಬಿಜೆಪಿಯವರು ಈಗ ಚುನಾವಣಾ ಆಯೋಗದ ಕೆಲಸವನ್ನು ಮಾಡುತ್ತಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.

ಹಾಗಾದರೆ ಎಸ್‌ಐಆರ್ (SIR)ನ ಉದ್ದೇಶವೇನಿತ್ತು? ಫಾರ್ಮ್ -7 ದುರುಪಯೋಗಪಡಿಸಿಕೊಳ್ಳುತ್ತಿದ್ದರು ಸುಮ್ಮನೇ ಬಿಟ್ಟು ಬಿಡಲು ಎಸ್ಐಆರ್ ಆರಂಭಿಸಿದ್ದದರೂ ಯಾಕೆ ಎಂದು ಪ್ರಶ್ನಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular