ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ನಡೆದ ಮೂರನೇ ಏಕದಿನ ಪಂದ್ಯದ ವೇಳೆ ಮೈದಾನದಲ್ಲಿ ಮತ್ತೊಂದು ಕುತೂಹಲಕಾರಿ ಮತ್ತು ತಮಾಷೆಯ ಘಟನೆ ನಡೆದಿದೆ. ಡಗ್‌ಔಟ್‌ನಲ್ಲಿ ಕುಳಿತಿದ್ದ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಗಮನ ಸೆಳೆಯಲು ಅಭಿಮಾನಿಯೊಬ್ಬ ಮಾಡಿದ ಕೆಲಸ ಹಾಗೂ ಅದಕ್ಕೆ ಕೊಹ್ಲಿ ನೀಡಿದ ತಕ್ಷಣದ ಪ್ರತಿಕ್ರಿಯೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಪಂದ್ಯದ ವೇಳೆ ಗ್ಯಾಲರಿಯಲ್ಲಿದ್ದ ಕ್ರಿಕೆಟ್‌ಪ್ರಿಯರು ವಿರಾಟ್ ಕೊಹ್ಲಿ ಹೆಸರು ಹೇಳಿ ಜೋರಾಗಿ ಘೋಷಣೆ ಕೂಗುತ್ತಿದ್ದರು. ಈ ವೇಳೆ ಕೊಹ್ಲಿ ಅವರ ಗಮನ ಸೆಳೆಯಲು ಬಯಸಿದ ಅಭಿಮಾನಿಯೊಬ್ಬ, ತಕ್ಷಣವೇ ತನ್ನ ಕಾಲಿನಲ್ಲಿದ್ದ ಶೂ ಬಿಚ್ಚಿ ಮೇಲಕ್ಕೆತ್ತಿ ತೋರಿಸಿದ್ದಾನೆ. ಆ ಶೂ ಕೊಹ್ಲಿ ಅವರ ಸ್ವಂತ ಬ್ರ್ಯಾಂಡ್ ಆದ ‘ಒನ್-೮’ (one8) ಕಂಪನಿಯದ್ದಾಗಿತ್ತು.
ತನ್ನ ಬ್ರ್ಯಾಂಡ್‌ನ ಶೂವನ್ನು ಅಭಿಮಾನಿ ಹೆಮ್ಮೆಯಿಂದ ಪ್ರದರ್ಶಿಸುವುದನ್ನು ಕಂಡ ಕೊಹ್ಲಿ, ಆ ಕ್ಷಣದಲ್ಲೇ ಆತನತ್ತ ನೋಡಿ ವಿಶೇಷ ರಿಯಾಕ್ಷನ್ ನೀಡಿದ್ದಾರೆ. ಡಗ್‌ಔಟ್‌ನಲ್ಲಿ ನಡೆದ ಈ ಸ್ವಾರಸ್ಯಕರ ಘಟನೆಯ ವೀಡಿಯೊ ಇದೀಗ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಕೊಹ್ಲಿ ಅವರ ಜನಪ್ರಿಯತೆ ಹಾಗೂ ಅವರ ಸಾದಾಸೀದಾ ಶೈಲಿಯನ್ನು ಕೊಂಡಾಡುತ್ತಿದ್ದಾರೆ. ಮೈದಾನದ ಹೊರಗಿದ್ದರೂ ಕೊಹ್ಲಿ ಪ್ರೇಕ್ಷಕರ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು.

