HomeKarnatakaನಟ ದರ್ಶನ್ ನೋಡಲು ಜೈಲಿಗೆ ಬಂದ ರಚಿತಾ ರಾಮ್‌ಗೆ ನಿರಾಸೆ.! ‘ಬುಲ್‌ಬುಲ್’ಗೆ ದಾಸ ಹೇಳಿ ಕಳುಹಿಸಿದ್ದೇನು?

ನಟ ದರ್ಶನ್ ನೋಡಲು ಜೈಲಿಗೆ ಬಂದ ರಚಿತಾ ರಾಮ್‌ಗೆ ನಿರಾಸೆ.! ‘ಬುಲ್‌ಬುಲ್’ಗೆ ದಾಸ ಹೇಳಿ ಕಳುಹಿಸಿದ್ದೇನು?

ಬೆಂಗಳೂರು: ನಟ ದರ್ಶನ್ ಅವರನ್ನು ಭೇಟಿಯಾಗಲು ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದ ನಟಿ ರಚಿತಾ ರಾಮ್‌ಗೆ ನಿರಾಸೆಯಾಗಿದೆ. ದರ್ಶನ್ ಅವರನ್ನು ಭೇಟಿ ಮಾಡಲು ಸುಮಾರು ಎರಡು ಗಂಟೆಗಳ ಕಾಲ ಕಾದರೂ ಭೇಟಿಗೆ ಅವಕಾಶ ಸಿಗದೆ ವಾಪಸ್ ತೆರಳಿದ್ದಾರೆ ಎನ್ನಲಾಗಿದೆ.

ಹೌದು. ದರ್ಶನ್ ಅವರನ್ನು ನೋಡಲು ರಚಿತಾ ರಾಮ್ ಪರಪ್ಪನ ಅಗ್ರಹಾರಕ್ಕೆ ಆಗಮಿಸಿದ್ದರು. ಈ ವಿಷಯವನ್ನು ಜೈಲಿನ ಸಿಬ್ಬಂದಿಗಳು ದರ್ಶನ್ ಗೆ ತಿಳಿಸಿದ್ದರು.  ಆದರೆ, “ನಾನು ಯಾರನ್ನೂ ಭೇಟಿ ಮಾಡಲ್ಲ” ಎಂದು ದರ್ಶನ್ ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ದರ್ಶನ್ ಭೇಟಿಗಾಗಿ ಕಾದಿದ್ದ ರಚಿತಾ ರಾಮ್‌ಗೆ ದರ್ಶನ ಭಾಗ್ಯ ಸಿಗಲಿಲ್ಲ.

ಸುಮಾರು ಎರಡು ಗಂಟೆಗಳ ಕಾಲ ಕಾರಿನಲ್ಲೇ ಕಾದಿದ್ದ ರಚಿತಾ ರಾಮ್, ಕೊನೆಗೆ ದರ್ಶನ್ ಅವರನ್ನು ಭೇಟಿಯಾಗದೆ ಅಲ್ಲಿಂದ ವಾಪಸ್ ತೆರಳಿದ್ದಾರೆ ಎಂದು ವರದಿಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದರ್ಶನ್ ಮತ್ತು ರಚಿತಾ ರಾಮ್ ಈ ಹಿಂದೆ ‘ಬುಲ್‌ಬುಲ್’ ಸೇರಿದಂತೆ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಹೀಗಾಗಿ ರಚಿತಾ ರಾಮ್ ದರ್ಶನ್ ಅವರನ್ನು ಭೇಟಿ ಮಾಡಲು ಬಂದಿರುವುದು ಅಭಿಮಾನಿಗಳ ಗಮನ ಸೆಳೆದಿದೆ.

ಪ್ರದೋಷ್ ಸಾಕ್ಷ್ಯ ಹೇಳಿಕೆ ಬಹುತೇಕ ಪೂರ್ಣ; ಅ.5ಕ್ಕೆ ಮತ್ತೆ ವಿಚಾರಣೆ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಮತ್ತೊಂದು ಮಹತ್ವದ ಬೆಳವಣಿಗೆ ಎದುರಾಗಿದೆ. ಪ್ರಕರಣದ 14ನೇ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಿ ಬದಲಾಗಿದ್ದು, ಇದೀಗ ನ್ಯಾಯಾಲಯದಲ್ಲಿ ಅವರ ಸಾಕ್ಷ್ಯ ಹೇಳಿಕೆ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಪ್ರದೋಷ್ ಅವರ ಹೇಳಿಕೆ ದಾಖಲು ಪ್ರಕ್ರಿಯೆ ಈಗಾಗಲೇ ಸುಮಾರು ಶೇ.90ರಷ್ಟು ಪೂರ್ಣಗೊಂಡಿದ್ದು, ಉಳಿದ ಹೇಳಿಕೆಯನ್ನು ಅಕ್ಟೋಬರ್ 5ರಂದು ದಾಖಲಿಸಲು ನ್ಯಾಯಾಲಯ ದಿನಾಂಕ ನಿಗದಿಪಡಿಸಿದೆ.

ಮೂರು ಗಂಟೆಗಳ ಕಾಲ ಹೇಳಿಕೆ

ಸೆಪ್ಟೆಂಬರ್ 28ರಂದು ಬೆಂಗಳೂರಿನ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರದೋಷ್ ಅವರು ಸತತ ಮೂರು ಗಂಟೆಗಳ ಕಾಲ ಹೇಳಿಕೆ ದಾಖಲಿಸಿದ್ದರು. ನಂತರ ಹೇಳಿಕೆಯ ದಾಖಲೆ ಪೂರ್ಣಗೊಳಿಸಲು ವಿಚಾರಣೆಯನ್ನು ಮುಂದೂಡಲಾಗಿತ್ತು.

ನ್ಯಾಯಾಲಯದಲ್ಲಿ ಪ್ರದೋಷ್ ನೀಡುತ್ತಿರುವ ಹೇಳಿಕೆ ರೇಣುಕಾಸ್ವಾಮಿ ಪ್ರಕರಣದ ತನಿಖೆ ಮತ್ತು ವಿಚಾರಣೆಯ ದೃಷ್ಟಿಯಿಂದ ಮಹತ್ವದ್ದಾಗಿದೆ. ಅವರು ಪ್ರಕರಣದಲ್ಲಿ ನಡೆದ ಘಟನೆಗಳ ಕುರಿತು ತಮ್ಮ ಬಳಿ ಇರುವ ಮಾಹಿತಿಯನ್ನು ನ್ಯಾಯಾಲಯದ ಮುಂದೆ ದಾಖಲಿಸುತ್ತಿದ್ದಾರೆ.

ದರ್ಶನ್ ಪರ ವಕೀಲರಿಂದ ವಿರೋಧ

ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿರುವುದನ್ನು ದರ್ಶನ್ ಪರ ವಕೀಲರು ಪ್ರಶ್ನಿಸಿದ್ದಾರೆ. ಪ್ರದೋಷ್ ಅವರ ಸಾಕ್ಷ್ಯ ದಾಖಲಿಸುವ ಪ್ರಕ್ರಿಯೆಯನ್ನು ಮುಂದೂಡುವಂತೆ ನ್ಯಾಯಾಲಯದಲ್ಲಿ ಮನವಿ ಮಾಡಲಾಗಿತ್ತು. ಆದರೆ ಪ್ರಕರಣದ ತ್ವರಿತ ವಿಚಾರಣೆಗೆ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನವನ್ನು ಉಲ್ಲೇಖಿಸಿ ನ್ಯಾಯಾಲಯವು ಆ ಮನವಿಯನ್ನು ತಿರಸ್ಕರಿಸಿತ್ತು.

ಇದರ ಬೆನ್ನಲ್ಲೇ ದರ್ಶನ್ ಪರ ವಕೀಲರು ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿರುವುದಾಗಿ ವರದಿಯಾಗಿದೆ.

ಪ್ರದೋಷ್ ಹೇಳಿಕೆಯಿಂದ ಏನಾಗಬಹುದು?

ಪ್ರದೋಷ್ ನೀಡುವ ಸಾಕ್ಷ್ಯದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳು ಮತ್ತು ಘಟನೆಗಳ ಕುರಿತು ಮಾಹಿತಿ ದಾಖಲಾಗುವುದರಿಂದ, ಅದು ವಿಚಾರಣೆಯಲ್ಲಿ ಗಮನಾರ್ಹವಾಗಬಹುದು. ಆದರೆ ಪ್ರದೋಷ್ ಹೇಳಿಕೆಯೊಂದರಿಂದಲೇ ದರ್ಶನ್ ವಿರುದ್ಧದ ಆರೋಪಗಳು ಸಾಬೀತಾದವು ಎಂದು ಹೇಳಲು ಸಾಧ್ಯವಿಲ್ಲ. ಅವರ ಹೇಳಿಕೆಯ ವಿಶ್ವಾಸಾರ್ಹತೆ, ಇತರ ಸಾಕ್ಷ್ಯಗಳು ಮತ್ತು ದಾಖಲೆಗಳೊಂದಿಗೆ ಅದರ ಹೊಂದಾಣಿಕೆ ಸೇರಿದಂತೆ ಎಲ್ಲ ಅಂಶಗಳನ್ನು ನ್ಯಾಯಾಲಯವೇ ಪರಿಗಣಿಸಬೇಕಾಗುತ್ತದೆ.

ಪ್ರದೋಷ್ ಅವರ ಸಾಕ್ಷ್ಯ ದಾಖಲಾತಿ ಅಕ್ಟೋಬರ್ 5ರಂದು ಪೂರ್ಣಗೊಳ್ಳುವ ಸಾಧ್ಯತೆ ಇದ್ದು, ನಂತರ ಪ್ರಕರಣದ ವಿಚಾರಣೆಯಲ್ಲಿ ಈ ಹೇಳಿಕೆ ಯಾವ ರೀತಿಯ ಪಾತ್ರ ವಹಿಸುತ್ತದೆ ಎಂಬುದು ಗಮನಾರ್ಹವಾಗಿದೆ.

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular