HomeKarnatakaನಕಲಿ ಔಷಧಿ ಜಾಲ ದಂಧೆ ಪ್ರಕರಣ: SIT ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

ನಕಲಿ ಔಷಧಿ ಜಾಲ ದಂಧೆ ಪ್ರಕರಣ: SIT ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

ಬೆಂಗಳೂರು: ನಕಲಿ ಔಷಧಿ ದಂಧೆ ಪ್ರಕರಣ ಸಂಬಂಧ ಎಸ್ಐಟಿ ತನಿಖೆಯಲ್ಲಿ ಬಗೆದಷ್ಟೂ ಸ್ಫೋಟಕ ಮಾಹಿತಿಗಳು ಬಯಲಾಗುತ್ತಿವೆ. ಪ್ರಮುಖ ಆರೋಪಿ ಪ್ರಶಾಂತ್ ಬಂಧನದ ಬೆನ್ನಲ್ಲೇ ಮತ್ತಷ್ಟು ​ ವಿಚಾರಗಳು ಹೊರಬಂದಿವೆ.

ಫೈಜರ್ ಕಂಪನಿ ಒರಿಜಿನಲ್ ಲೇಬಲ್ ತರೋದಕ್ಕಾಗಿಯೇ ಟರ್ಕಿಗೆ ವರ್ಷದಲ್ಲಿ ಹತ್ತಾರು ಬಾರಿ ಪ್ರಶಾಂತ್ ಹೋಗಿದ್ದ. ಪದೇಪದೆ ಹೋಗ್ತಿದ್ದ ಕಾರಣಕ್ಕೆ ಟರ್ಕಿ ವೀಸಾ ಕ್ಯಾನ್ಸಲ್ ಕೂಡ ಆಗಿತ್ತು. ಹೀಗಾಗಿ ಟರ್ಕಿಯ ಅಕ್ಕಪಕ್ಕದ ದೇಶಗಳಿಗೆ ಹೋಗಲು ಈತ ಆರಂಭಿಸಿದ್ದ. ಅಜರ್ ಬೈಜಾನ್ ಸೇರಿ ಬೇರೆ ಬೇರೆ ದೇಶಗಳಿಗೆ ಭೇಟಿ ನೀಡುತ್ತಿದ್ದ ಎಂಬುದು ಗೊತ್ತಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಂಧಿತ ಆರೋಪಿಗಳು ನಕಲಿ ಔಷಧಿಗಳಿಗೆ ಅಸಲಿ ಲೇಬಲ್ ಹಚ್ಚಿ ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ಬಯಲಾಗಿದೆ. ಟರ್ಕಿಯಲ್ಲಿ ಪೈಜರ್ ಕಂಪನಿಯ ಒರಿಜಿನಲ್ ಲೇಬಲ್‌ ತಯಾರಿಕೆ ಹಿನ್ನೆಲೆ ಮಧ್ಯವರ್ತಿಗಳ ಮೂಲಕ ಅಲ್ಲಿಂದ ಪ್ರಶಾಂತ್​​ ಔಷಧಗಳ​​ ಲೇಬಲ್​ ತರಿಸಿಕೊಳ್ಳುತ್ತಿದ್ದ. ಆ ಒರಿಜಿನಲ್ ಲೇಬಲ್​​ಗಳನ್ನು ನಕಲಿ ಮೆಡಿಸಿನ್​ಗೆ ಹಾಕಿ ಗ್ಯಾಂಗ್​​ ಪ್ಯಾಕ್ ಮಾಡ್ತಿತ್ತು. ಹಲವು ಬಾರಿ ಒರಿಜಿನಲ್ ಮೆಡಿಸಿನ್​ಗಳ ಜೊತೆಗೆ ನಕಲಿ ಮೆಡಿಸಿನ್​ಗಳನ್ನು ಜೋಡಿಸಿ ಸರಬರಾಜು ಮಾಡುತ್ತಿದ್ದರು ಎಂಬುದು ಕೂಡ ಎಸ್​​ಐಟಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಆ ಮೂಲಕ ಆರೋಪಿಗಳ ಮತ್ತೊಂದು ಕಳ್ಳಾಟ ಬೆಳಕಿಗೆ ಬಂದಿದೆ.

ಅಜರ್‌ಬೈಜಾನ್‌ನಿಂದ ಹಿಂದಿರುಗಿದ್ದ ಆರೋಪಿ ಪ್ರಶಾಂತ್​​ನನ್ನು ಸೆಪ್ಟೆಂಬರ್​​ 28ರಂದು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಈತನ ವಿರುದ್ಧ ಲುಕ್​​ಔಟ್​​ ನೋಟಿಸ್​ ಜಾರಿಯಾಗಿದ್ದ ಹಿನ್ನೆಲೆ ವಿಮಾನ ನಿಲ್ದಾಣದ ಅರೈವಲ್ ಗೇಟ್‌ನಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.

ಬಳಿಕ ಪ್ರಶಾಂತ್​​ನ ಎಸಿಪಿ ಅಂಜನ್ ಕುಮಾರ್ ನೇತೃತ್ವದ ತಂಡಕ್ಕೆ ಹಸ್ತಾಂತರಿಸಲಾಗಿತ್ತು. ವೀರೇಶ್ ಜೈನ್ ಈ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿಯಾಗಿದ್ದು, ನಕಲಿ ಔಷಧಗಳ ಉತ್ಪಾದನೆ ಮತ್ತು ಪೂರೈಕೆ ವ್ಯವಸ್ಥೆಯಲ್ಲಿ ಈತ ಪಾತ್ರ ವಹಿಸಿದ್ದ ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿತ್ತು. ವೀರೇಶ್ ಬೆಂಗಳೂರಿನ ಆಸ್ಪತ್ರೆಗಳು ಮತ್ತು ಮೆಡಿಕಲ್‌ಗಳಿಗೆ ನಕಲಿ ಔಷಧಗಳನ್ನು ಪೂರೈಸುತ್ತಿದ್ದ ಎನ್ನಲಾಗಿದ್ದು, ಜಾಲದ ವಹಿವಾಟು ವಾರ್ಷಿಕ ಸುಮಾರು 15 ಕೋಟಿಯಷ್ಟಿತ್ತು ಎಂಬುದನ್ನೂ ಅಧಿಕಾರಿಗಳು ಪತ್ತೆ ಮಾಡಿದ್ದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular