HomeCrimeಪ್ರೀತಿಯ ನಾಟಕವಾಡಿ ಲಕ್ಷಾಂತರ ಹಣ ದೋಚಿದ ಕಿಲಾಡಿ ; ವಂಚಕನ ಪತ್ತೆಗೆ ಭಾರತಕ್ಕೆ ಹಾರಿಬಂದ ವಿದೇಶಿ...

ಪ್ರೀತಿಯ ನಾಟಕವಾಡಿ ಲಕ್ಷಾಂತರ ಹಣ ದೋಚಿದ ಕಿಲಾಡಿ ; ವಂಚಕನ ಪತ್ತೆಗೆ ಭಾರತಕ್ಕೆ ಹಾರಿಬಂದ ವಿದೇಶಿ ಯುವತಿ !

ಗುರುಗ್ರಾಮ ಮೂಲದ ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ಪ್ರೀತಿಯ ನಾಟಕವಾಡಿ ತನ್ನಿಂದ 1000 ಯುರೋ (ಸುಮಾರು 1 ಲಕ್ಷ ರೂಪಾಯಿಗೂ ಹೆಚ್ಚು) ಹಣವನ್ನು ದೋಚಿ ವಂಚಿಸಿದ್ದಾನೆ ಎಂದು ಆರೋಪಿಸಿ ಇಟಲಿ ದೇಶದ ಯುವತಿಯೊಬ್ಬರು ಗುರುಗ್ರಾಮ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಹಣ ಪಡೆದ ನಂತರ ಆ ವ್ಯಕ್ತಿಯು ಆಕೆಯೊಂದಿಗಿನ ಎಲ್ಲ ಸಂಪರ್ಕಗಳನ್ನು ಸಂಪೂರ್ಣವಾಗಿ ಕಡಿದುಕೊಂಡಿದ್ದನು. ಈ ಕುರಿತು ಆಕೆ ಮೊದಲು ಇಟಲಿಯಲ್ಲಿ ದೂರು ನೀಡಿದ್ದರೂ ಅಲ್ಲಿನ ತನಿಖಾ ಸಂಸ್ಥೆಗಳಿಂದ ಸೂಕ್ತ ಮತ್ತು ಕ್ಷಿಪ್ರ ಸ್ಪಂದನೆ ಸಿಗಲಿಲ್ಲ. ಇದರಿಂದ ನಿರಾಶೆಗೊಂಡ ಸಂತ್ರಸ್ತೆ ಪಾವೋಲಾ ಬರ್ಟೋಲಿನಿ ಎಂಬುವವರು ನೇರವಾಗಿ ಭಾರತಕ್ಕೆ ಪ್ರಯಾಣಿಸಿ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಗುರುಗ್ರಾಮ ಸೈಬರ್ ಪೊಲೀಸರನ್ನು ಸಂಪರ್ಕಿಸಿದ್ದಾರೆ.

ಗುರುಗ್ರಾಮದಲ್ಲಿ ಸೈಬರ್ ವಿಭಾಗದ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ಗೌರವ್ ಫೋಗಟ್ ಅವರನ್ನು ಭೇಟಿಯಾದ ಪಾವೋಲಾ, ತಮಗುಂಟಾದ ಸಂಪೂರ್ಣ ಅನ್ಯಾಯವನ್ನು ವಿವರಿಸಿದ್ದಾರೆ. ದೂರು ಆಲಿಸಿದ ತಕ್ಷಣವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಭೇಟಿಯ ಬಳಿಕ ಸಂತ್ರಸ್ತೆಯು ಗುರುಗ್ರಾಮ ಪೊಲೀಸರ ಅಧಿಕೃತ ಸಾಮಾಜಿಕ ಜಾಲತಾಣದ ಪುಟದಲ್ಲಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಗುರುಗ್ರಾಮದಲ್ಲಿ ವಾಸವಾಗಿದ್ದೇನೆ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಅಂತಾರಾಷ್ಟ್ರೀಯ ಮಟ್ಟದ ಸೈಬರ್ ವಂಚನೆ ಎಸಗಿದ್ದಾನೆ. ಪ್ರೀತಿಯ ಹೆಸರಿನಲ್ಲಿ ನಂಬಿಸಿ ದೋಚುವುದು, ಬ್ಯಾಂಕ್ ಖಾತೆಗಳನ್ನು ಖಾಲಿ ಮಾಡಲು ನಕಲಿ ಇ-ಮೇಲ್ ಕಳುಹಿಸುವುದು ಸೇರಿದಂತೆ ಹಲವು ಅಕ್ರಮಗಳನ್ನು ಎಸಗಿದ್ದಾನೆ. ಈ ಬಗ್ಗೆ ದೂರು ನೀಡಲು ಇಟಲಿಯಿಂದ ನೇರವಾಗಿ ಇಲ್ಲಿಗೆ ಬಂದೆ. ಎಸಿಪಿ ಗೌರವ್ ಫೋಗಟ್ ಅವರು ತಕ್ಷಣ ಸ್ಪಂದಿಸಿ ತಮ್ಮ ತನಿಖಾ ತಂಡವನ್ನು ಸಜ್ಜುಗೊಳಿಸಿದರು. ಸೈಬರ್ ವಿಭಾಗದ ಪ್ರತಿಯೊಬ್ಬ ಸಿಬ್ಬಂದಿಯೂ ಅತ್ಯಂತ ವೃತ್ತಿಪರ ಹಾಗೂ ದಯಾಪರತೆಯಿಂದ ನಡೆದುಕೊಂಡರು” ಎಂದು ಬರ್ಟೋಲಿನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಟಲಿಯಲ್ಲಿ ಈ ಕುರಿತು ನೀಡಿದ್ದ ದೂರು ಎರಡು ದೇಶಗಳ ನಡುವಿನ ತಾಂತ್ರಿಕ ಪ್ರಕ್ರಿಯೆಗಳ ಕಾರಣಕ್ಕೆ ದೀರ್ಘಕಾಲ ವಿಳಂಬವಾಗುತ್ತಿತ್ತು ಎಂದು ತಿಳಿಸಿರುವ ಆಕೆ, ವಂಚಕನಿಗೆ ಕಠಿಣ ಶಿಕ್ಷೆಯಾಗಲಿ ಎಂಬ ಕಾರಣಕ್ಕೆ ಸಂಪೂರ್ಣ ತನಿಖೆಗೆ ಅಗತ್ಯವಿರುವ ಎಲ್ಲ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ದೇಶೀಯ ಹಾಗೂ ವಿದೇಶಿ ನಾಗರಿಕರಿಂದ ಬರುವ ಸೈಬರ್ ಅಪರಾಧದ ದೂರುಗಳನ್ನು ಗುರುಗ್ರಾಮ ಪೊಲೀಸರು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಿದ್ದಾರೆ. ಪ್ರಸ್ತುತ ಲಭ್ಯವಿರುವ ತಾಂತ್ರಿಕ ಸಾಕ್ಷ್ಯಾಧಾರಗಳು, ಬ್ಯಾಂಕ್ ಖಾತೆಯ ವಿವರಗಳು ಹಾಗೂ ಡಿಜಿಟಲ್ ಸಂವಹನಗಳ ಆಧಾರದ ಮೇಲೆ ಆರೋಪಿಯ ಹುಡುಕಾಟ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಎಂದು ಎಸಿಪಿ ಫೋಗಟ್ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular