HomeKarnatakaರಾಜ್ಯದ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್: ಮೆಟ್ರಿಕ್ ಪೂರ್ವ , ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಕೆ ಗಡುವು...

ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್: ಮೆಟ್ರಿಕ್ ಪೂರ್ವ , ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಕೆ ಗಡುವು ವಿಸ್ತರಣೆ

ಬೆಂಗಳೂರು: ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ನೀಡಲಾಗುತ್ತಿರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಹಾಗೂ ಮೆಟ್ರಿಕ್ ನಂತರದ “ಶುಲ್ಕ ಮರುಪಾವತಿ ಯೋಜನೆ”ಗೆ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಲಾಗಿದೆ.

2026–27ನೇ ಸಾಲಿನಲ್ಲಿ 1ರಿಂದ 8ನೇ ತರಗತಿ ಹಾಗೂ ವಿವಿಧ ಮೆಟ್ರಿಕ್ ನಂತರದ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಲಭ್ಯವಿದೆ. ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಮನವಿ ಹಿನ್ನೆಲೆಯಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು ನವೆಂಬರ್ 30, 2026ರವರೆಗೆ ವಿಸ್ತರಿಸಲಾಗಿದೆ.

ಅರ್ಹ ವಿದ್ಯಾರ್ಥಿಗಳು ಕೊನೆಯ ದಿನಾಂಕದೊಳಗೆ SSP ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು https://ssp.karnataka.gov.in/ ವೆಬ್‌ಸೈಟ್‌ ಬಳಸಬಹುದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಲ್ಪಸಂಖ್ಯಾತರ ನಿರ್ದೇಶನಾಲಯದ ಪ್ರಕಾರ, ಯೋಜನೆಯ ಸದುಪಯೋಗ ಪಡೆಯಲು ಅರ್ಹ ವಿದ್ಯಾರ್ಥಿಗಳು ವಿಳಂಬ ಮಾಡದೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ನಿರ್ದೇಶನಾಲಯದ https://dom.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಅರ್ಜಿಗೆ ಸಂಬಂಧಿಸಿದ ಹೆಚ್ಚಿನ ನೆರವಿಗಾಗಿ ರಾಜ್ಯ ವಿದ್ಯಾರ್ಥಿವೇತನದ ಸಹಾಯವಾಣಿ 1902ಕ್ಕೆ ಕರೆ ಮಾಡಬಹುದಾಗಿದೆ.

ಮಹಾತ್ಮ ಗಾಂಧೀಜಿಯವರ ತತ್ವಾದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಿ; ಜಿಲ್ಲಾಧಿಕಾರಿ ಸ್ನೇಹಲ್ ಆರ್.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಸತ್ಯವನ್ನೇ ನುಡಿಯಬೇಕು, ಅಹಿಂಸೆ ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದ್ದಾರೆ. ಸಾವಿರ ಸುಳ್ಳು ಹೇಳುವ ಬದಲು ಸತ್ಯವನ್ನು ನುಡಿಯಬೇಕು. ಮಹಾತ್ಮ ಗಾಂಧೀಜಿಯವರ ತತ್ವಾದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್‌ ಆರ್. ಅವರು ಹೇಳಿದರು.

ಅವರು ಧಾರವಾಡದ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ, ಮಾತನಾಡಿದರು.

ಅಹಿಂಸೆ ಎನ್ನುವುದು ಎಲ್ಲರೊಂದಿಗೆ ಸಹಬಾಳ್ವೆ ಹೊಂದುವುದು ಆಗಿದೆ. ನಮ್ಮ ಸುತ್ತಮುತ್ತಲಿನ ಜನರನ್ನು ದ್ವೇಷಿಸಬಾರದು. ಬೇರೆಯರನ್ನು ಹಿಂಸೆಯ ಮೂಲಕ ನೋಡಬಾರದು. ನೈರ್ಮಲ್ಯತೆ ಎಂಬುವುದು ಸ್ವಾತಂತ್ರ್ಯಕ್ಕಿಂತ ಹೆಚ್ಚು ಎಂದು ಗಾಂಧೀಜಿಯವರು ತಿಳಿಸಿದ್ದಾರೆ. ಪ್ರತಿಯೊಬ್ಬರೂ ಸ್ವಚ್ಛತೆ ಮತ್ತು ನೈರ್ಮಲ್ಯತೆಗೆ ಹೆಚ್ಚಿನ ಒತ್ತು ನೀಡಬೇಕು. ಹುಬ್ಬಳ್ಳಿ ಧಾರವಾಡ ಅವಳಿ ನಗರಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಅವಳಿ ನಗರಗಳಲ್ಲಿ ಶಾಂತಿ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ. ಗಾಂಧೀಜಿಯವರ ತತ್ವಗಳ ಬಗ್ಗೆ ಗಮನ ಹರಿಸಬೇಕು. ಗಾಂಧೀಜಿಯವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಿಕೊಂಡು ಹೋಗಬೇಕು ಎಂದು ಅವರು ತಿಳಿಸಿದರು.

ರಾಮಕೃಷ್ಣ ಮಠದ ವಿಜಯಾನಂದ ಸರಸ್ವತಿ ಸ್ವಾಮೀಜಿ ಅವರು ಮಾತನಾಡಿ, ಹಿಂದೂ ಧರ್ಮಕ್ಕೆ ವೇದಗಳು, ಉಪನಿಷತ್ತು ಮತ್ತು ಭಗವದ್ಗೀತೆ ಎಂಬ ಮೂರು ಮುಖ್ಯ ಗ್ರಂಥಗಳಿವೆ. ವಿಶ್ವಮಾನ್ಯವಾಗಿರುವ ಧರ್ಮ ಹಿಂದೂ ಧರ್ಮವಾಗಿದೆ. ಹಿಂದೂ ಧರ್ಮದ ಮೌಲಿಕ ತತ್ವ, ಚಿಂತನೆಗಳು ಶಾಶ್ವತವಾಗಿ ಉಳಿಯುತ್ತವೆ. ಯಾವುದೇ ಆಚಾರ, ವಿಚಾರಗಳನ್ನು ಹೀನ ಭಾವದಿಂದ ನೋಡದೇ ಎಲ್ಲವನ್ನೂ ಮುಕ್ತವಾಗಿ ಸ್ವೀಕರಿಸುವ ಗುಣಗಳನ್ನು ಹಿಂದೂ ಗ್ರಂಥಗಳು ಹೇಳಿಕೊಡುತ್ತವೆ. ಭಗವದ್ಗೀತೆ ಗ್ರಂಥದಿಂದ ನಾವುಗಳು ಕಲಿಯುವುದು ಬಹಳವಿದೆ. ಮನುಷ್ಯನನ್ನು ಜಾಗೃತಗೊಳಿಸುವ ಚಿಂತನೆಗಳನ್ನು ಗ್ರಂಥಗಳಲ್ಲಿ ಕಾಣಬಹುದು. ಯಾವುದೇ ಫಲಾಪೇಕ್ಷೆಯಿಲ್ಲದೇ ನಿಮ್ಮ ಕಾರ್ಯಗಳನ್ನು ನೀವು ಮಾಡಬೇಕು. ಏಳಿ, ಏದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ.‌ ಮನುಷ್ಯನ ಮನಸ್ಸಿನಿಂದ ಎಲ್ಲವನ್ನು ಸಾಧಿಸಬಹುದು. ದೇಹದ ಒಳಗಿನ ಆತ್ಮಶಕ್ತಿ ಶಾಶ್ವತವಾಗಿ ಇರುತ್ತದೆ. ಆತ್ಮ ಶಕ್ತಿ ಜಗತ್ತಿನಲ್ಲಿ ಚಿರಾಯುವಾಗಿ ಉಳಿಯುತ್ತದೆ. ಭಾರತೀಯ ಗ್ರಂಥಗಳು ಉತ್ತಮ ಜೀವನ ನಡೆಸಲು ಪ್ರೇರಕವಾಗಿವೆ. ಗಾಂಧೀಜಿಯವರ ತತ್ವಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳೋಣ ಎಂದು ತಿಳಿಸಿದರು.

ಇಸ್ಲಾಂ ಧರ್ಮದ ಧರ್ಮಗುರು ಹಫೀಜ್‌ ಖಾದ್ರಿ ಅವರು ಮಾತನಾಡಿ, ಎಲ್ಲರೂ ಸಹಬಾಳ್ವೆಯಿಂದ ಜೀವನ ಸಾಗಿಸಬೇಕು. ನಾವೆಲ್ಲರೂ ಜೊತೆಯಾಗಿ ಮುಂದೆ ಸಾಗೋಣ ಎಂದು ವಿವರಿಸಿದರು.

ಕ್ರೈಸ್ತ ಧರ್ಮದ ಧರ್ಮಗುರು ಡುವೆಲ್ ಫೌಲ್ ಅವರು ಮಾತನಾಡಿ, ಮಹಾತ್ಮ ಗಾಂಧೀಜಿಯವರು ಬೈಬಲ್ ನಿಂದ ಪ್ರೇರಿತರಾಗಿದ್ದರು. ನಿಮ್ಮ ವೈರಿಗಳನ್ನು ಪ್ರೀತಿಸಿ, ನಿಮಗೆ ಪ್ರೀತಿ ತೋರಿಸುವವರನ್ನು ಪ್ರೀತಿ ಭಾವದಿಂದ ಕಾಣಬೇಕು.

ಸತ್ಯ ಮತ್ತು ಅಹಿಂಸೆ ಮಾರ್ಗದಲ್ಲಿ ಗಾಂಧೀಜಿಯವರು ನಡೆದರು.

ಸ್ವಾತಂತ್ರ್ಯ ಹೋರಾಟಗಾರರು ಸತ್ಯ ಮತ್ತು ಅಹಿಂಸೆ ಮಾರ್ಗದಲ್ಲಿ ನಡೆಯಬೇಕು. ಅವರ ತತ್ವಗಳು, ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.

ಖ್ಯಾತ ಸ್ತ್ರೀ ರೋಗ ತಜ್ಞರು ಹಾಗೂ ಗಾಂಧಿ ಚಿಂತಕರಾದ ಡಾ. ಸಂಜೀವ ಕುಲಕರ್ಣಿ ಅವರು ಮಾತನಾಡಿ, ವಿಶ್ವಸಂಸ್ಥೆಯು ಮಹಾತ್ಮ ಗಾಂಧೀಜಿಯವರ ಜನ್ಮ ದಿನವನ್ನು ವಿಶ್ವ ಅಹಿಂಸಾ ದಿನ ಎಂದು ಜಗತ್ತಿನಾದ್ಯಂತ ಆಚರಣೆ ಮಾಡಲಾಗುತ್ತದೆ. ಪರಿಸರ ಸ್ನೇಹಿ ವಾತಾವರಣ ನಿರ್ಮಿಸಲು ನಾವು ಮುಂದಾಗಬೇಕಿದೆ‌. ಆದರೆ ಮನುಷ್ಯರು ಪರಿಸರ ಅಸಮತೋಲನಕ್ಕೆ ಕಾರಣೀಭೂತರಾಗಿದ್ದೇವೆ. ಹವಾಮಾನ ವೈಪರೀತ್ಯ, ವಾಯು ಮಾಲಿನ್ಯ, ಪರಿಸರ ಮಾಲಿನ್ಯ, ಜಲ‌ ಮಾಲಿನ್ಯ ಸೃಷ್ಟಿ ಮಾಡುತ್ತಿದ್ದೇವೆ. ನೈರ್ಮಲ್ಯದಲ್ಲಿ ದೇಶ ಹಿಂದೆ ಉಳಿದಿದೆ. ಕುಟುಂಬದಲ್ಲಿ ಹಿಂಸೆಗಳು ನಡೆಯುತ್ತಿವೆ. ವ್ಯಕ್ತಿಯು ಶಾರೀರಿಕ ಹಾಗೂ ಮಾನಸಿಕವಾಗಿ ಹಿಂಸೆ ಮಾಡಿಕೊಳ್ಳುತ್ತಿದ್ದಾನೆ. ಮನುಷ್ಯರು ಆಹಾರ ಕೊರತೆ ನಡುವೆಯೇ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಮಾನಸಿಕ ಸಮಸ್ಯೆಗಳನ್ನು ನಾವು ಮಾಡಿಕೊಳ್ಳುತ್ತಿದ್ದೇವೆ. ಜೀವನ ಚೈತನ್ಯಕ್ಕೆ ಗಾಂಧೀಜಿಯವರ ಆದರ್ಶಗಳು ಬೇಕಾಗುತ್ತವೆ. ಸಮಾಜದ ನೆಲೆಯೊಳಗೆ ಶಾಂತಿ, ಸುವ್ಯವಸ್ಥಿತೆ ನೆಲೆಗೊಳ್ಳಬೇಕು. ಗಾಂಧಿ ಭವನದಲ್ಲಿ ಸತತವಾಗಿ ಗಾಂಧಿ ಚಟುವಟಿಕೆಗಳು ನಡೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular